ನವದೆಹಲಿ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಗುಜರಾತ್‌ನ ಹಳ್ಳಿಯೊಂದರಲ್ಲಿ ಟ್ರ್ಯಾಕ್ಟರ್ ಓಡಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸುಂದರವಾದ ನೀಲಿಬಣ್ಣದ ಬಿಳಿ ಕುರ್ತಾ ಮತ್ತು ದುಪಟ್ಟಾದೊಂದಿಗೆ ಪಲಾಜೋ ಸೆಟ್ ಧರಿಸಿರುವ ನವ್ಯಾ ಅವರು ತಮ್ಮ ಭೇಟಿಯ ಭಾಗವಾಗಿ ಅಲ್ಲಿನ ಜನರನ್ನು ಭೇಟಿಯಾದರು. ಇದೆ ವೇಳೆ  ಅವಳು ತನ್ನ ಐಷಾರಾಮಿ ಕಾರು ಸವಾರಿಯನ್ನು ತ್ಯಜಿಸಿ ಸ್ವತಃ ಟ್ರಾಕ್ಟರ್ ಓಡಿಸಲು ನಿರ್ಧರಿಸಿದಳು.


ಇದನ್ನೂ ಓದಿ: Mia Khalifa: ಕಲ್ಲು ಮನಸ್ಸಿನವರ ಕಣ್ಣಲ್ಲೂ ನೀರು ತರಿಸುತ್ತೆ ಮಿಯಾ ಖಲೀಫಾ ಜೀವನ


ನವ್ಯಾ  ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ  ಪೋಸ್ಟ್ ಮಾಡಿ ಇದಕ್ಕೆ ಗಣೇಶಪುರ, ಗುಜರಾತ್. ಎಂದು ಶೀರ್ಷಿಕೆ ನೀಡಿದ್ದಾರೆ.ಅವರು ಆರಾ ಹೆಲ್ತ್‌ನ ಸಹ-ಸಂಸ್ಥಾಪಕರಾಗಿದ್ದಾರೆ, ಇದು ಮಹಿಳಾ ಕೇಂದ್ರಿತ ಆರೋಗ್ಯ ತಂತ್ರಜ್ಞಾನ ಕಂಪನಿಯಾಗಿದ್ದು, ಅವರ ಇತರ ಸ್ನೇಹಿತರ ಜೊತೆ ಸೇರಿ ಸಮಾಜ ಕಲ್ಯಾಣ ಸಂಸ್ಥೆಗಳ ಜೊತೆ ಕೆಲಸ ಮಾಡುತ್ತಾಳೆ ಮತ್ತು 'ವಾಟ್ ದಿ ಹೆಲ್ ನವ್ಯಾ' ಎಂಬ ಶೀರ್ಷಿಕೆಯ ತನ್ನ ಶೋನಲ್ಲಿ ಪಾಡ್‌ಕ್ಯಾಸ್ಟ್ ಹೋಸ್ಟ್ ಆಗಿದ್ದಾಳೆ. ಪಾಡ್‌ಕಾಸ್ಟ್‌ನಲ್ಲಿ ಅವರ ತಾಯಿ ಶ್ವೇತಾ ಬಚ್ಚನ್ ನಂದಾ ಮತ್ತು ಅವರ ಅಜ್ಜಿ ಜಯಾ ಬಚ್ಚನ್ ಸಹ ಒಂದು ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.



ನವ್ಯಾ ನವೇಲಿ ನಂದಾ ಶ್ವೇತಾ ಬಚ್ಚನ್ ಮತ್ತು ಉದ್ಯಮಿ ನಿಖಿಲ್ ನಂದಾ ಅವರ ಪುತ್ರಿ. ಆಕೆಗೆ ಅಗಸ್ತ್ಯಾನಂದ ಎಂಬ ಕಿರಿಯ ಸಹೋದರನಿದ್ದಾನೆ. ಅವರು ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಜೊತೆಗೆ ಲಂಡನ್‌ನ ಕೆಂಟ್‌ನಲ್ಲಿರುವ ಸೆವೆನೋಕ್ಸ್ ಶಾಲೆಯಲ್ಲಿ ಪದವಿ ಪಡೆದಿದ್ದಾರೆ. 


ಇದನ್ನೂ ಓದಿ: "ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ"


ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಚಿಕ್ಕ ವಯಸ್ಸಿನಿಂದಲೇ ಉದ್ಯಮಿಯಾಗಿ ಹೊರಹೊಮ್ಮಿದರು. ಜನರು ಆಕೆಯನ್ನು ಬಾಲಿವುಡ್‌ನ ಗ್ಲಾಮರ್ ಜಗತ್ತಿಗೆ ಸೇರುತ್ತಾರೆ ಎಂದು ಭಾವಿಸುತ್ತಿದ್ದಾಗ, ಅವರು ತಮ್ಮ ಸಾಹಸೋದ್ಯಮ ಆರಾ ಹೆಲ್ತ್ ಮೂಲಕ ಮಾನಸಿಕ ಆರೋಗ್ಯದ  ಬಗ್ಗೆ ಹೆಚ್ಚು ಒತ್ತನ್ನು ನೀಡಿದರು.ನವ್ಯಾ ಅವರು 2020 ರಲ್ಲಿ ಆರಾ ಹೆಲ್ತ್ ಸಂಸ್ಥೆಯನ್ನು ಮಲ್ಲಿಕಾ ಸಾಹ್ನಿ, ಪ್ರಜ್ಞಾ ಸಬೂ ಮತ್ತು ಅಹಲ್ಯಾ ಮೆಹ್ತಾ ಅವರೊಂದಿಗೆ ಸಹ-ಸ್ಥಾಪಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ