Italy PM Melone Deepfake Viral Video: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಡೀಪ್‌ಫೇಕ್ ಪೋರ್ನ್ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು ,  ನಂತರ ಪ್ರಕರಣ ದಾಖಲಿಸಿರುವ ಮೇಲೋನಿ 1 ಲಕ್ಷ ಡಾಲರ್ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಜುಲೈ 2 ರಂದು ಮೆಲೋನಿ ನ್ಯಾಯಾಲಯಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬಿಬಿಸಿಯಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಮೆಲೋನಿ (italian prime minister giorgia meloni fall pray to deepfake menace) ಓರ್ವ 40 ವರ್ಷದ ವ್ಯಕ್ತಿ ಮತ್ತು ಅವರ 73 ವರ್ಷದ ತಂದೆಯ ಮೇಲೆ ಆರೋಪ ಮಾಡಿದ್ದು, ಈ ವಿಡಿಯೋ ತಯಾರಿಸುವುದರ ಹಿಂದೆ ಇವರಿಬ್ಬರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಕಾನೂನು ಜಾರಿ ಸಂಸ್ಥೆಗಳು ಈ ಜನರನ್ನು ಅವರು ಕಂಟೆಂಟ್ ಅಪ್ಲೋಡ್ ಮಾಡಲು ಬಳಸುತ್ತಿದ್ದ ಮೊಬೈಲ್ ಸಮೇತ ಬಂಧಿಸಿದ್ದಾರೆ ಮತ್ತು  ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎನ್ನಲಾಗಿದೆ.. (Viral News In Kannada)


COMMERCIAL BREAK
SCROLL TO CONTINUE READING

ಲಕ್ಷಾಂತರ ವೀಕ್ಷಣೆಗಳು
ಕೆಲವು ಮಾನನಷ್ಟ ಪ್ರಕರಣಗಳನ್ನು ಇಟಾಲಿಯನ್ ಕಾನೂನಿನ ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳಂತೆ ಗುರುತಿಸಿ ಶಿಕ್ಷೆ ನೀಡಲಾಗುತ್ತದೆ. ಈ ವೀಡಿಯೊಗಳನ್ನು ಅಮೇರಿಕನ್ ಪೋರ್ನ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ, ಕೆಲವೇ ತಿಂಗಳುಗಳಲ್ಲಿ ಅವುಗಳಿಗೆ ಲಕ್ಷಾಂತರ ವೀಕ್ಷಣೆಗಳು ಬಂದಿವೆ. ಈ ಡೀಪ್‌ಫೇಕ್ ವೀಡಿಯೊಗಳಲ್ಲಿ, ಮೆಲೋನಿಯ ಮುಖವನ್ನು ಪೋರ್ನ್ ನಟಿಯ ಮುಖದ ಮೇಲೆ ಡೀಪ್ ಫೇಕ್ ಮಾಡಲಾಗಿದೆ.


ಇದನ್ನೂ ಓದಿ-Viral Video: ಅಬ್ಬಾ! ಅಪಘಾತಕ್ಕೂ ಮುನ್ನ ವಿಮಾನದಿಂದ ಕೆಳಕ್ಕೆ ಧುಮುಕಿದ! ಗುಂಡಿಗೆ ಗಟ್ಟಿ ಇರುವವರು ಮಾತ್ರ ವಿಡಿಯೋ ನೋಡಿ!


ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮೊತ್ತವನ್ನು ನೀಡಲಾಗುವುದು
ಮೆಲೋನಿ ಅವರ ಕಾನೂನು ತಂಡವು ಪರಿಹಾರದಲ್ಲಿ ಎಷ್ಟು ಮೊತ್ತವನ್ನು ಪಡೆಯುತ್ತದೆಯೋ ಅದನ್ನು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ನಿಧಿಗೆ ದೇಣಿಗೆ ನೀಡಲಿದೆ ಎಂಬುದನ್ನು ಸ್ಪಸ್ತಾಪಡಿಸಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಯಾವುದೇ ಭಯವಿಲ್ಲದೆ ತಮ್ಮ ಕಾನೂನು ಹೋರಾಟವನ್ನು ಮುಂದುವರೆಸಲು ಪರಿಹಾರ ನೀಡಲಾಗುವುದು ಎಂದು ಮೆಲೋನಿ ಅವರ ವಕೀಲರಾದ ಮರಿಯಾ ಗಿಯುಲಿಯಾ ಮರೋಂಗಿಯು ಹೇಳಿದ್ದಾರೆ.  ಈ ಡೀಪ್ ಫೇಕ್ ವಿಡಿಯೋಗಳು 2022 ರಲ್ಲಿ ಮೆಲೋನಿ ಪ್ರಧಾನಿಯಾಗುವ ಮೊದಲು ತಯಾರಿಸಲಾಗಿದೆ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ, 'ಡೀಪ್‌ಫೇಕ್' ಪೋರ್ನ್ ವೀಡಿಯೋ ಕಂಟೆಂಟ್ ಇಂಟರ್ನೆಟ್‌ನಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ, ಇದು ಸಂತ್ರಸ್ತರಿಗೆ ದೈಹಿಕ ಮಾತ್ರವಲ್ಲದೆ ಮಾನಸಿಕ ಸಮಸ್ಯೆಗಳನ್ನೂ ಉಂಟುಮಾಡುತ್ತದೆ.


ಇದನ್ನೂ ಓದಿ-Viral Video: ತಡ ರಾತ್ರಿ ಬೈಕ್ ಮೇಲೆ ಔಟಿಂಗ್ ಮಾಡುತ್ತಿದ್ದ ವ್ಯಕ್ತಿ, ಮುಂದೆ ಆಗಿದ್ದು ಮಾತ್ರ ಎದೆ ಝಲ್ ಎನ್ನಿಸುವಂತಿದೆ!


ಡೀಪ್‌ಫೇಕ್ ಎನ್ನುವುದು ಕೃತಕ ಬುದ್ಧಿಮತ್ತೆಯನ್ನು ಯಾವುದೇ ದೃಶ್ಯ ಅಥವಾ ಆಡಿಯೊ ಕಂಟೆಂಟ್ ಹಾಳುಮಾಡಲು ಬಳಸುವ ಒಂದು ವಿಧಾನವಾಗಿದೆ ಮತ್ತು ಇದು ಹೆಚ್ಚಿನ ಮಟ್ಟಿಗೆ ಸತ್ಯಕ್ಕೆ ಬಹುತೇಕ ಹತ್ತಿರವಾಗಿರುತ್ತದೆ. ಡೀಪ್‌ಫೇಕ್ ಎಂಬ ಪದವು 2017 ರಲ್ಲಿ ಅಸ್ತಿತ್ವಕ್ಕೆ ಬಂದಿದೆ, ರೆಡ್ಡಿಟ್ ಬಳಕೆದಾರರು ಓಪನ್ ಸೋರ್ಸ್ ಫೇಸ್ ಸ್ವಾಪಿಂಗ್ ತಂತ್ರಜ್ಞಾನದ ಮೂಲಕ ಅದೇ ಹೆಸರಿನ ಪೋರ್ನ್ ವೀಡಿಯೊಗಳನ್ನು ರಚಿಸುವ ವೇದಿಕೆ ರಚಿಸಿದಾಗ ಇದು ವಿದ್ಯಮಾನಕ್ಕೆ ಬಂದಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ