Flying Snake Viral Video: ಹಾವುಗಳಿಗೆ ಸಂಬಂಧಪಟ್ಟ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ ಕೆಲವೊಮ್ಮೆ ಹಾವುಗಳು ತಮ್ಮ ವರ್ತನೆಗಳಿಂದ ಜನರನ್ನು ಬೆಚ್ಚಿಬೀಳಿಸುತ್ತದೆ. ನಾವಿಂದು ಹೇಳಹೊರಟಿರುವ ವಿಷಯವೂ ಅಂತಹದ್ದೇ. ಈ ವಿಡಿಯೋದಲ್ಲಿ ಹಾವೊಂದು ಛಾವಣಿಯ ಮೇಲಿಂದ ಹಾರಿ ಮಾರುದ್ದ ಹೋಗಿರುವ ವಿಚಿತ್ರ ದೃಶ್ಯ ಕಾಣಿಸಿಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ರಾಶಿಯವರು ಕೈಗೆ ಕೆಂಪು ದಾರ ಕಟ್ಟಿದರೆ ಬ್ರಹ್ಮ-ವಿಷ್ಣು-ಮಹೇಶ್ವರರೇ ಜೊತೆ ನಿಂತಂತೆ! ಕಟ್ಟಿದ ಕ್ಷಣದಿಂದಲೇ ಅದೃಷ್ಟದತ್ತ ವಾಲುವುದು ಹಣೆಬರಹ


ಈ ವೀಡಿಯೊವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಎಂಬವರು ತಮ್ಮ ಟ್ವಿಟರ್ ಹ್ಯಾಂಡಲ್‌ʼನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಜೊತೆಗೆ ʼಇನ್‌ಕ್ರೆಡಿಬಲ್ʼ ಎಂದು ಬರೆದುಕೊಂಡಿದ್ದಾರೆ.


ಮನೆಯೊಂದರ ಮೇಲ್ಛಾವಣಿಯ ಅಂಚಿನಲ್ಲಿ ಹಾವು ಕುಳಿತಿರುವುದು ವಿಡಿಯೋದಲ್ಲಿ ಕಾಣಬಹುದು. ಕೊಂಚ ಸಮಯದ ಬಳಿಕ ಟೆರೇಸ್‌ʼನ ತುದಿಯನ್ನು ತಲುಪಿದ ಆ ಹಾವು ಅಲ್ಲಿಂದ ಹಾರಿದೆ. ಹಾವು ನೆಗೆದು ಮಾರುದ್ದ ಹೋಗಿ ರಸ್ತೆಯ ಮೇಲೆ ಬಿದ್ದಿರುವ ದೃಶ್ಯ ಕಾಣಿಸುತ್ತಿದೆ. ಒಂದು ವೇಳೆ ಅದೇ ಸಂದರ್ಭದಲ್ಲಿ ಯಾರಾದರೂ ಆ ದಾರಿಯಲ್ಲಿ ಬರುತ್ತಿದ್ದರೆ ಭಯದಲ್ಲಿ ಓಡಿ ಹೋಗುತ್ತಿದ್ದರೇನೋ…


ಇದನ್ನೂ ಓದಿ: 82 ಅಡಿ ಸಮುದ್ರದಾಳದಲ್ಲಿ 'ಅಮ್ಮು' ಟೈಟಲ್ ಅನಾವರಣ: ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದ ಚಿತ್ರತಂಡ


ಈ ಅಪರೂಪದ ವಿಡಿಯೋ ಟ್ವಿಟರ್‌ʼನಲ್ಲಿ ಪೋಸ್ಟ್ ಮಾಡಿದ ತಕ್ಷಣ, ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾವು ಕೂಡ ಹೀಗೆ ಜಿಗಿಯಬಹುದೇ ಎಂದು ಜನ ಅಚ್ಚರಿಪಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ