Viral Video: ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂಬ ಎನ್ನುವ ಆಸೆಯಿಂದ ಅನೇಕರು ಭಯಾನಕವಾದ ಕೆಲಸಗಳನ್ನು ಮಾಡುತ್ತಾರೆ. ಇದೇ ರೀತಿ ವ್ಯಕ್ತಿಯೊಬ್ಬ ಗಮ್ ಬಳಸಿ ತುಟಿಗಳನ್ನು ಅಂಟಿಸಲು ಯತ್ನಿಸಿ ತುಟಿಗಳನ್ನು ಬೇರ್ಪಡಿಸಲು ಸಾಧ್ಯವಾಗದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಪ್ರತಿದಿನ ಅನೇಕ ಅದ್ಭುತ ಮತ್ತು ವಿಲಕ್ಷಣ ವೀಡಿಯೊಗಳು ನಮ್ಮ ಕಣ್ಣಿಗೆ ಕಾನ ಸಿಗುತ್ತದೆ. ನೃತ್ಯ ಮಾಡುವ ಮತ್ತು ಸಾಹಸಗಳನ್ನು ಮಾಡುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದನ್ನು ನಾವು ನೋಡಬಹುದು. ಕೆಲವರು ತಮ್ಮ ವೀಡಿಯೊಗಳನ್ನು ಸಾಮಾಜಿಕ ಜಾಲತಾನದಲ್ಲಿ ವೈರಲ್ ಮಾಡಲು,  ಸಾಹಸದ ಕೆಲಸಗಳನ್ನು ಮಾಡುತ್ತಾರೆ. ಇದೀಗ ವ್ಯಕ್ತಿಯೊಬ್ಬ ಇಂತಹದ್ದೆ  ಅಸಾಧ್ಯವಾದುದನ್ನು ಮಾಡಲು ಯತ್ನಿಸಿ, ಅಪಾಯಕ್ಕೆ ಸಿಲುಕಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 


ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಯುವಕನೊಬ್ಬ ತನ್ನ ತುಟಿಗಳಲ್ಲಿ ಗಮ್ ಅನ್ನು ಹಾಕಿಕೊಂಡಿದ್ದಾನೆ. ಮೊದಲಿನಲ್ಲಿ ಆತ ಗಮ್‌ ಒನಗುವ ಮುಂಚೆ ತಮಾಷೆಯಾಗಿ ಆಕ್ಟ್ ಮಾಡುತ್ತಾನೆ, ಅದರೆ ನಂತರ ಮತ್ತಷ್ಟು ಗಮ್‌ ಹಾಕಿ ತುಟಿಗಳನ್ನು ಬಿಗಿಯಾಗಿ ಮುಚ್ಚುತ್ತಾನೆ. ಇದೇ ನೋಡಿ ತಪ್ಪಾಗಿದ್ದು, ಇದಾದ ನಂತರ ಯುವಕ ಎಷ್ಟೇ ಬಾಯಿ ತೆರೆಯಲು ಪ್ರಯತ್ನಿಸಿದರೂ ಕೂಡ ಬಾಯಿ ತೆರೆಯಾಲಾಗದೆ, ಗಟ್ಟಿಯಾಗಿ ಅಂಟಿಕೊಂಡಿದೆ, ಇದನ್ನು ನೋಡಿ ಅವನ ಗೆಳೆಯರು ನಗಲು ಆರಂಭಿಸುತ್ತಾರೆ, ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.


ಯುವಕನ ಇನ್‌ಸ್ಟಾಗ್ರಾಮ್ ಪುಟವನ್ನು ಪರಿಶೀಲಿಸಿದಾಗ ಅವನಿಗೆ ಇಂತಹ ಕೆಲಸಗಳನ್ನು ಮಾಡುವ ಅಭ್ಯಾಸವಿದೆ ಎಂದು ತಿಳಿದುಬಂದಿದೆ. ಸ್ನೇಹಿತರು ಮತ್ತು ದಾರಿಹೋಕರನ್ನು ತಮಾಷೆ ಮಾಡುವ ಅಭ್ಯಾಸವೂ ಇದೆ. ಈ ವೇಳೆ ತುಟಿಗಳನ್ನು ಅಂಟಿಸಿಕೊಂಡು ಪರೀಕ್ಷೆ ನಡೆಸಿದ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ನಂತರ ಅವರ ತುಟಿ ಸರಿಹೋಯಿತಾ ಇಲ್ವಾ ಎಂಬ ಕುರಿತು ಈ ಯುವಕ ಇನ್ನೂ ಕೂಡ ಯಾವುದೇ ಪೋಸ್ಟ್‌ ಅನ್ನು ಸಹ ಹಂಚಿಕೊಂಡಿಲ್ಲ.


ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವಿಲಕ್ಷಣ ವೀಡಿಯೋಗಳನ್ನು ಹಾಕಿ ಫೇಮಸ್ ಆಗಬಹುದು ಎಂದುಕೊಳ್ಳುವವರಿಗೆ ಇದೊಂದು ಉತ್ತಮ ಪಾಠವಾಗಲಿ. ಮತ್ತೊಬ್ಬರು ಅಪಾಯಕಾರಿ ಎಂದು ತಿಳಿದುಕೊಂಡು ಚಟುವಟಿಕೆ ನಡೆಸುವುದು ಮೂರ್ಖತನ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ ತನ್ನ ಉತ್ತಮ ತುಟಿಗಳನ್ನು ಹಾಳುಮಾಡಿದ್ದಾನೆ ಎಂದು ಪೋಸ್ಟ್ ಮಾಡಿದ್ದಾರೆ. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವಿಡಿಯೋ ಅಡಿಯಲ್ಲಿ ದಾಖಲಿಸುತ್ತಿರುವುದು ಗಮನಾರ್ಹ.


 

 

 

 



 

 

 

 

 

 

 

 

 

 

 

A post shared by Badis TV (@badis_tv)


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.