Rare 5rs note : ಹಳೆಯ ನೋಟುಗಳು, ವಿಶೇಷವಾಗಿ ವಿಶೇಷ ಸರಣಿ ಸಂಖ್ಯೆಗಳು ಅಥವಾ ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡಿದ್ದರೆ ಅವುಗಳನ್ನು ಸಂಗ್ರಹ ಮಾಡಲಾಗುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ಪ್ರಪಂಚದಾದ್ಯಂತದ ಇಂತಹ ಸಂಗ್ರಾಹಕರು ಮತ್ತು ಉತ್ಸಾಹಿಗಳು ಈ ಅಪರೂಪದ ನೋಟುಗಳಿಗಾಗಿ ಹೆಚ್ಚಿನ ಮೊತ್ತವನ್ನು ಪಾವತಿಸಿ ಖರೀದಿಸುತ್ತಾರೆ.. 


COMMERCIAL BREAK
SCROLL TO CONTINUE READING

ಅದರಲ್ಲೂ ಈ ಹಳೆಯ 5 ರೂಪಾಯಿ ನೋಟುಗಳಿಗೆ ವಿಶೇಷ ಸ್ಥಾನವಿದೆ. ಈ ನೋಟುಗಳನ್ನು ಖರೀದಿಸಲು ಬಯಸುವ ಸಂಗ್ರಹಕಾರರು, ವಿಶಿಷ್ಟ ಸರಣಿ ಸಂಖ್ಯೆ, ಅವುಗಳ ಮೇಲೆ ಮುದ್ರಿಸಲಾದ ಕೆಲವು ವಿಶೇಷ ಗುರುತುಗಳು ಅಥವಾ ಐತಿಹಾಸಿಕ ಮಹತ್ವಗಳನ್ನು ನೋಡಿ ಲಕ್ಷ ಲಕ್ಷ ಹಣ ಕೊಟ್ಟು ಖರೀದಿ ಮಾಡುತ್ತಾರೆ.. 


ಇದನ್ನೂ ಓದಿ:ಟೀ ಬಿಟ್ಟು ದಿನಕ್ಕೆ 3 ಬಾರಿ ಈ ರೀತಿ ಕಾಫಿ ಮಾಡಿಕೊಂಡು ಕುಡಿದ್ರೆ, ಈ 4 ಗಂಭೀರ ಕಾಯಿಲೆಗಳು ನಿಮ್ಮಿಂದ ದೂರ..!


ಮೊದಲೇ ಹೇಳಿದಂತೆ ಹಳೆಯ 5 ರೂಪಾಯಿ ನೋಟಿನ ಮೌಲ್ಯವು ಅದರ ಸರಣಿ ಸಂಖ್ಯೆ ಮತ್ತು ವಿನ್ಯಾಸದ ವೈಶಿಷ್ಟ್ಯಗಳನ್ನು ಅವಲಂಬಿಸಿರುತ್ತದೆ. ಉದಾರಹಣೆ ಅಂದ್ರೆ, ನೋಟಿನ ಕ್ರಮಸಂಖ್ಯೆ 786 ಇರುವುದು.. ಇಸ್ಲಾಂನಲ್ಲಿ 786 ಸಂಖ್ಯೆಗೆ ಬಹಳ ಮಹತ್ವ ಇದೆ. ಈ ಸಂಖ್ಯೆಯನ್ನು ಹೊಂದಿರುವ ನೋಟುಗಳಿಗೆ ಭಾರೀ ಡಿಮ್ಯಾಂಡ್‌.. 


ನಿಮ್ಮ ಬಳಿ ಈ ಸಂಖ್ಯ ಹೊಂದಿರುವ ಹಳೆಯ 5 ರೂ. ನೋಟು ಇದ್ದರೆ, ಅದರ ಮೌಲ್ಯವು ಒಂದು ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಒಂದು ವೇಳೆ, 123456 ನಂತಹ ಸರಣಿ ಸಂಖ್ಯೆಗಳು ಸಹ ನಿಮ್ಮ ಬಳಿ ಇರುವ ನೋಟಿನ ಮೇಲೆ ಇದ್ದರೆ, ಅದಕ್ಕೂ ಒಂದು ಬೆಲೆ ಇರುತ್ತದೆ.  


ಕೆಲವು 5 ರೂಪಾಯಿ ನೋಟುಗಳಲ್ಲಿ, ಟ್ರಾಕ್ಟರ್‌ ನಡೆಸುತ್ತಿರುವ ರೈತನ ಫೋಟೋ ಇದೆ. ಇದು ಸಂಗ್ರಹಕಾರರನ್ನು ಆಕರ್ಷಿಸುತ್ತದೆ. ಅಷ್ಟೇ ಅಲ್ಲ, ಈ ನೋಟಿನ ಸ್ಥಿತಿ ಅದರ ಮೌಲ್ಯವನ್ನು ನಿರ್ಧರಿಸುತ್ತದೆ. ಅಂದರೆ ಹರಿದಿರಬಾರದು ಮತ್ತು ಹೆಚ್ಚು ಬಳಕೆಯಾಗಿರಬಾರದು..  


ಇದನ್ನೂ ಓದಿ:


ಮಾರಾಟ ಮಾಡುವುದು ಹೇಗೆ? : ನಿಮ್ಮ ಹಳೆಯ ಕರೆನ್ಸಿ ನೋಟುಗಳನ್ನು ಮಾರಾಟ ಮಾಡಲು ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹರಾಜು ವೆಬ್‌ಸೈಟ್‌ಗಳಿವೆ. eBay, CoinBazzar ಮತ್ತು ಇತರ ನಾಣ್ಯಶಾಸ್ತ್ರದ ಸೈಟ್‌ಗಳಂತಹ ವೆಬ್‌ಸೈಟ್‌ಗಳು ಅಂತಹ ವಸ್ತುಗಳ ಸಂಗ್ರಹಕಾರರ ಜಾಗತಿಕ ಪ್ರೇಕ್ಷಕರನ್ನು ತಲುಪಲು ನಿಮಗೆ ಸಹಾಯ ಮಾಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.