ನವದೆಹಲಿ: ತಾಯಿಯೊಬ್ಬಳು ಹೆತ್ತ ಮಗುವಿಗೆ ಮನಸೋಇಚ್ಛೆ ಥಳಿಸುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ಘಟನೆ ಗುಜರಾತ್​​ನಲ್ಲಿ ನಡೆದಿದೆ ಎನ್ನಲಾಗಿದ್ದು, ತಾಯಿಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  


COMMERCIAL BREAK
SCROLL TO CONTINUE READING

ತಾಯಿ ಮಗಳನ್ನು ಮನಬಂದಂತೆ ಥಳಿಸುತ್ತಿರುವ ದೃಶ್ಯವನ್ನು ಆಕೆಯ ತಂದೆಯೇ ಚಿತ್ರೀಕರಿಸಿದ್ದಾನೆ. ಪುಟ್ಟ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ತಾಯಿ ಮತ್ತು ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದ ತಂದೆಯ ವಿರುದ್ಧ ನೆಟಿಜನ್ಸ್‌ಗಳು ಕಿಡಿಕಾರಿದ್ದಾರೆ. 


ಇದನ್ನೂ ಓದಿ: Ration Card: ರೇಷನ್ ಕಾರ್ಡ್‌ದಾರರಿಗೆ ಸಿಗಲಿದೆ ಕಾಂಡೋಮ್ ಜೊತೆ ಈ 46 ವಸ್ತುಗಳು!


ವೈರಲ್​ ಆಗಿರುವ ಈ ವಿಡಿಯೋದಲ್ಲಿ ತಾಯಿ ಮಗಳಿಗೆ ಸೌಟಿನಿಂದ ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಮಗಳಿಗೆ ತಾಯಿ ಹೊಡೆಯುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸಿದ ತಂದೆ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. 


75 ವರ್ಷ ವಯಸ್ಸಿನ ನಂತರ ಮೋದಿ ಪ್ರಧಾನಿಯಾಗಿ ಮುಂದುವರೆಯುತ್ತಾರಾ? ಅಮಿತ್ ಶಾ ಹೇಳಿದ್ದೇನು?


ಇದು ವೈರಲ್​ ಆಗುತ್ತಿದ್ದಂತೆ ಅನೇಕರು ತಾಯಿಯ ನಡೆಗೆ ಕಿಡಿಕಾರಿದ್ದಾರೆ. ಅಲ್ಲದೇ ವಿಡಿಯೋ ರೆಕಾರ್ಡ್‌ ಮಾಡಿದ ತಂದೆಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪುಟ್ಟ ಹುಡುಗಿಗೆ ಅಮಾನುಷವಾಗಿ ಥಳಿಸಿದ ತಾಯಿ ಮತ್ತು ವಿಡಿಯೋ ಮಾಡಿದ ತಂದೆ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ನೆಟಿಜನ್ಸ್‌ ಆಗ್ರಹಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.