ನದಿಯಲ್ಲಿ ಉದ್ಭವಿಸಿದ ಭಜರಂಗಿ..! ರಾಮಧೂತನ ಮೂರ್ತಿ ಕಂಡು ಬೆಚ್ಚಿ ಬಿತ್ತು ಗ್ರಾಮ.. ವಿಡಿಯೋ ವೈರಲ್
ಭಾರೀ ಮಳೆ ಹಿನ್ನೆಲೆ ಪ್ರವಾಹ ಉದ್ಧವಿಸಿದೆ.. ಇದರ ನಡುವೆ ಹನುಮನ ವಿಗ್ರಹ ಸ್ವಲ್ಪವೂ ಅಲುಗಾಡದಂತೆ ನಿಂತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ.. ಅಲ್ಲದೆ, ಈ ಮೂರ್ತಿ ಎಲ್ಲಿಂದ ಬಂತು.. ಹೇಗೆ ಬಂತು ಎಂಬ ವಿಚಾರ.. ನಿಗೂಢವಾಗಿದೆ... ಸಧ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ...
Viral video : ರಾಜ್ಯ ಸೇರಿದಂತೆ ಪಕ್ಕದ ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.. ಈ ವೇಳೆ ಅಪರೂಪದ ಘಟನೆಯೊಂದು ನಡೆದಿದೆ.. ಉಕ್ಕಿ ಹರಿಯುತ್ತಿದ್ದ ಪ್ರವಾಹದ ಮಧ್ಯದಿಂದ ರಾಮಧೂತ ಹನುಮಂತನ ಪ್ರತಿಮೆ ಉದ್ಧವಿಸಿದೆ.. ಇದನ್ನು ಕಂಡ ಜನರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ..
ಹೌದು.. ಉತ್ತರ ಆಂಧ್ರದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ರಾಜವೊಮ್ಮಂಗಿ ಮಂಡಲದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಜಡ್ಡಂಗಿ ಗ್ರಾಮದ ಹೊರವಲಯದ ಮದೇರು ನದಿಯ ಹೊಳೆಯಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ಕಾಣಿಸಿಕೊಂಡಿದೆ. ಅದೇ ವೇಳೆ ಆ ಮಾರ್ಗವಾಗಿ ಹೋಗುತ್ತಿದ್ದ ಅಜಯ್ ಎಂಬ ಯುವಕ ಪ್ರತಿಮೆಯನ್ನು ಕಂಡು ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ
ಇದನ್ನೂ ಓದಿ: ವಿದ್ಯಾರ್ಥಿಯನ್ನು ಎಳೆದಾಡಿ ಮನಬಂದಂತೆ ಥಳಿಸಿದ ಶಿಕ್ಷಕ! ಪಾಠ ಹೇಳುವ ಗುರು ಮಾಡೋದು ಹೀಗಾ..?
ಕೂಡಲೇ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಮೂರ್ತಿಯನ್ನು ಸಮೀಪದ ರಾಮಮಂದಿರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಇದುವರೆಗೂ ಆ ಮೂರ್ತಿ ಎಲ್ಲಿಂದ ಬಂತು.. ಹೇಗೆ ಬಂತು.. ಅದು ಯಾವ ದೇವಸ್ಥಾನಕ್ಕೆ ಸಂಬಂಧಿಸಿದ್ದು ಎಂಬ ಮಾಹಿತಿ ದೊರೆತಿಲ್ಲ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.