ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋ
Snake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ನಾಗಮಣಿ ಎನ್ನುವುದು ಅತ್ಯಂತ ವಿಶೇಷ ವಸ್ತು.
Snake Nagamani Video : ನಾಗ,ನಾಗಮಣಿ ಎನ್ನುವ ವಿಶ್ಯಾಧಾರಿತ ಅನೇಕ ಚಿತ್ರಗಳು ಬಿಡುಗಡೆಯಾಗಿವೆ.ಧಾರಾವಾಹಿಗಳಲ್ಲಿ ಕೂಡಾ ಇಂಥಹ ಕಂಟೆಂಟ್ ಗಳನ್ನು ನೋಡಿರುತ್ತೇವೆ.ನಾಗಮಣಿ ಎನ್ನುವುದು ಅತ್ಯಂತ ವಿಶೇಷ ವಸ್ತು.ಅದು ಎಲ್ಲರ ಕಣ್ಣಿಗೆ ಬೀಳುವುದಿಲ್ಲ ಎನ್ನುವ ಮಾತುಗಳನ್ನೇ ಸಾಮಾನ್ಯವಾಗಿ ನಾವು ಕೇಳಿರುತ್ತೇವೆ.ನಾಗಮಣಿ ಯಾರ ಕೈಯ್ಯಲ್ಲಿ ಇರುತ್ತದೆಯೋ ಆ ವ್ಯಕ್ತಿಗೆ ವಿಶೇಷ ಶಕ್ತಿ ಬರುತ್ತದೆ ಎಂದು ಹೇಳಲಾಗುತ್ತದೆ.ಈ ನಂಬಿಕೆಯ ಆಧಾರದ ಮೇಲೆಯೇ ಸಿನಿಮಾ, ಧಾರಾವಾಹಿ ಮಾತುಗಳು ಸುತ್ತುವರಿಯುತ್ತವೆ.ಈಗಲೂ ಈ ಕತೆಯನ್ನು ಆಧರಿಸಿ ಧಾರಾವಾಹಿಗಳು ಚಾಲ್ತಿಯಲ್ಲಿವೆ.
ಆದರೆ ನಾಗ ಮತ್ತು ನಾಗಮಣಿಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗುತ್ತಿದೆ.ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಾಗರ ಹಾವಿನ ಹೆಡೆಯ ಸಮೀಪ ಸೀಳಿ ಮಣಿಯೊಂದನ್ನು ಹೊರತೆಗೆಯುತ್ತಾನೆ.ಈ ಮಣಿ ಕಡು ನೀಲಿ ಬಣ್ಣವನ್ನು ಹೊಂದಿದೆ.
ಇದನ್ನೂ ಓದಿ : Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್
ನೆಲದ ಮೇಲೆ ಸರಸರನೆ ಹರಿದಾಡುವ ನಾಗರಹಾವನ್ನು ಈ ವಿಡಿಯೋದಲ್ಲಿ ಕಾಣಬಹುದು.ಆ ಹಾವನ್ನು ಹಿಡಿಯುವ ಉದ್ದೇಶದಿಂದಲೇ ವ್ಯಕ್ತಯಾಯೊಬ್ಬ ಹಾವಿನ ಹಿಂದೆಯೇ ಓಡಿಕೊಂದು ಬರುವುದನ್ನು ಕೂಡಾ ನೋಡಬಹುದು. ಆ ವ್ಯಕ್ತಿಗೆ ಅಂದುಕೊಂಡಷ್ಟು ಸುಲಭವಾಗಿ ನಾಗರಹಾವು ಕೈಗೆ ಸಿಗುವುದಿಲ್ಲ.ಅಲ್ಲದೆ ಆ ವ್ಯಕ್ತಿಯನ್ನು ಕಡಿಯುವುದಕ್ಕೆ ಕೂಡಾ ನಾಗರಹಾವು ಮುಂದಾಗುತ್ತದೆ.
ಆದರೆ ಮಣಿಗಾಗಿಯೇ ಹಾವಿನ ಹಿಂದೆ ಬಿದ್ದಿರುವಂತೆ ಕಾಣುವ ಆ ವ್ಯಕ್ತಿ ಸುಮ್ಮನೆ ಬಿಡಬೇಕಲ್ಲ. ಹಾಗೋ ಹೀಗೋ ಮಾಡಿ ಹಾವನ್ನು ತನ್ನ ಮುಷ್ಟಿಯಲಿ ಬಂಧಿಸಿಯೇ ಬಿಡುತ್ತಾನೆ. ನಂತರ ಆ ಹಾವನ್ನು ಕಾಲಲ್ಲಿ ಒತ್ತಿ ಹಿಡಿದು,ಮಣಿ ತೆಗೆಯಲು ಯತ್ನಿಸುತ್ತಾನೆ. ತನ್ನ ಬಳಿಯಿದ್ದ ಚಾಕು ತೆಗೆದುಕೊಂಡು ಆ ಹಾವಿನ ಹೆಡೆಯ ಬಳಿ ಸೀಳು ಹಾಕಿ ತಲೆಯ ಭಾಗದಲ್ಲಿದ್ದ ಮಣಿಯನ್ನು ತೆಗದು ಬಿಡುತ್ತಾನೆ.
ನಾಗಮಣಿ ಹೊರ ತೆಗೆಯುವ ವಿಡಿಯೋ ಇಲ್ಲಿದೆ :
ಈ ವಿಡಿಯೋವನ್ನು New Best Stories ಎನ್ನುವ ಯುಟ್ಯೂಬ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.ಇದು ಹಳೆಯ ವಿಡಿಯೋ ಆಗಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ಆದರೆ ಈ ವ್ಯಕ್ತಿ ಹೊರ ತೆಗೆದ ಮಣಿ ನಿಜವಾಗಿಯೂ ನಾಗಮಣಿಯೋ ಅಥವಾ ಅಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ