Viral Video : ಸ್ನೇಹವು ಯಾವುದೇ ತರ್ಕವನ್ನು ಆಧರಿಸಿಲ್ಲ. ಇದು ನೈಸರ್ಗಿಕವಾಗಿ ಮತ್ತು ಯಾರೊಂದಿಗಾದರೂ ಬೆಸೆಯುವ ಬಂಧವಾಗಿದೆ. ನಿಮ್ಮ ಸಹಪಾಠಿಗಳಲ್ಲಿ ನೀವು ಮೊದಲು ಮಾತನಾಡಲು ಬಯಸಿದ ವ್ಯಕ್ತಿ, ನಿಮ್ಮ ಶಾಲೆಯ ಬೆಂಚ್‌ಮೇಟ್‌ ಹೀಗೆ ಅನೇಕ ಸ್ನೇಹಿತರು ಚಿಕ್ಕ ವಯಸ್ಸಿನಿಂದ ಸಾಯುವವರೆಗೂ ನಮ್ಮ ಬಾಳಿನಲ್ಲಿ ಬಂದಿರುತ್ತಾರೆ. ಸ್ನೇಹ ಸಂಬಂಧ ಯಾವಾಗಲೂ ಅನಿರೀಕ್ಷಿತವಾಗಿ ಸಂಭವಿಸುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಅನೇಕ ವೈರಲ್‌ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿವೆ. ಅದರಲ್ಲಿ ಮುದ್ದಾದ ನಾಯಿಮರಿಯೊಂದು ಪುಟಾಣಿ ಬಾತುಕೋಳಿಗಳ ಜೊತೆ ಆಟವಾಡುವುದನ್ನು ನೋಡಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video : ಮೆಟ್ರೋದಲ್ಲಿ ಯುವಕನ ಏರ್‌ವಾಕ್.! ಈತನ ಹುಚ್ಚಾಟ ಕಂಡು ದಂಗಾದ‌ ಜನ


ಈ ವಿಡಿಯೋವನ್ನು Yog ಎಂಬ ಹೆಸರಿನ ಖಾತೆಯಿಂದ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಮರಿ ಮತ್ತು ಬಾತುಕೋಳಿಗಳ ಹಿಂಡಿನ ನಡುವಿನ ಸ್ನೇಹವನ್ನು ಸುಂದರವಾಗಿ ಸೆರೆಹಿಡಿಯಲಾಗದೆ.  14 ಸೆಕೆಂಡ್ ಗಳ ಈ ದೃಶ್ಯವು ನಾಯಿಮರಿಯು ತನ್ನ ಸುತ್ತಲಿನ ಬಾತುಕೋಳಿಗಳ ಜೊತೆ ಹೊಂದಿರುವ ಒಡನಾಟದ ಬಗ್ಗೆ ತೋರಿಸುತ್ತದೆ. ಈ ಪುಟಾಣಿ ಬಾತಕೋಳಿಗಳು ಪುಟ್ಟ ನಾಯಿಮರಿ ಮಲಗುತ್ತಿದ್ದಂತೆ ಅದರ ಮೇಲೆ ಹೋಗಿ ನದ್ದೆ ಮಾಡುತ್ತವೆ. 


 


ವೈರಲ್‌ ವಿಡಿಯೋದಲ್ಲಿ ಬಾತುಕೋಳಿಗಳು ತಮ್ಮ ದಾರಿಯಲ್ಲಿ ಅಲೆದಾಡುವುದನ್ನು ಮತ್ತು ನಾಯಿಮರಿ ಮೇಲೆ ಹತ್ತುವುದನ್ನು ಕಾಣಬಹುದು. ಮುದ್ದಾದ ಪುಟ್ಟ ನಾಯಿಮರಿಯು ತನ್ನ ದೇಹದ ಮೇಲೆ ಎಲ್ಲಾ ಮರಿ ಬಾತುಕೋಳಿಗಳು ಕುಳಿತಿದ್ದರೂ ಸಹ ಆರಾಮವಾಗಿ ನಿದ್ರಿಸುವುದನ್ನು ಕಾಣಬಹುದು.


ಇದನ್ನೂ ಓದಿ : Viral Video: ಈ ಆಂಟಿ ಬಲು ತುಂಟಿ! ಪಾರ್ಕ್‌ಗೆ ಬಂದು ಮಾಡಿರೋದೇನು ನೋಡಿ


ನಾಯಿಮರಿ ಮತ್ತು ಬಾತುಕೋಳಿಗಳ ನಡುವಿನ ಅದ್ಭುತ ಬಾಂಧವ್ಯ ಕಂಡು ನೆಟಿಜನ್‌ಗಳು ಮನಸೋತಿದ್ದಾರೆ. ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ 15.3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು 810.4k ಲೈಕ್‌ಗಳನ್ನು ಸಂಗ್ರಹಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.