Viral News: 61 ವರ್ಷದ ಮುದುಕನೇ ಬೇಕೆಂದು ಪಟ್ಟು ಹಿಡಿದು ಮದುವೆಯಾದ 18ರ ಯುವತಿ; ಕಣ್ಣೀರು ಹಾಕುತ್ತಿರುವ ಸಿಂಗಲ್ಸ್!
Asia-Rana Shamshad Love Story: ಯುವತಿಯೇ ದಂಬಾಲು ಬಿದ್ದು ಶಂಶಾದ್ರನ್ನು ವಿವಾಹವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ. ರಾವಲ್ಪಿಂಡಿ ಮೂಲದ ಆಸಿಯಾ ತನಗಿಂತ 43 ವರ್ಷ ಹಿರಿಯ ವ್ಯಕ್ತಿಗೆ ಆಕರ್ಷಿತಳಾಗಿದ್ದಾಳೆ ಇದಕ್ಕೆ ಕಾರಣ ಶಂಶಾದ್ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು.
Viral News: ʼಪ್ರೀತಿ ಮಾಯೆ ಹುಷಾರುʼ ಅನ್ನೋ ಹಾಡು ನೀವೇ ಕೇಳಿಯೇ ಇರ್ತೀರಿ. ಪ್ರೀತಿಗೆ ವಯಸ್ಸಿನ ಇತಿಮಿತಿಯಿಲ್ಲ. ಕೆಲವರಿಗೆ ಯಾರ ಮೇಲೆ ಅದು ಹೇಗೆ ಪ್ರೇಮಾಂಕುರವಾಗುತ್ತೋ ಆ ದೇವರೇ ಬಲ್ಲ. ವಯಸ್ಸಾದ ಅಜ್ಜಿಯ ಮೇಲೆ ಯುವಕನಿಗೆ ಪ್ರೀತಿಯಾದರೆ, ಇನ್ನೇನು ಕೆಲವೇ ವರ್ಷ ಬದುಕುವ ತಾತನ ಮೇಲೂ ವಯಸ್ಸಿನ ಹುಡುಗಿಯರಿಗೆ ಪ್ರೇಮಾಂಕುರವಾಗಿರುತ್ತದೆ. ಮದುವೆಯಾಗಲು ಕೆಲವರಿಗೆ ವಯಸ್ಸಿನ ಅಡ್ಡಿಯೇ ಬರುವುದಿಲ್ಲ. ಪರಸ್ಪರ ಪ್ರೀತಿಸಿ ಕುಟುಂಬಸ್ಥರು, ಸಂಬಂಧಿಕರ ಸಮ್ಮುಖದಲ್ಲಿಯೇ ಕೆಲವರು ಅದ್ದೂರಿಯಾಗಿ ಮದುವೆಯಾಗುತ್ತಾರೆ.
ಅದಕ್ಕೆ ಕೆಲವರು ʼಪ್ರೀತಿ ಮಾಯೆʼ ಎಂದರೆ, ಇನ್ನೂ ಕೆಲವರು ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತಾ ಹೇಳುತ್ತಾರೆ. ಆದರೆ ಕೆಲವರ ಮದುವೆ ಸುದ್ದಿ ಕೇಳಿ ಅನೇಕರಿಗೆ ಆಘಾತವಾಗಿರುತ್ತದೆ. ಅಯ್ಯೋ ಹೀಗೂ ದೇವರು ಅವರ ಮದುವೆಯನ್ನ ನಿಶ್ಚಯ ಮಾಡಿರುತ್ತಾನಾ? ಅನ್ನೋ ಪ್ರಶ್ನೆ ಮೂಡಿರುತ್ತದೆ. ಇದಕ್ಕೆ ಸ್ಪಷ್ಟ ನಿದರ್ಶನವೆಂಬಂತೆ ಜೋಡಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಜೋಡಿಯ ಹೆಸರು ಶಂಶಾದ್ ಮತ್ತು ಆಸಿಯಾ.
ಇದನ್ನೂ ಓದಿ: ಶಾಕಿಂಗ್ ವಿಚಾರ ಬಹಿರಂಗ..!! ಇವಾಂಕಾ ಅಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಟ್ರಂಪ್‌ಗೆ ಒಬ್ಬಳು ಮುಸ್ಲಿಂ ಮಗಳಿದ್ದಾಳೆ
ಆಫೀಸ್ ಕೆಲಸದ ನಡುವೆಯೇ S*X ಮಾಡಿ..! ದೇಶದ ಅಧ್ಯಕ್ಷರೇ ಈ ಶಾಕಿಂಗ್ ಸಲಹೆ ನೀಡಲು ಕಾರಣವೇನು?
ಒಂದೆರಡು ಬಾರಿ ಶಂಶಾದ್ ಅವರನ್ನು ಆಸಿಯಾ ಭೇಟಿಯಾಗಿದ್ದಾಳೆ. ಶಂಶಾದ್ ಎಲ್ಲರೊಂದಿಗೆ ಬೆರೆಯುತ್ತ, ಸಮಾಜ ಸೇವೆ ಮಾಡಿಕೊಂಡು ಹೆಸರು ಗಳಿಸಿದ್ದರು. ಸ್ಥಳೀಯ ಜನರು ಸಹ ಅವರ ಗುಣಗಾನ ಮಾಡುತ್ತಿದ್ದರು. ಹೀಗೆ ಅವರ ಬಗ್ಗೆ ಎಲ್ಲೆಡೆ ಅತ್ಯುತ್ತಮ ಅಭಿಪ್ರಾಯವಿತ್ತು. ಹೀಗಾಗಿ ಶಂಶಾದ್‌ರ ವ್ಯಕ್ತಿತ್ವಕ್ಕೆ ಮನಸೋತ ಆಸಿಯಾ ತನ್ನ ಮನದ ಇಂಗಿತವನ್ನ ಅವರಿಗೆ ತಿಳಿಸಿದ್ದಾಳೆ. ದಿನ ಕಳೆದಂತೆ ಇಬ್ಬರ ನಡುವೆಯೂ ಪ್ರೇಮಾಂಕುರವಾಗಿದೆ. ಬಳಿಕ ಇಬ್ಬರು ಪರಸ್ಪರ ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ