ಕೊಪ್ಪಳ: ಬಹುತೇಕರ ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಇರುತ್ತವೆ. ಹಲ್ಲಿ ಕಂಡರೆ ಕೆಲವರು ಹಾವು ಕಂಡಂತೆ ಆಡುತ್ತಾರೆ. ಮನೆಯಲ್ಲಿ ಒಟಗುಟ್ಟುವ ಹಲ್ಲಿಗಳು ಚಿಕ್ಕ ಪುಟ್ಟ ಹುಳುಗಳನ್ನು ತಿಂದು ಬದುಕುತ್ತದೆ. ಆದರೆ ಹಲ್ಲಿಗಳು ಎಲ್ಲಿಯಾದರೂ ಚಹಾ ಕುಡಿಯುವುದನ್ನು ನೋಡಿದ್ದೀರಾ..? ಇಲ್ಲಾ ಅಂದ್ರೆ ನಾವು ಇಲ್ಲಿ ತೋರಿಸ್ತೀವಿ ನೋಡಿ.


COMMERCIAL BREAK
SCROLL TO CONTINUE READING

ಹೌದು, ಇದು ಅಚ್ಚರಿಯಾದರೂ ನಿಜ. ಈ ವಿಡಿಯೋ ನೋಡಿದ ಮೇಲೆ ನೀವು ಇದನ್ನು ನಂಬ್ತೀರಿ. ಕೊಪ್ಪಳದಲ್ಲಿ ಟೀ ಕುಡಿಯುವ ಹಲ್ಲಿ ಇದೆ. ಸದ್ಯ ಈ ಹಲ್ಲಿ ಚಹಾ ಕುಡಿಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


ಇದನ್ನೂ ಓದಿ: ಕೋತಿಯ ಈ ಮನೆ ಕೆಲಸ ನೋಡಿದ್ರೆ ನಗು ಬರೋದು ಗ್ಯಾರಂಟಿ


ಚಹಾ ಕುಡಿಯುವ ಮೂಲಕ ಈ ಎಲ್ಲಿ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ. ಲೋಟದಲ್ಲಿ ಇಟ್ಟಿದ್ದ ಚಹಾವನ್ನು ಕುಡಿದ ಹಲ್ಲಿ ಬಾಯಿ ಚಪ್ಪರಿಸಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೊಮ್ಮಿನಾಳದಲ್ಲಿ ಈ ಅಪರೂಪದ ಘಟನೆ ನಡೆದಿದೆ.


ಹೊಮ್ಮಿನಾಳದ ಹನುಮಂತಪ್ಪ ಎಂಬುವವರು ಚಹಾ ಕುಡಿಯುತ್ತಿರುವ ಹಲ್ಲಿಯ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾರೆ. ಗ್ರಾಮದ ಹೋಟೆಲ್‍ವೊಂದರಲ್ಲಿ ಹಲ್ಲಿ ಚಹಾ ಕುಡಿದಿದೆ. ಹಲ್ಲಿ ಟೀ ಕುಡಿಯುತ್ತಿರುವುದನ್ನು ಕಂಡ ಹನುಮಂತಪ್ಪನವರು ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Crocodile Video: ಮೊಸಳೆ ಬಾಯಿಯಿಂದ ತನ್ನ ಸ್ನೇಹಿತನನ್ನು ಹೊರತೆಗೆದ ವ್ಯಕ್ತಿ! ವಿಡಿಯೋ ನೋಡಿ


ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಹಾ ಕುಡಿಯುವ ಹಲ್ಲಿಯನ್ನು ಕಂಡು ನೆಟಿಜನ್‍ಗಳು ಬಾಯ್ ಮೇಲೆ ಬೆರಳು ಇಟ್ಟುಕೊಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ