Viral video : ಹೆಂಡತಿಯನ್ನು ಹೆಗಲ ಮೇಲೆ ಹೊತ್ತು ತಿರುಮಲ ಬೆಟ್ಟ ಹತ್ತಿದ ಪತಿರಾಯ.!
Viral Video : ತನ್ನ ಹೆಂಡತಿಯನ್ನು ಹೆಗಲ ಮೇಲೆ ಹೊತ್ತುಕೊಂಡ ಪತಿ ತಿರುಮಲ ಬೆಟ್ಟದ ಮೆಟ್ಟಿಲು ಹತ್ತಿದ್ದು, ನೋಡುಗರನ್ನು ನಿಬ್ಬೆರಗಾಗಿಸಿದ್ದಾರೆ.
Man Carries His Wife on Shoulders: ತನ್ನ ಹೆಂಡತಿನಿಯನ್ನು ಹೆಗಲ ಮೇಲೆ ಹೊತ್ತುಕೊಂಡ ಪತಿ ತಿರುಮಲ ಬೆಟ್ಟದ ಮೆಟ್ಟಿಲು ಹತ್ತಿದ್ದು, ನೋಡುಗರನ್ನು ನಿಬ್ಬೆರಗಾಗಿಸಿದ್ದಾರೆ. ಈ ಪತಿಯ ಹೆಸರು ಸತ್ತಿ ಬಾಬು ಅವರ ಪೂರ್ಣ ಹೆಸರು ವರದ ವೀರ ವೆಂಕಟ ಸತ್ಯನಾರಾಯಣ. ಸಂಬಂಧಿಕರು ಮತ್ತು ಸ್ನೇಹಿತರು ಅವರನ್ನು ಪ್ರೀತಿಯಿಂದ ಸತ್ತಿ ಬಾಬು ಎಂದು ಕರೆಯುತ್ತಾರೆ. ಕಡಿಯಾಪುಲಂಕ ಸತ್ತಿಬಾಬು ಅವರ ಹುಟ್ಟೂರು ಪೂರ್ವ ಗೋದಾವರಿ ಜಿಲ್ಲೆಯ ಕಡಿಯಂ ಮಂಡಲ. ಲಾರಿ ಸಾರಿಗೆ ಮಾಲೀಕರು.
ಇದನ್ನೂ ಓದಿ : Viral Love Story : 78 ವರ್ಷದ ಅಜ್ಜನನ್ನು 3 ವರ್ಷ ಪ್ರೀತಿಸಿ ಮದುವೆಯಾದ 18 ರ ಬಾಲೆ.!
ಸತ್ತಿ ಬಾಬು ಇತ್ತೀಚೆಗೆ ತಿರುಮಲಕ್ಕೆ ದೇವರ ದರ್ಶನಕ್ಕೆ ಹೋಗಿದ್ದರು. ತಿರುಮಲಕ್ಕೆ ಹೋಗುವ ಅನೇಕ ಭಕ್ತರು ಮೆಟ್ಟಿಲುಗಳ ಮೂಲಕ ಬೆಟ್ಟದ ತುದಿಗೆ ಬರುವ ಹರಕೆ ಹೊರುತ್ತಾರೆ. ಇದು ಅಲ್ಲಿನ ಭಕ್ತಾದಿಗಳ ಸಾಮಾನ್ಯ ಪದ್ಧತಿ. ಹಾಗೆಯೇ ಸತ್ತಿ ಬಾಬು ದಂಪತಿ ಕೂಡ ಮೆಟ್ಟಿಲುಗಳ ಮೂಲಕ ತಿರುಮಲ ಬೆಟ್ಟದ ತುದಿಗೆ ಪ್ರಯಾಣ ಬೆಳೆಸಿದರು. ಮಧ್ಯದಲ್ಲಿ ಸ್ವಲ್ಪ ದೂರ ಕ್ರಮಿಸಿದ ನಂತರ ಸತ್ತಿ ಬಾಬು ಅವರ ಪತ್ನಿ ಲಾವಣ್ಯ ಅವರು ಸುಸ್ತಾದರು. ಮೆಟ್ಟಿಲು ಹತ್ತುವಲ್ಲಿ ತಮ್ಮ ಪತಿಗಿಂತ ಹಿಂದುಳಿದರು. ನಂತರ ದಂಪತಿಗಳ ನಡುವೆ ಸವಾಲು ಬಂದಿತು. ಪತ್ನಿ ಲಾವಣ್ಯ ಪತಿಗೆ ಚಾಲೆಂಜ್ ಮಾಡಿದ್ರು. ನೀನು ನನ್ನನ್ನು ಎತ್ತಿಕೊಂಡು ವೇಗವಾಗಿ ಹೋದರೆ ನೀನು ಶ್ರೇಷ್ಠ ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಸತ್ತ ಬಾಬುಗೆ ಲಾವಣ್ಯ ಸವಾಲೆಸೆದರು.
ಪತ್ನಿ ಲಾವಣ್ಯ ಎಸೆದ ಸವಾಲನ್ನು ಅರೆಕ್ಷಣ ತಡ ಮಾಡದೆ ಸ್ವೀಕರಿಸಿದ ಸತ್ತಿ ಬಾಬು ಆಕೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಬೆಟ್ಟ ಹತ್ತತೊಡಗಿದರು. ಅವರು ಆರೋಗ್ಯದ ದೃಷ್ಟಿಯಿಂದ ತುಂಬಾ ಫಿಟ್ ಆಗಿದ್ದ ಕಾರಣ ಈ ಚಾಲೆಂಜ್ ಸುಲಭವೆನಿಸಿತೋ ಏನೋ! ಇಲ್ಲವಾದರೆ ತಿರುಮಲ ಬೆಟ್ಟದ ಮೆಟ್ಟಿಲುಗಳಿಗೆ ತೆರಳುವ ಭಕ್ತರು ಸುಸ್ತಾಗಿ ಮಧ್ಯೆ ಮಧ್ಯೆ ಬಿಡುವು ಮಾಡಿಕೊಳ್ಳುತ್ತಾರೆ. ಆದರೆ ಸತ್ತಿ ಬಾಬು ತನ್ನ ಹೆಂಡತಿ ಲಾವಣ್ಯಳನ್ನು ಹೆಗಲ ಮೇಲೆ ಹೊತ್ತುಕೊಂಡು ಮೆಟ್ಟಿಲು ಹತ್ತುತ್ತಲೇ ಇದ್ದರು. ಆ ದೃಶ್ಯ ನೋಡಿ ಜನ ಬೆಚ್ಚಿಬಿದ್ದರು.
ಇದನ್ನೂ ಓದಿ : Funny Video : ಮೊಬೈಲ್‌ಗಾಗಿ ಮಗುವಿನ ಜೊತೆ ಮಂಗನ ಜಗಳ.. ವಿಡಿಯೋ ವೈರಲ್.!
ಸತ್ತಿ ಬಾಬು ಜಾಣತನದಿಂದ ಮೆಟ್ಟಿಲು ಹತ್ತುತ್ತಿರುವ ರೀತಿ ನೋಡಿ ಇವರಿಬ್ಬರೂ ಹೊಸದಾಗಿ ಮದುವೆಯಾದ ಜೋಡಿ ಎಂದು ಅನಿಸುತ್ತದೆ..!! ಅಂತ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಜೋಡಿಯ ಮದುವೆಯಾಗಿ 24 ವರ್ಷಗಳಾಗಿವೆ. ಅವರ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆಯಾಗಿದೆ. ಇವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಲ್ಲಾ ನೆಟಿಜನ್‌ಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.