ಮದುವೆ ಸೀಸನ್ ಆರಂಭವಾಗುತ್ತಿದ್ದಂತೆಯೇ ಅನೇಕ ಮದುವೆಯ ವಿಡಿಯೋಗಳು ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಆಗುವುದಕ್ಕೆ ಶುರುವಾಗುತ್ತವೆ. ಇದೀಗ ಎಲ್ಲಿ ನೋಡಿದರೂ ಮದುವೆಯ ವಿಡಿಯೋಗಳೇ ಕಾಣಿಸುತ್ತಿವೆ. ಮದುವೆ ಮನೆಯಲ್ಲಿ ವಧು ವರರ ಎಂಟ್ರಿ, ಡಾನ್ಸ್, ಕಾಸ್ಟ್ಯೂಮ್ ಹೀಗೆ ನಾನಾ ವಿಚಾರಗಳಲ್ಲಿ ಟ್ರೆಂಡ್ ಆಗುತ್ತಿರುತ್ತದೆ. ಆದರೆ  ಇಲ್ಲಿ ನಡೆದಿರುವ ಮದುವೆಯೇ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.  


COMMERCIAL BREAK
SCROLL TO CONTINUE READING

ದಕ್ಷಿಣ ಭಾರತದಲ್ಲಿ ಮದುವೆ ಎಂದರೆ ಮಾಂಗಲ್ಯಕ್ಕೆ ಬೆಲೆ. ಆದರೆ ಉತ್ತರ ಭಾರತಕ್ಕೆ ಬಂದರೆ ಇಲ್ಲಿ ಗಂಡು ಹೆಣ್ಣಿನ ಹಣೆಗೆ ಕುಂಕುಮ ಹಚ್ಚಿದರೆ ಅದನ್ನು ಮದುವೆ ಎಂದೇ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಇಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಂಟಪದಲ್ಲಿ ವಧು ವರ ಕುಳಿತಿರುವುದನ್ನು ನೋಡಬಹುದು. ವರ ವಧುವಿನ ಹಣೆಗೆ ಕುಂಕುಮ ಹಚ್ಚುವ ಮೂಲಕ ಶಾಸ್ತ್ರವನ್ನು ಪೂರೈಸುತ್ತಾನೆ. 


ಇದನ್ನೂ ಓದಿ : ಮಗ ಬರ್ತಾನೆ.. ಬರ್ತಾನೆ.. ಅಂತ ಚಳಿಯಲ್ಲಿಯೇ ನರಳಾಟ..! "ಕುಂಭಮೇಳ ಮೇಳ"ದಲ್ಲಿ ಮನಕಲಕುವ ಘಟನೆ.. ವಿಡಿಯೋ ವೈರಲ್‌..


ಆದರೆ ಇದು ಇಲ್ಲಿಗೇ ಮುಗಿಯುವುದಿಲ್ಲ. ವರ ಎದ್ದು ಹೋಗಿ ಅಲ್ಲೇ ಕುಳಿತಿರುವ ವಧುವಿನ ಆರು ಮಂದಿ ಸಹೋದರಿಯರ ಹಣೆಗೂ ಸಿಂಧೂರ ಹಚ್ಚುತ್ತಾನೆ. ಜೊತೆಗೆ ಅಲ್ಲೇ ಕುಳಿತಿರುವ ವಧುವಿನ ಸಹೋದರನ ಹೆಣೆ ತುಂಬಾ ಕುಂಕುಮ ಹಚ್ಚುತ್ತಾನೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  


 


 

 

 

 



 

 

 

 

 

 

 

 

 

 

 

A post shared by Nanhe Nadan (@actor_nanhe)


ಇದನ್ನೂ ಓದಿ "ಮೊನಾಲಿಸಾ" ಫಸ್ಟ್‌ ಸಾಂಗ್‌ ರಿಲೀಸ್‌..! ರೆಡ್‌ ಡ್ರೇಸ್‌ನಲ್ಲಿ ಕುಂಭಮೇಳ ಸುಂದರಿ ಹಾಟ್‌ ಅವತಾರ.. ವಿಡಿಯೋ ವೈರಲ್‌..


ಈ ವೀಡಿಯೋವನ್ನು ಕೇವಲ ಮನರಂಜನಾ ಉದ್ದೇಶಕ್ಕಾಗಿ ಮಾಡಲಾಗಿದ್ದರೂ, ಮದುವೆಯಂತಹ ಪವಿತ್ರ ಬಂಧವನ್ನು ಈ ರೀತಿ ಗೇಲಿ ಮಾಡುವುದು ಸರಿ ಎನ್ನುವುದರ ಬಗ್ಗೆ ಕೆಲವರು ಕಿಡಿ ಕಾರಿದ್ದಾರೆ. ಇಂಥಹ ವಿಡಿಯೋ ಮೂಲಕ  ಧರ್ಮವನ್ನು ಗೇಲಿ ಮಾಡುತ್ತಿದ್ದಾರೆ ಬಳಕೆದರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೊವನ್ನು ಮನರಂಜನೆಗಾಗಿ ಮಾಡಿರಬಹುದು, ಆದರೆ ಅನೇಕ ಜನರು ಇದನ್ನು ಅತ್ಯಂತ ಆಕ್ಷೇಪಾರ್ಹವೆಂದು ಪರಿಗಣಿಸುತ್ತಿದ್ದಾರೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.