Hasin Jahan Viral Post: ಭಾರತ ಈ ವರ್ಷ ತನ್ನ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ನಡುವೆ ಟೀಂ ಇಂಡಿಯಾದ ಅನುಭವಿ ಆಟಗಾರನ ಪತ್ನಿಯ ಸೋಶಿಯಲ್ ಮೀಡಿಯಾ ಪೋಸ್ಟ್ ವೊಂದು ಎಲ್ಲರ ಗಮನ ಸೆಳೆದಿದೆ. ಈ ಆಟಗಾರನ ಪತ್ನಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೇಶದ ಹೆಸರನ್ನು ಬದಲಾಯಿಸುವಂತೆ ಮನವಿ ಮಾಡಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಆಕೆ ಈ ವಿಶೇಷ ಮನವಿ ಮಾಡಿದ್ದಾಳೆ. ಪ್ರಸ್ತುತ ಆಕೆ ಮಾಡಿರುವ ಈ ಪೋಸ್ಟ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಈ ಆಟಗಾರನ ಪತ್ನಿ ಮಾಡಿದ ಮನವಿ ಏನು?
ಸದಾ ಒಂದಿಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ದೇಶದ ಹೆಸರನ್ನು ಬದಲಾಯಿಸುವಂತೆ ಮನವಿ ಮನವಿ ಮಾಡಿದ್ದಾಳೆ. ಅವಳು ಇತ್ತೀಚೆಗೆ ತನ್ನ ಇನ್ಸ್ಟಾಗ್ರಾಮ್ ಖಾತೆಗೆಲ್ಲಿ  ತಮ್ಮ ನೃತ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾಳೆ, ಈ ಪೋಸ್ಟ್ ನ ಶೀರ್ಷಿಕೆಯಲ್ಲಿ ಅವಳು ಈ ಮನವಿಯನ್ನು ಮಾಡಿದ್ದಾಳೆ. ವೀಡಿಯೊವನ್ನು ಹಂಚಿಕೊಂಡು ಶೀರ್ಷಿಕೆ ಬರೆದುಕೊಂಡಿರುವ ಹಸಿನ್ ಜಹಾನ್, 'ನಮ್ಮ ದೇಶ, ನಮ್ಮ ಗೌರವ. ಐ ಲವ್ ಭಾರತ್. ನಮ್ಮ ದೇಶದ ಹೆಸರು ಕೇವಲ  ಹಿಂದೂಸ್ತಾನ್ ಅಥವಾ ಭಾರತ್ ಎಂದು ಮಾತ್ರ ಆಗಿರಬೇಕು. ಹೀಗಾಗಿ ಗೌರವಾನ್ವಿತ ಪ್ರಧಾನ ಮಂತ್ರಿಗಳು, ಮಾನ್ಯ ಗೃಹ ಸಚಿವರಿಗೆ 'ಇಂಡಿಯಾ'  ಹೆಸರನ್ನು ಬದಲಾಯಿಸಲು ನಾನು ವಿನಂತಿಸುತ್ತೇನೆ, ಇಡೀ ಜಗತ್ತು ನಮ್ಮ ದೇಶವನ್ನು ಭಾರತ ಅಥವಾ ಹಿಂದೂಸ್ತಾನ್ ಎಂಬ ಹೆಸರಿನಿಂದ ಮಾತ್ರ ಗುರುತಿಸಬೇಕೆ, ಹೊರತು 'ಇಂಡಿಯಾ' ಎಂಬ ಹೆಸರಿನಿಂದ ಅಲ್ಲ' ಎಂದು ಬರೆದುಕೊಂಡಿದ್ದಾಳೆ.


ಇದನ್ನೂ ಓದಿ-Mohammed Shami : ಮೊಹಮ್ಮದ್ ಶಮಿ ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ ಪತ್ನಿ ಹಸಿನ್ ಜಹಾನ್!


ಯಾವಾಗಲು ವಿವಾದಗಳೊಂದಿಗೆ ನಂಟು 
ವೃತ್ತಿಪರವಾಗಿ ಹಸೀನ್ ಜಹಾನ್ ಓರ್ವ ನಟಿಯಾಗಿದ್ದಾಳೆ. ಇದಕ್ಕೂ ಮೊದಲು ಹಸೀನ್ ಓರ್ವ ವೃತ್ತಿಪರ ಮಾಡೆಲ್ ಆಗಿದ್ದಳು ಮತ್ತು ಆಕೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಾಗಿ ಚಿಯರ್ ಲೀಡರ್ ಕೆಲಸ ಮಾಡುತ್ತಿದ್ದಳು. ಆಗಲೇ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಮತ್ತು ಆಕೆಯ ನಡುವೆ ಪ್ರೇಮ ಚಿಗುರಿತ್ತು ಮತ್ತು ಇಬ್ಬರು ಪರಸ್ಪರ ಹೃದಯ ವಿನಿಮಯ ಮಾಡಿಕೊಂಡಿದ್ದರು. 2014 ರಲ್ಲಿ ಶಮಿ ಜೊತೆಗೆ ವಿವಾಹವಾದ ಬಳಿಕ ಹಸೀನ್ ಮಾಡೆಲಿಂಗ್ ವೃತ್ತಿಯನ್ನು ತೊರೆದಿದ್ದಳು. ಪ್ರಸ್ತುತ ಆಕೆ ಬಂಗಾಳಿ ಭಾಷೆಯ ತನ್ನ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಳೆ.


ಇದನ್ನೂ ಓದಿ-Rishabh Pant : ಊರ್ವಶಿ ಜೊತೆಗಿನ ವಿವಾದದ ನಡುವೆ ಈ ಪೋಸ್ಟ್ ಹಂಚಿಕೊಂಡ ರಿಷಬ್ ಪಂತ್!


ಶಮಿ ಹಾಗೂ ಹಸೀನ್ ಮಧ್ಯೆ ವಿವಾದ
ಪ್ರಸ್ತುತ ಪತಿ ಹಾಗೂ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರೊಂದಿಗೆ ಸಾಗುತ್ತಿರುವ ವಿವಾದದ ಹಿನ್ನೆಲೆ ಹಸೀನ್ ದೀರ್ಘ ಕಾಲದಿಂದ ತನ್ನ ಪುತ್ರಿಯ ಜೊತೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. 2018 ರಲ್ಲಿ ಆಕೆ ತನ್ನ ಪತಿಯ ಮೇಲೆ ಶಾರೀರಿಕ ಕಿರುಕುಳ, ಬಲಾತ್ಕಾರ, ಕೊಲೆಗೆ ಯತ್ನ ಹಾಗೂ ಕೌಟುಂಬಿಕ ಹಿಂಸೆಯಂತಹ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಶಮಿ ವಿರುದ್ಧ ಆಕೆ ಐಪಿಸಿಯ ಸೆಕ್ಷನ್ 498 ಎ (ವರದಕ್ಷಿಣೆ ಕಿರುಕುಳ) ಮತ್ತು ಸೆಕ್ಷನ್ 354 (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರೆ, ಶಮಿಯ ಸಹೋದರ ಹಸಿದ್ ಅಹ್ಮದ್ ವಿರುದ್ಧ ಸೆಕ್ಷನ್ 354 (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಶಮಿ ಮತ್ತು ಹಸಿನ್ ಜಹಾನ್ ಗೆ ಓರ್ವ ಪುತ್ರಿ ಇದ್ದು, ಪ್ರಸ್ತುತ ಆಕೆ ಹಸೀನ್ ಜೊತೆಗೆ ವಾಸಿಸುತ್ತಿದ್ದಾಳೆ.



ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.