Surkheda Unique Marriage Ritual:


COMMERCIAL BREAK
SCROLL TO CONTINUE READING

ಭಾರತೀಯ ವಿವಾಹಗಳನ್ನು ಸಾಮಾನ್ಯವಾಗಿ ಹಬ್ಬಗಳಾಗಿ ಆಚರಿಸಲಾಗುತ್ತೆ. ಅಲ್ಲಿ ಬೇರೆ ಬೇರೆ ಕುಟುಂಬಗಳು ಮತ್ತು ಸ್ನೇಹಿತರು ಇಬ್ಬರು ವ್ಯಕ್ತಿಗಳು ಒಂದಾಗುವ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ಸೇರುತ್ತಾರೆ. ವಿನೋದ ಆಚರಣೆಗಳು ಮತ್ತು ಸಂಪ್ರದಾಯಗಳ ಶ್ರೀಮಂತ ಇತಿಹಾಸದ ಮೆಲುಕಿನೊಂದಿಗೆ ವಧು ಮತ್ತು ವರರು ತಮ್ಮ ಕುಟುಂಬಗಳೊಂದಿಗೆ ಶಾಶ್ವತವಾದ ನೆನಪುಗಳನ್ನು ಸೃಷ್ಟಿಸುತ್ತಾರೆ. ಆದರೂ, ಗುಜರಾತ್‌ನಲ್ಲಿ ಸಾಂಪ್ರದಾಯಿಕ ವಿವಾಹ ಪದ್ಧತಿಗೆ ವಿಶಿಷ್ಟ ಹಾಗೂ ಬೇರೆಯದೇ ಆದ ಪರಿಭಾಷೆ ಮತ್ತು ತಿರುವನ್ನು ನೀಡುವ ಹಳ್ಳಿಯೊಂದಿದೆ. ಅಲ್ಲಿ ವರನ ಸಹೋದರಿ ವಿವಾಹದ ಶಾಸ್ತ್ರಗಳಲ್ಲಿ ವರನ ಪರವಾಗಿ ಭಾಗವಹಿಸುವುದು ವಿಶೇಷ.


ಭಾರತದಲ್ಲಿ ವಿವಾಹಗಳನ್ನು ಇಬ್ಬರು ವ್ಯಕ್ತಿಗಳ ನಡುವೆ ಮಾತ್ರವಲ್ಲದೆ ಅವರ ಕುಟುಂಬಗಳ ನಡುವೆಯೂ ಪವಿತ್ರ ಬಂಧನವೆಂದು ಪರಿಗಣಿಸಲಾಗುತ್ತದೆ. ಆದ್ರೆ ಸುರ್ಖೇಡಾ, ಸನದಾ ಮತ್ತು ಅಂಬಲ್ ಎಂಬ ಗುಜರಾತ್‌ನ ಮೂರು ಬುಡಕಟ್ಟು ಹಳ್ಳಿಗಳ ಮದುವೆಗಳಲ್ಲಿ ವಿಭಿನ್ನ ಪದ್ಧತಿ ಅನುಸರಿಸಲಾಗುತ್ತದೆ. ಈ ಹಳ್ಳಿಗಳಲ್ಲಿ, ವರನ ಸಹೋದರಿ ಮದುವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ತನ್ನ ಸಹೋದರನ ಜೀವನಕ್ಕೆ ತಾನೇ ಮುನ್ನುಡಿ ಬರೆಯುತ್ತಾಳೆ.


ಇದನ್ನೂ ಓದಿ: 70 ವರ್ಷದ ವರನಿಗೆ 30 ವರ್ಷದ ವಧು... ಹಲ್ಲಿಲ್ಲದಿದ್ದರೂ ಈ ತಾತನ ನಗುವಿಗಿಲ್ಲ ಕೊರತೆ!


ಈ ವಿಶಿಷ್ಟ ಸಂಪ್ರದಾಯದ ಪ್ರಕಾರ, ವರನ ಅವಿವಾಹಿತ ಸಹೋದರಿ ಅಥವಾ ವರನ ಕುಟುಂಬದ ಯಾವುದೇ ಅವಿವಾಹಿತ ಮಹಿಳೆ ಮದುವೆ ಸಮಾರಂಭದಲ್ಲಿ ವರನ ಬದಲಾಗಿ ಪಾಲ್ಗೊಳ್ಳುತ್ತಾಳೆ. ಅವಳು ಸಹೋದರನ ಪರವಾಗಿ ಮದುವೆಯ ಆಚರಣೆಗಳನ್ನು ನಿರ್ವಹಿಸುತ್ತಾಳೆ. ವರನಿಗೆ ತನ್ನ ತಾಯಿಯೊಂದಿಗೆ ಮನೆಯಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟು, ಸಹೋದರಿಯೇ ಮದುವೆಯ ಮೆರವಣಿಗೆಯಲ್ಲಿ ಭಾಗವಹಿಸುತ್ತಾಳೆ. ವಧು ಜೊತೆ ತಾನೇ ವಿವಾಹವನ್ನು ಕೂಡ ಮಾಡಿಕೊಂಡು ಮನೆಗೆ ಕರೆದೊಯ್ಯುತ್ತಾಳೆ. ಸುರ್ಖೇಡ ಗ್ರಾಮದ ನಿವಾಸಿ ಕಾಂಜಿಭಾಯಿ ರಥ್ವಾ ಈ ಅಪರೂಪದ ಪದ್ಧತಿಯ ಬಗ್ಗೆ ಬೆಳಕು ಚೆಲ್ಲುತ್ತಾರೆ. “ಒಬ್ಬ ವರನು ಸಾಂಪ್ರದಾಯಿಕವಾಗಿ ಮಾಡುವ ಎಲ್ಲಾ ಆಚರಣೆಗಳನ್ನು ಅವನ ಸಹೋದರಿ ಮಾಡುತ್ತಾಳೆ. ಅವಳು ತನ್ನ ಸಹೋದರನ ಬದಲಿಗೆ ವಧುವಿನ ಜೊತೆ ತಾನೇ  ಮದುವೆ ಆಗುತ್ತಾಳೆ.


ಸುಖೇಡಾ ಗ್ರಾಮದ ಮುಖ್ಯಸ್ಥ ರಾಮ್‌ಸಿಂಗ್‌ಭಾಯ್ ರಾಥ್ವಾ ಈ ಸಂಪ್ರದಾಯದ ಮಹತ್ವವನ್ನು ಒತ್ತಿ ಹೇಳುತ್ತಾರೆ. "ಒಂದೆರಡು ಬಾರಿ ಕೆಲವರು ಸಂಪ್ರದಾಯವನ್ನು ಅನುಸರಿಸದಿರಲು ಪ್ರಯತ್ನಿಸಿದ್ದಾರೆ. ಒಂದೋ ಅವರ ವಿವಾಹ ಮುರಿದು ಕೊನೆಗೊಳ್ಳುತ್ತದೆ ಅಥವಾ ಅವರ ಕುಟುಂಬ ಜೀವನವು ಸರಿಯಾಗಿ ನಡೆಯುವುದಿಲ್ಲ. ಅಥವಾ ಹಲವಾರು ರೀತಿಯ ಸಮಸ್ಯೆಗಳು ಸಹ ಉದ್ಭವಿಸುತ್ತವೆ. ಎಂದು ಹೇಳುತ್ತಾರೆ. ಹೆಚ್ಚುವರಿ ವರದಿಗಳ ಪ್ರಕಾರ, ವರನು ತನ್ನ ಮದುವೆಗೆ ದೈಹಿಕವಾಗಿ ಹಾಜರಾಗದಿದ್ದರೂ, ಅವನು ಶೆರ್ವಾನಿ ಹಾಕಿಕೊಂಡು, ಪೇಟ ಧರಿಸಿ ಮತ್ತು ಸಾಂಪ್ರದಾಯಿಕ ಕತ್ತಿಯನ್ನು ಹಿಡಿದು, ಮನೆಯಲ್ಲಿ ತಾಳ್ಮೆಯಿಂದ ಕಾಯುತ್ತಾನೆ. ಈ ಆಚರಣೆಯು ಗ್ರಾಮದ ಪುರುಷ ದೇವತೆಗಳು ಬ್ರಹ್ಮಚಾರಿಗಳು ಎಂಬ ನಂಬಿಕೆಯಿಂದ ಬೇರೂರಿದೆ. ಗೌರವದ ಸಂಕೇತವಾಗಿ ವರರನ್ನು ಮನೆಯಲ್ಲಿಯೇ ಇರಲು ಪ್ರೇರೇಪಿಸಲಾಗುತ್ತದೆ. ಇದು ಈ ವಿವಾಹ ಪದ್ಧತಿಯ ವೈಶಿಷ್ಟ್ಯವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ