Viral Video: ಜಿಮ್‌ನಲ್ಲಿ ಕಾರ್ಡಿಯೋ ಸೆಷನ್‌ನಲ್ಲಿ ಭಾಗಿಯಾಗಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ದುರಂತ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಜಿಮ್‌ನಲ್ಲಿ ಸಂಭವಿಸಿದೆ. ಕನ್ವಾಲ್ಜಿತ್ ಸಿಂಗ್ ಬಗ್ಗಾ (54) ಮೃತ ವ್ಯಕ್ತಿಯಾಗಿದ್ದು, ವೃತ್ತಿಯಲ್ಲಿ ಅವರು ಉದ್ಯಮಿಯಾಗಿದ್ದರು ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ವೈರಲ್ ವಿಡಿಯೋದಲ್ಲಿ (Viral Video) ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಕನ್ವಾಲ್ಜಿತ್ ಸಿಂಗ್ ಬಗ್ಗಾ ಇದ್ದಕ್ಕಿದ್ದಂತೆ ಆಯಾಸಗೊಂಡಂತೆ ಕಾಣಿಸಿಕೊಳ್ಳುತ್ತಾರೆ. ಮೊದಲಿಗೆ ಕೂಡಲೇ ಸ್ವಲ್ಪ ಹಿಂದೆ ಸರಿದ ಬಗ್ಗಾ ನಂತರ ಪಿಲ್ಲರ್‌ಗೆ ಒರಗಿವಿಶ್ರಮಿಸಲು ಯತ್ನಿಸುವ ಸಂದರ್ಭದಲ್ಲಿ ಹೃದಯ ಸ್ತಂಭನದಿಂದಾಗಿ ಬಗ್ಗಾ ಹಠಾತ್ ಕುಸಿದು ಬೀಳುತ್ತಾರೆ. 


ಇದನ್ನೂ ಓದಿ- ಪ್ರವಾಸಿಗರ ಮುಂದೆ ಕಾಡೆಮ್ಮೆಯನ್ನು ಚಪ್ಪರಿಸಿ ತಿಂದ ಹುಲಿರಾಯ


ಕನ್ವಾಲ್ಜಿತ್ ಸಿಂಗ್ ಬಗ್ಗಾ (Kanwaljit Singh Bagga) ಅವರು ಕುಸಿದು ಬೀಳುವುದನ್ನು ಗಮನಿಸಿದ ಇತರರು ಕೂಡಲೇ  ಓಡಿಬಂದು ಅವರ ಸಹಾಯಕ್ಕೆ ಮುಂದಾಗುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿಯೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವರದಿಯಾಗಿದೆ. 


ಶನಿವಾರ (ಜುಲೈ 20) ಬೆಳಿಗ್ಗೆ ಈ ದುರಂತ ಸಂಭವಿಸಿದ್ದು, ಜಿಮ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. 


https://zeenews.india.com/kannada/india/a-train-came-in-the-middle-of-a-photo-shoot-a-couple-jumped-into-a-90-feet-ditch-the-video-went-viral-224020


ಇದನ್ನೂ ಓದಿ- ಕೊನೆಗೂ ಸಾನಿಯಾ ಮಿರ್ಜಾ ಕಾಯುವಿಗೆ ಸಿಕ್ಕಿತು ಫಲ..ಮುಖದಲ್ಲಿ ಅರಳಿತು ಮಂದಹಾಸ..ವೈರಲ್‌ ಆಯ್ತು ಮಿಸ್ಟರಿ ವ್ಯಕ್ತಿಯೊಂದಗಿನ ಚಿತ್ರ..


ಕುಟುಂಬ ಮೂಲಗಳಿಂದ ಲಭ್ಯವಿರುವ ಮಾಹಿತಿ ಪ್ರಕಾರ, ಮೃತ ಕನ್ವಾಲ್ಜಿತ್ ಸಿಂಗ್ ಬಗ್ಗಾ   ಫಿಟ್‌ನೆಸ್ ಉತ್ಸಾಹಿ ಮತ್ತು ನಿಯಮಿತವಾಗಿ ಜಿಮ್‌ಗೆ ಹೋಗುತ್ತಿದ್ದರು. ತಮ್ಮ ದೈನಂದಿನ ದಿನಚರಿಯಂತೆಯೇ ಶನಿವಾರವೂ ಅವರು ಜಿಮ್‌ಗೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.