Malashree Dance:ಬಹುನಿರೀಕ್ಷಿತ ಕಾಟೇರ ಸಿನಿಮಾ ಮೂಲಕ  ನಟಿ ಆರಾಧನಾ ರಾಮ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾಯಿದ್ದು, ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಶೂಟಿಂಗ್ ಟೈಮ್‌ನಲ್ಲಿಯೇ ತಮ್ಮ ಪ್ರತಿಭೆ ಮುಖಾಂತರ ಆರಾಧನಾ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದು, ಅದೇ ರೀತಿ ಮೊನ್ನೆ ರಿಲೀಸ್ ಆದ ಪಸಂದಾಗವನೆ ಹಾಡಿನ ಮೂಲಕವೂ ಕನ್ನಡಿಗರಿಗೆ ಹೊಸ ಭರವಸೆ ಮೂಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಮಾಲಾಶ್ರೀ ಹಾಗೂ ಅವರ ಪುತ್ರಿ ಆರಾಧನ ರಾಮ್‌ ಮುಂಬೈಗೆ ತೆರಳಿದ್ದ, ನಿನ್ನೆ ಮುಂಬೈನಿಂದ ವಾಪಸಾಗುತ್ತಿದ್ದಂತೆಯೇ, ಮಾಲಾಶ್ರೀಯವರು ಟ್ರಾಲಿ ಬ್ಯಾಗ್‌ನ ಹ್ಯಾಂಡಲ್‌ ಹಿಡಿದು ʻಪಸದಾಂಗವ್ನೆ ಸ್ಯಾನೆ ಪಸದಾಂಗವ್ವೆʼ ಹಾಡಿಗೆ ನಿಂತಲ್ಲಿಯೇ  ಒಂದೆರಡು ಸ್ಟೆಪ್​ ಹಾಕಿದ್ದಾರೆ.ನಟಿ ಮಾಲಾಶೀ ತಮ್ಮ ಇನ್​ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋ ಶೇರ್​ ಮಾಡಲಾದ ಈ ರೀಲ್ಸ್​ ಇದೀಗ ಸಖತ್‌ ವೈರಲ್‌ ಆಗಿದೆ.



ಇದನ್ನೂ ಓದಿ: Sai Pallavi: ನ್ಯಾಚುರಲ್‌ ಬ್ಯೂಟಿ ಸಿನಿಮಾ ಮಾಡಲು ಹಾಕುವ ಷರತ್ತುಗಳೇನು ಗೊತ್ತಾ?


ಕನಸಿನ ರಾಣಿ ಮಾಲಾಶ್ರೀ ಡ್ಯಾನ್ಸ್‌ ವಿಡಿಯೋಗೆ ಒಂದು ದಿನದ ಒಳಗೆ 50 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಕಮೆಂಟ್‌ ವಿಭಾಗದಲ್ಲಿ ಫ್ಯಾನ್ಸ್‌ ʻತುಂಬಾ ದಿನದ ನಂತರ ನೋಡಿ ಖುಷಿಯಾಯಿತುʼ, ʻನಿಮ್ಮ ಡ್ಯಾನ್ಸ್ ತುಂಬಾ ಪಸಂದ ಆಗಿದೆʼ, ʻಮಾಲಾಶ್ರೀ ಮೇಡಂ ಸೂಪರ್ʼ ಅಂತೆಲ್ಲಾ ಕಮೆಂಟ್‌ ಮಾಡಿದರೇ, ಇನ್ನ ಕೆಲವು ಅಭಿಮಾನಿಗಳು ಹಾರ್ಟ್‌ ಸಿಂಬಲ್‌ ಕಳುಹಿಸಿದ್ದಾರೆ.


ಈ ಹಿಂದೆ, ʻಪಸಂದಾಗವ್ನೆʼ ಹಾಡಿಗೆ ಆರಾಧನಾ ಮಾಡಿದ ಡ್ಯಾನ್ಸ್​ ವಿಡಿಯೋ ರಿಲೀಸ್​ ಆದಾಗಲೂ ಫ್ಯಾನ್ಸ್​ ಥಹರೇವಾರಿ ಕಮೆಂಟ್​ ಮಾಡಿದ್ದು, ತಾಯಿಯನ್ನು ಮೀರಿಸುವ ಟ್ಯಾಲೆಂಟ್‌, ಆರಾಧನಾಗೆ ಶುಭವಾಗಲಿ ಎಂದು ಹಲವರು ಶುಭ ಕೋರಿದ್ದರು.  ಹಾಡು ಪೂರ್ತಿ ಆರಾಧನಾ ತುಂಬಾ ಚೆನ್ನಾಗಿ ಕಾಣ್ತಾರೆ. ಡ್ಯಾನ್ಸ್‌ ಮೂವ್ಸ್‌, ಎಕ್ಸ್‌ಪ್ರೆಷನ್ಸ್‌ ಎಲ್ಲಾ ಮಾಲಾಶ್ರೀ ಮೇಡಮ್ ನೆನಪಿಸ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ