ಬೆಂಗಳೂರಿನ ಟ್ರಾಫಿಕ್ ಜಾಮ್‌ ಬಗ್ಗೆ ಹೇಳೋದೆ ಬೇಕಾಗಿಲ್ಲ. ಪ್ರತೀ ದಿನ ಅತೀ ಹೆಚ್ಚು ಟ್ರಾಫಿಕ್‌ ಸಮಸ್ಯೆ ಎದುರಿಸುವ ಮಹಾನಗರಗಳಲ್ಲಿ ಬೆಂಗಳೂರು ಸಹ ಒಂದು. ಆದರೆ ನಗರದ ಟ್ಯಾಕ್ಸಿ ಅಥವಾ ಆಟೋ ರಿಕ್ಷಾ ಚಾಲಕರು ಈ ಟ್ರಾಫಿಕ್‌ ಸಮಸ್ಯೆಯಿಂದ ಹೇಗೆ ತಪ್ಪಿಸಿಕೊಳ್ಳೋದು ಎಂಬ ವಿಧಾನವನ್ನು ಹೊಂದಿರುತ್ತಾರೆ. ಇನ್ನು ಅದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಉದ್ಯೋಗಿಯೊಬ್ಬ ತಮಗಾದ ಅನುಭವದ ಬಗ್ಗೆ ಸೋಶಿಯಲ್‌ ಮೀಡಿಯಾದ ಮೂಲಕ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಈ ಮೂರು ರಾಶಿಯ ಹುಡುಗಿಯರಿಗೆ ಭಯವೆಂಬುದೇ ಇಲ್ಲ, ಕಠಿಣ ಸವಾಲು ಗಳನ್ನು ಧೈರ್ಯದಿಂದ ಎದುರಿಸುತ್ತಾರೆ


ಪ್ರಯಾಣಿಕ ಮತ್ತು ಆಟೋರಿಕ್ಷಾ ಚಾಲಕನ ನಡುವಿನ ಸಂಭಾಷಣೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಘಟನೆ ಬಗ್ಗೆ ಪ್ರಯಾಣಿಕ ಜೂನ್ 8 ರಂದು @kulbworks ಎಂಬ ಟಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.


ಪ್ರಯಾಣಿಕ ಹೇಳಿದ್ದು ಹೀಗೆ: 
"ಕಛೇರಿಗೆ ಒಂದು ಆಟೋ ಬುಕ್ ಮಾಡಿದೆ. ದಾರಿ ಮಧ್ಯೆ ವಾಹನಕ್ಕೆ ಗ್ಯಾಸ್‌ ರಿ-ಫಿಲ್ ಮಾಡಬೇಕು ಎಂದು ಚಾಲಕ ನನ್ನ ಬಳಿ ಹೇಳಿದ. ಅದಕ್ಕೆ ನಾನು ಒಪ್ಪಿದೆ. ಆದರೆ ಭಾರೀ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡ ಕಾರಣ, ರಿಕ್ಷಾವನ್ನು ನೇರವಾಗಿ ಕಚೇರಿಗೆ ತೆಗೆದುಕೊಂಡು ಹೋಗುವಂತೆ ಚಾಲಕನಿಗೆ ಹೇಳಿದೆ. ಸ್ವಲ್ಪ ಹೊತ್ತು ಆಲೋಚನೆ ಮಾಡಿದ ಆಟೋರಿಕ್ಷಾ ಚಾಲಕ ನಾನು ನಿರೀಕ್ಷಿಸದ ಪ್ರಶ್ನೆಯೊಂದನ್ನು ಕೇಳಿದ. ಆತ ʼಲಾಗಿನ್‌ ಯಾವಾಗ?ʼ ಎಂದು ಕೇಳುವ ಮೂಲಕ ನನ್ನನ್ನು ಆಶ್ಚರ್ಯಗೊಳಿಸಿದ" ಎಂದು ಬರೆದುಕೊಂಡಿದ್ದಾರೆ. 


ಇನ್ನು ಈ ಘಟನೆಯ ಬಗ್ಗೆ ಮಾಹಿತಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಪ್ರಯಾಣಿಕ ಶೇರ್‌ ಮಾಡಿದ್ದಾರೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ಸಹ ನೀಡಿದ್ದಾರೆ. ಕೆಲವರು ತಮ್ಮ ಅನುಭವಗಳ ಬಗ್ಗೆಯೂ ಬರೆದುಕೊಂಡಿದ್ದಾರೆ. 


ಇದನ್ನು ಓದಿ: Cat Snake Fight: ಹಾವು-ಬೆಕ್ಕಿನ ಕಾದಾಟ- ಶಾಕಿಂಗ್ ವಿಡಿಯೋ ವೈರಲ್


ಒಟ್ಟಾರೆ ಆಟೋ ಚಾಲಕರು ಅಥವಾ ಟ್ಯಾಕ್ಸಿ ಡ್ರೈವರ್‌ಗಳು ತಮ್ಮ ಪ್ರಯಾಣಿಕರನ್ನು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೆ ಹೇಗೆ ಕರೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ತಿಳಿದುಕೊಂಡಿರುತ್ತಾರೆ. ಎಷ್ಟೇ ಕಷ್ಟವಾದರೂ ಸರಿ, ಟ್ರಾಫಿಕ್‌ಗಳನ್ನು ದಾಟಿ ಸ್ಥಳ ಮುಟ್ಟಿಸುವಲ್ಲಿ ಇವರು ನಿಸ್ಸೀಮರಾಗಿರುತ್ತಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.