Crime: ವಾಟ್ಸಾಪ್, ಫೇಸ್ಬುಕ್ನಲ್ಲಿ ಹುಡುಗಿಯರಿಗೆ ಹಾರ್ಟ್ ಎಮೋಜಿ ಕಳಿಸಿದ್ರೆ ಜೈಲ್ ಗ್ಯಾರಂಟಿ..!
Heart Emoji A Crime: ಪ್ರಸ್ತುತ ದಿನದಲ್ಲಿ ಪ್ರತಿ ಮಾತು ಕಥೆ ವಾಟ್ಸಾಪ್ ಮೂಲಕ ನಡೆಯುತ್ತದೆ. ಆದರೆ ಹುಡುಗರು ಹುಡುಗಿಯರಿಗೆ ಅಸಭ್ಯ, ಇಮೋಜಿಗಳನ್ನು ಕಳಿಸಿ ಹಿಂಸೆ ನೀಡಿದರೇ ಜೈಲ್ ಸೇರೊದು ಗ್ಯಾರಂಟಿ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ.
ಕುವೈತ್ : ಮೊದಲು ಒಂದು ಕಾಲದಲ್ಲಿ ಪತ್ರಗಳ ಮೂಲಕ ಪ್ರೀತಿ ಪ್ರೇಮ ವ್ಯಕ್ತವಾಗುತ್ತಿತ್ತು. ಆ ಪ್ರೀತಿಗೆ ವಾಪಸ್ಸು ಉತ್ತರ ಅಥವಾ ಪ್ರತಿಕ್ರಿಯೆ ಬರುವಾಗ ಇನ್ನು ಒಂದು ವಾರ ಆಗುತ್ತಿತ್ತು.
ಆದರೆ ಪ್ರಸ್ತುತ ದಿನದಲ್ಲಿ ಹಾಗಿಲ್ಲ. ಮೇಸೆಜ್ನಿಂದ ಎಲ್ಲಾ ಭಾವನೆಗಳು, ಮಾತುಕಥೆ ನಡೆಯುತ್ತದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಪ್ರೀತಿ ಅರ್ಥವೇ ಇಲ್ಲದ ಹಾಗೆ ಆಗಿದೆ. ಪ್ರತಿಯೊಂದಕ್ಕೂ ಎಮೋಜಿ ಕಳಿಸುವ ಮೂಲಕ ಭಾವನೆ ವ್ಯಕ್ತ ಪಡಿಸುತ್ತಾರೆ.
ಇದನ್ನೂ ಓದಿ: ನಾಯಿಯಾದ ಮಾನವ... ಈತ ಪ್ರಾಣಿಯಂತೆ ಕಾಣಲು ಮಾಡಿದ ಖರ್ಚಿಗೆ ಒಂದು ಮನೆ ಕಟ್ಟಬಹುದಿತ್ತು...!
ಅದರಲ್ಲೂ ಹೆಚ್ಚಾಗಿ ಕೆಲವು ಹುಡುಗರು ಹುಡುಗಿಯರಿಗೆ ಅಸಭ್ಯ, ಇಮೋಜಿಗಳನ್ನು ಕಳಿಸಿ ಹಿಂಸೆ ನೀಡುತ್ತಿರುತ್ತಾರೆ. ಆದರೆ ಇನ್ನು ಮುಂದು ಹಾರ್ಟ್ ಎಮೋಜಿಗಳನ್ನು ಕಳಿಸಿ ಕಿರುಕುಳ ನೀಡಿದರೇ ಅಂಥವರು ಜೈಲ್ ಸೇರೊದು ಗ್ಯಾರಂಟಿ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ.
ಹೌದು, ಇಂಥದೊಂದು ಕಾನೂನುನನ್ನು ಕುವೈತ್ ಸರ್ಕಾರ ಜಾರಿಗೊಳಿಸಿದೆ. ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಸೋಷಿಯಲ್ ಮೀಡಿಯಾಗಳಾದ ವಾಟ್ಸಾಪ್, ಫೇಸ್ಬುಕ್ಗಳಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದ್ರೆ ಅಪರಾಧವೆಂದು ಪರಿಗಣಿಸಿದೆ.
ಇದನ್ನೂ ಓದಿ: Viral News: 11ನೇ ವರ್ಷದಲ್ಲಿ ಕಂಪನಿಯ ಸಿಇಒ ಆದ ಈ ಪೋರಿ; ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಥೆ ..
ಒಂದು ವೇಳೆ ಕಾನೂನು ಮೀರಿ ಕಳಿಸಿದರೇ 2 ವರ್ಷ ಜೈಲು ಶಿಕ್ಷೆ, 2,000 ದಂಡ ವಿಧಿಸಿದೆ. ಮೆಸೇಜ್ ಕಳುಹಿಸುವವರ ವಿರುದ್ಧ ಹುಡುಗಿಯರು ದೂರು ನೀಡಿದರೆ ಅದನ್ನು ಕಿರುಕುಳದ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿಯ ಪ್ರಕರಣ ಪದೇ ಪದೆ ಮರುಕಳಿಸಿದರೆ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ, 3 ಲಕ್ಷ ಸೌದಿ ರಿಯಾಲ್ಗಳನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಇನ್ನು ಈ ಮಾಹಿತಿಯನ್ನು ಸೌದಿ ಅರೇಬಿಯಾದ ವಂಚನೆಯ ವಿರೋಧಿ ಸಂಘದ ಸದಸ್ಯ ಬಹಿರಂಗ ಪಡಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.