ಏಕಕಾಲದಲ್ಲಿ ಗರ್ಭಿಣಿಯರಾದ ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡೋ 14 ನರ್ಸ್‌ಗಳು!
ಅಮೆರಿಕಾದ ಮಿಸ್ಸೋರಿ ರಾಜ್ಯದ ಕನ್ಸಾನ್ ಸಿಟಿಯಲ್ಲಿರುವ ಸೈಂಟ್ ಲೂಕರ್ ಈಸ್ಟ್ ಆಸ್ಪತ್ರೆಯ 14 ಮಂದಿ ನರ್ಸ್‌ಗಳು ಏಕಕಾಲಕ್ಕೆ ಗರ್ಭ ಧರಿಸಿದ್ದಾರೆ. ಈ 14 ಮಂದಿ ಒಂದೇ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬೋದು ವಿಶೇಷ.
ಅಮೆರಿಕಾದ ವಾಷಿಂಗ್ಟನ್‌ನಲ್ಲಿ ಯಾರೂ ಊಹಿಸಲಾರದ ಅಪರೂಪದ ಘಟನೆಯೊಂದು ನಡೆದಿದೆ. ಇಲ್ಲಿನ ಆಸ್ಪತ್ರೆಯೊಂದರ ಹೆರಿಗೆ ವಾರ್ಡ್‌ನಲ್ಲಿ ಕೆಲಸ ಮಾಡುವ 14 ಮಂದಿ ನರ್ಸ್‌ಗಳು ಏಕಕಾಲಕ್ಕೆ ಗರ್ಭಿಣಿಯರಾಗಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅಮೆರಿಕಾದ ಮಿಸ್ಸೋರಿ ರಾಜ್ಯದ ಕನ್ಸಾನ್ ಸಿಟಿಯಲ್ಲಿರುವ ಸೈಂಟ್ ಲೂಕರ್ ಈಸ್ಟ್ ಆಸ್ಪತ್ರೆಯ 14 ಮಂದಿ ನರ್ಸ್‌ಗಳು ಏಕಕಾಲಕ್ಕೆ ಗರ್ಭ ಧರಿಸಿದ್ದಾರೆ. ಈ 14 ಮಂದಿ ಒಂದೇ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬೋದು ವಿಶೇಷ.
ಇದನ್ನೂ ಓದಿ: Used Cars: ಕೇವಲ 5.9 ಲಕ್ಷ ರೂಪಾಯಿಗೆ ಮನೆಗೆ ತನ್ನಿ Mahindra Thar
ಇನ್ನು ಒಂದೇ ಸಮಯದಲ್ಲಿ ಗರ್ಭಿಣಿಗಳಾಗಿರುವ ಸಂತೋಷದಲ್ಲಿರುವ ನರ್ಸ್‌ಗಳು ಫೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರ ಫೋಟೋಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಧ ವಿಧವಾದ ಕಮೆಂಟ್‌ಗಳು ಬಂದಿವೆ.
ಇನ್ನು ಈ ಗರ್ಭಿಣಿಯರ ಗುಂಪುನಲ್ಲಿರುವ ಓರ್ವ ನರ್ಸ್ ಈ ಬಗ್ಗೆ ಮಾತನಾಡಿದ್ದು, "ಇದು ನನ್ನ ಚೊಚ್ಚಲ ಹೆರಿಗೆ. ಗರ್ಭಿಣಿಯಾದ 12 ವಾರಗಳ ಕಾಲ ಈ ಬಗ್ಗೆ ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ಆ ಬಳಿಕ ಒಬ್ಬೊಬ್ಬರು ತಾವು ಗರ್ಭಿಣಿ ಎಂಬ ವಿಷಯ ಹೇಳಲು ಆರಂಭಿಸಿದರು. ಹಾಗಾಗಿ ನಾನು ಕೂಡ ತಾಯಿಯಾಗುತ್ತಿರುವುದರ ಬಗ್ಗೆ ಘೋಷಣೆ ಮಾಡಿದೆ" ಎಂದು ಹೇಳಿದ್ದಾರೆ. ಈ ಮಹಿಳೆಯ ಹೆಸರು ಕೈತಿಲಿನ್ ಹಾಲ್. ಇವರೇ ಮೊದಲು ಗರ್ಭಿಣಿಯಾಗಿದ ನರ್ಸ್. ಇವರು ಕಳೆದ ಕೆಲ ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ 13 ಮಂದಿ ನರ್ಸ್‌ಗಳು ತಮ್ಮ ಕಂದಮ್ಮನನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದಾರೆ. ಈ ಸಂತಸದ ವಿಚಾರವನ್ನ ಸೈಂಟ್ ಲೂಕ್ ಆಸ್ಪತ್ರೆ ಮಂದಿ ಸಹ ಹಂಚಿಕೊಂಡಿದ್ದಾರೆ. "ಇತರ ತಾಯಿಯಂದಿರಿಗೆ ತೋರುವ ಕಾಳಜಿ, ಪ್ರೀತಿಯನ್ನು ನಮ್ಮ ಸಿಬ್ಬಂದಿಗಳಿಗೂ ತೋರುತ್ತೇವೆ. ಈ ವಿಶೇಷ ಸಂದರ್ಭಕ್ಕೆ ನಮ್ಮ ಆಸ್ಪತ್ರೆ ಸಾಕ್ಷಿಯಾಗಲಿದೆ' ಎಂದು ಆಸ್ಪತ್ರೆ ತನ್ನ ಫೇಸ್‌ಬುಕ್‌ನ ಅಧಿಕೃತ ಖಾತೆಯಲ್ಲಿ ಬರೆದುಕೊಂಡಿದೆ.
ಇದನ್ನೂ ಓದಿ: ರೋಹಿತ್ ಟೆನ್ಷನ್ ಹೆಚ್ಚಿಸಿದ ಈ ಮಾರಣಾಂತಿಕ ಬೌಲರ್!
ಸದ್ಯ 13 ಮಂದಿ ಗರ್ಭಿಣಿಯರು ತಮ್ಮ ಕಂದಮ್ಮನನ್ನು ಬರ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಇನ್ನು ಪ್ರತಿಯೊಬ್ಬರಿಗೆ ಹೆರಿಗೆ ದಿನಾಂಕ ಬೇರೆ ಬೇರೆಯಾಗಿದ್ದು, ಡಿಸೆಂಬರ್ ಅಂತ್ಯದವರೆಗೆ ಮುಂದುವರಿಯಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.