Social Media Trending: ಮದುವೆಯಲ್ಲಿ ಎಲ್ಲರೂ ನೃತ್ಯ ಮಾಡಲು ಇಷ್ಟಪಡುತ್ತಾರೆ. ಭಾರತದ ಮದುವೆ ಮನೆಯಲ್ಲಿ ನೃತ್ಯದ ಸಂಭ್ರಮ ಇದ್ದೇ ಇರುತ್ತದೆ. ಮದುವೆಯಲ್ಲಿ ಅನೇಕರು ನೃತ್ಯ ಮಾಡುವುದನ್ನು ನೀವು ನೋಡಿರಬೇಕು. ಆದರೆ ವಯಸ್ಸಾದ ಮಹಿಳೆ ಅದ್ಭುತ ನೃತ್ಯ ಮಾಡುವುದನ್ನು ನೋಡಿದರೆ ನೀವು ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಿ. ಇದೀಗ ಅಜ್ಜಿಯೊಬ್ಬರು ಮದುವೆ ಮನೆಯಲ್ಲಿ ಉತ್ಸಾಹದಿಂದ ಡ್ಯಾನ್ಸ್‌ ಮಾಡುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video : ಡಿಜೆ ಹಾಡಿಗೆ ಹುಚ್ಚೆದ್ದು ಕುಣಿದ ಅಜ್ಜ.. ವಿಡಿಯೋ ನೋಡಿದ್ರೆ ನಗು ತಡೆಯೋಕೆ ಆಗಲ್ಲ!


ವಿಡಿಯೋದಲ್ಲಿ, ವಯಸ್ಸಾದ ಮಹಿಳೆಯೊಬ್ಬರು ಪಂಜಾಬಿ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಹಾಡಿಗೆ ತಕ್ಕದಾಗಿ ಅಜ್ಜಿಯ ನೃತ್ಯ ಅದ್ಭುತವಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.


 


 

 

 

 



 

 

 

 

 

 

 

 

 

 

 

A post shared by Shail Sharma (@shailarmy)


 


ಡ್ಯಾನ್ಸ್ ನೋಡಿ ಫಿದಾ ಆದ ನೆಟ್ಟಿಗರು : 


ಈ ವಿಡಿಯೋ ನೋಡಿದ ಅನೇಕರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ವಯಸ್ಸಿನಲ್ಲೂ ಎಷ್ಟೋ ಜನ ಅಜ್ಜಿಯ ಚೈತನ್ಯವನ್ನು ಕಂಡು ಹೊಗಳಿದ್ದಾರೆ. ಅವರ ಉತ್ಸಾಹ ನೋಡಿ ಎಲ್ಲರೂ ಅಭಿಮಾನಿಗಳಾಗುತ್ತಿದ್ದಾರೆ. ಮದುವೆಗೆ ಸಂಬಂಧಿಸಿದ ಇಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ತುಂಬಾ ಇಷ್ಟಪಡುತ್ತಾರೆ.


ಇದನ್ನೂ ಓದಿ : ಪಾರ್ಕ್‌ನಲ್ಲಿ ಕದ್ದು ಮುಚ್ಚಿ ಈ ಪ್ರೇಮಿಗಳು ಮಾಡಿದ ಕೆಲಸ ಆಯ್ತು ವೈರಲ್‌


ಈ ವಿಡಿಯೋ ಹಲವು ಸಾಮಾಜಿಕ ಜಾಲತಾಣ ಬಳಕೆದಾರರನ್ನು ರಂಜಿಸಿದೆ. ಈ ವಿಡಿಯೋವನ್ನು 2 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಲಕ್ಷಾಂತರ ಮಂದಿ ವಿಡಿಯೋವನ್ನು ಲೈಕ್ ಕೂಡ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿಯೂ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಕೆಲವು ಬಳಕೆದಾರರು ತಮ್ಮ 60 ನೇ ವಯಸ್ಸಿನಲ್ಲಿಯೂ ಈ ರೀತಿ ಇರಬೇಕೆಂದು ಬಯಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.