Latest Trending News: ಕೊರೊನಾ ಕಾಲಾವಧಿ ವಿಶ್ವದ ಎಲ್ಲಾ ಜನರ ಆದಾಯದ ಮೇಲೆ ವಿಪರೀತ ಪ್ರಭಾವ ಬೀರಿ, ಪ್ರತಿಯೊಬ್ಬರ ಬಜೆಟ್ ಅನ್ನೇ ಬುಡಮೇಲು ಮಾಡಿರುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದಾದ ಬಳಿಕ ನಿರಂತರವಾಗಿ ಹೆಚ್ಚಾಗುತ್ತಿರುವ ಹಣದುಬ್ಬರ ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸುತ್ತಿದೆ. ಕೆಲವರು ಹಣದುಬ್ಬರವನ್ನು ಸರಿದೂಗಿಸಲು ತಮ್ಮ ವೆಚ್ಚವನ್ನು ಕಡಿತಗೊಳಿಸುತ್ತಿದ್ದರೆ, ಕೆಲವರು ತಮ್ಮ ಉಳಿತಾಯದಿಂದ ಹಣವನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಇದೇ ವೇಳೆ ಹಣದುಬ್ಬರವನ್ನು ಎದುರಿಸಲು ಕೆಲವು ಜನರು ವಿಚಿತ್ರವಾದ ಮಾರ್ಗಗಳನ್ನು ಕೂಡ ಅನುಸರಿಸುತ್ತಿದ್ದಾರೆ. ಯುನೈಟೆಡ್ ಕಿಂಗ್‌ಡಂನಲ್ಲಿ ವಾಸಿಸುವ ಮಹಿಳೆಯೊಬ್ಬರು ಅಂತಹ ಒಂದು ವಿಚಿತ್ರ ವಿಧಾನವನ್ನು ಅನ್ವೇಷಿಸಿದ್ದಾಳೆ. ಆದರೆ, ಆಕೆ ಅನುಸರಿಸಿದ ವಿಧಾನ ಇದೀಗ ವಿಶ್ವಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅಷ್ಟಕ್ಕೂ ಮಹಿಳೆ ಮಾಡಿದ್ದಾದರೂ ಏನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ವೆಬ್‌ಸೈಟ್ ರಚಿಸಿ ಬಾಡಿಗೆಗೆ ಪತಿಯನ್ನೇ ನೇಮಿಸಿದ ಪತ್ನಿ
'ಮಿರರ್' ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, ಲಾರಾ ಯಂಗ್ ಎಂಬ ಮಹಿಳೆ ಯುನೈಟೆಡ್ ಕಿಂಗ್‌ಡಂನ ರಹವಾಸಿಯಾಗಿದ್ದಾಳೆ. ಕೊರೋನಾದ ಕಾರಣ ಹಣದುಬ್ಬರ ಹೆಚ್ಚಾಯಿತು ಮತ್ತು ಕಡಿಮೆ ಆದಾಯದಿಂದಾಗಿ ಆಕೆಯ ಬಜೆಟ್ ತೊಂದರೆಗೆ ಸಿಲುಕಿದ ಬಳಿಕ ಮಹಿಳೆ ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದಾಳೆ. ಆದರೆ, ಶೀಘ್ರದಲ್ಲೇ ಆಕೆ ತನ್ನ ಆದಾಯವನ್ನು ಸರಿದೂಗಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾಳೆ. ತನ್ನ ಗಂಡನ ಸಂಪೂರ್ಣ ಸಾಮರ್ಥ್ಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದನ್ನು ಆಕೆ ಯೋಚಿಸಿದ್ದಾಳೆ ಮತ್ತು ಇದರ ನಂತರ ಆಕೆ "ರೆಂಟ್ ಮೈ ಹ್ಯಾಂಡಿ ಹಸ್ಬೆಂಡ್" ಎಂಬ ವೆಬ್‌ಸೈಟ್ ಅನ್ನು ರಚಿಸಿದ್ದಾಳೆ. ಈ ವೆಬ್‌ಸೈಟ್‌ನಲ್ಲಿ, ಆಕೆ ತನ್ನ ಗಂಡನನ್ನು ಇತರ ಮಹಿಳೆಯರಿಗೆ ಬಾಡಿಗೆಗೆ ನೀಡಲು ಪ್ರಾರಂಭಿಸಿದ್ದಾಳೆ.


ಇದನ್ನೂ ಓದಿ-Baba Vanga Predictions: ಬಾಬಾ ವಂಗಾ ಭವಿಷ್ಯವಾಣಿ ನಿಜ ಸಾಬೀತಾಗುತ್ತಿದೆ, ವಿಶ್ವದ ಅಂತ್ಯ ಸಮೀಪಿಸಿದೆಯಾ?


ಈ ರೀತಿಯ ಕಲ್ಪನೆ ಬಂದಿದ್ದಾದರೂ ಎಲ್ಲಿಂದ?
ಒಂದು ದಿನ ಪಾಡ್‌ಕ್ಯಾಸ್ಟ್ ಕೇಳುವಾಗ ಆಕೆಗೆ ಈ ಯೋಚನೆ ಬಂತು ಎಂದು ಮಹಿಳೆ ಹೇಳಿದ್ದಾಳೆ, ಅದರಲ್ಲಿ ಇತರರಿಗೆ ಫ್ಲಾಟ್-ಪ್ಯಾಕ್ ಪೀಠೋಪಕರಣಗಳನ್ನು ಒದಗಿಸುವ ವ್ಯಕ್ತಿಯ ಕಥೆಯನ್ನು ತಾನು ಕೇಳಿದೆ ಎಂದು ಲಾರಾ ಹೇಳುತ್ತಾರೆ. ಇದರಿಂದ ಪ್ರೇರಿತಳಾದ ಆಕೆಯೂ ಕೂಡ ವಿಭಿನ್ನವಾಗಿ ಯೋಜನೆ ರೂಪಿಸಿ ಪತಿಯನ್ನು ಬಾಡಿಗೆ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದಾಳೆ. ಒಂದು ದಿನ ಪತಿಯನ್ನು ಎರವಲು ನೀಡಲು 41 ವರ್ಷದ ಪತ್ನಿ ಸುಮಾರು 3365 ರೂ. ಪಡೆದುಕೊಳ್ಳುತ್ತಾಳೆ. ಆದ್ರೆ,  ಈ ವಿಚಾರ ನೆಟ್ಟಿಗರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.


ಇದನ್ನೂ ಓದಿ-ವಿಶ್ವದ ಅತ್ಯಂತ ಭಯಾನಕ ಜೈಲು: ದಯಾಮರಣಕ್ಕೆ ಬೇಡಿಕೆ ಇಡ್ತಾನೆ ಇಲ್ಲಿನ ಸೆರೆವಾಸಿ!


ತನ್ನ ಗಂಡನ ವಿಶೇಷತೆಗಳನ್ನು ಉಲ್ಲೇಖಿಸಿದ ಲಾರಾ
ಲಾರಾ ತನ್ನ ಪತಿಗೆ ಬಾಡಿಗೆಗೆ ನೀಡಲು ಆತನ ಅನೇಕ ಅರ್ಹತೆಗಳನ್ನು ಸಹ ಪಟ್ಟಿ ಮಾಡಿದ್ದಾಳೆ. ತನ್ನ ಪತಿ ಜೇಮ್ಸ್ ತನ್ನದೇ ಆದ ಯೋಜನೆಗಳನ್ನು ಮಾಡುವಲ್ಲಿ ಪರಿಣಿತ ಎಂದು ಅವಳು ಹೇಳುತ್ತಾಳೆ. ಅವರು ಮನೆಕೆಲಸಗಳಲ್ಲಿ ಸಹ ಪ್ರವೀಣರಾಗಿದ್ದಾರೆ, ಐಷಾರಾಮಿ ಡೈನಿಂಗ್ ಟೇಬಲ್ ಅನ್ನು ನಿರ್ವಹಿಸುತ್ತಾರೆ, ಚಿತ್ರಕಲೆ, ಅಲಂಕಾರ, ಟೈಲಿಂಗ್ ಮತ್ತು ಕಾರ್ಪೆಟ್ ಅಳವಡಿಕೆಯಲ್ಲಿ ಪರಿಣತಿ ಹೊಂದಿದ್ದಾರೆ. ಮನೆ ಮತ್ತು ತೋಟದ ಸುತ್ತಲೂ ಕೆಲಸ ಮಾಡುವಲ್ಲಿಯೂ ಆತ ನಿಪುಣ ಎಂದು ಎಂದು ಲಾರಾ ಹೇಳುತ್ತಾಳೆ. ಹೀಗಾಗಿ ಆತನ ಆ ಕೌಶಲ್ಯಗಳನ್ನು ಏಕೆ ಬಳಸಬಾರದು ಮತ್ತು ಅವುಗಳನ್ನು ಬಳಸಿಕೊಳ್ಳಲು ನಾನು ಯೋಚಿಸಿದೆ. ಜೇಮ್ಸ್‌ನನ್ನು ಬಾಡಿಗೆಗೆ ಪಡೆದುಕೊಳ್ಳಲು ಅನೇಕ ಜನರು ತನ್ನನ್ನು ಸಂಪರ್ಕಿಸಿರುವುದಾಗಿ ಲಾರಾ ಹೇಳುತ್ತಾಳೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ