Viral Video: ಮೊಬೈಲ್ನಲ್ಲಿ ಮಾತನಾಡುತ್ತ ಮಗುವನ್ನು ಫ್ರಿಡ್ಜ್ ನಲ್ಲಿಟ್ಟ ತಾಯಿ.. ವಿಡಿಯೋ ವೈರಲ್
Mother kept child in fridge video: ಕೆಲವರು ಫೋನ್‌ನಲ್ಲಿ ಮಾತನಾಡುತ್ತಾ ತಾವು ಅಪಾಯಕ್ಕೆ ಸಿಲುಕುವುದು ಮಾತ್ರವಲ್ಲದೆ ಇತರರನ್ನು ಅಪಾಯಕ್ಕೆ ಸಿಲುಕಿಸುತ್ತಾರೆ.
Viral Video: ಇಂದಿನ ದಿನಗಳಲ್ಲಿ ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಸ್ಮಾರ್ಟ್ ಫೋನ್ ಇಲ್ಲದೇ ಒಂದೂ ಹೆಜ್ಜೆ ಇಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ, ಪ್ರತಿದಿನ ಹೊಸ ನವೀಕರಣಗಳು ಮತ್ತು ತಂತ್ರಜ್ಞಾನಗಳು ಹೊರಹೊಮ್ಮುತ್ತಿವೆ. ಸ್ಮಾರ್ಟ್ ಫೋನ್ ಗಳಲ್ಲಿಯೂ ಹೊಸ ಹೊಸ ಆ್ಯಪ್ ಗಳು ಹುಟ್ಟಿಕೊಳ್ಳುತ್ತಿವೆ. ಕೆಲವು ಮಹಿಳೆಯರು ಮನೆಯಲ್ಲಿ ಅಡುಗೆ ಮಾಡುವಾಗ ಫೋನಿನಲ್ಲಿ ಮಾತನಾಡುತ್ತಾರೆ. ಕೆಲವರು ಫೋನಿನಲ್ಲಿ ಮಾತನಾಡುತ್ತಾ ಒಂದಷ್ಟು ಎಡವಟ್ಟುಗಳನ್ನ ಮಾಡಿದ ಉದಾಹರಣೆಯೂ ಇದೆ.
ಕೆಲವರು ಫೋನ್‌ನಲ್ಲಿ ಮಾತನಾಡುತ್ತಾ ತಾವು ಅಪಾಯಕ್ಕೆ ಸಿಲುಕುವುದು ಮಾತ್ರವಲ್ಲದೆ ಇತರರನ್ನು ಅಪಾಯಕ್ಕೆ ಸಿಲುಕಿಸುತ್ತಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ತಾಯಿಯೊಬ್ಬರು ಫೋನ್‌ನಲ್ಲಿ ಮಾತನಾಡುತ್ತ ಬಹುದೊಡ್ಡ ಎಡವಟ್ಟು ಮಾಡಿದ್ದಾಳೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಟ್ರಕ್ ಪಲ್ಟಿಯಾಗಿ 15 ಜನರ ಧಾರುಣ ಸಾವು
ಮನೆಯಲ್ಲಿ ಮಗು ಕೆಳಗೆ ಆಟವಾಡುತ್ತ ಕುಳಿತಿದೆ. ಮಗುವಿನ ಪಕ್ಕದಲ್ಲಿ ತಾಯಿ ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ. ಅವಳ ಗಮನವೆಲ್ಲ ಮಗುವಿಗಿಂತಲೂ ಹೆಚ್ಚಾಗಿ ಫೋನಿನ ಮೇಲಿತ್ತು. ತರಕಾರಿ ಕಟ್ ಮಾಡುತ್ತ ಫೋನ್‌ನಲ್ಲಿ ಮಾತನಾಡುತ್ತಿದ್ದ ಈ ತಾಯಿ ಥಟ್ಟನೆ ಎದ್ದು.. ಮಗುವನ್ನು ತೆಗೆದುಕೊಂಡು ಫ್ರಿಡ್ಜ್ ನ ಬಾಗಿಲು ತೆರೆದು ಅದರಲ್ಲಿ ಇಟ್ಟು ಬಿಡುತ್ತಾಳೆ.
ಚಲಿಸುತ್ತಿರುವ ಬಸ್ ಗೆ ಧಿಡೀರ್ ಬೆಂಕಿ...8 ಜನರ ಧಾರುಣ ಸಾವು
ಮಗು ಅಳುತ್ತಿರುವುದನ್ನು ಕಂಡು ಪತಿ ಬೆಚ್ಚಿಬೀಳುತ್ತಾನೆ. ಪತಿ ಸಮಯಕ್ಕೆ ಸರಿಯಾಗಿ ಬಂದಿದ್ದರಿಂದ ಮಗುವನ್ನು ಆ ದೇವರೇ ಕಾಪಾಡಬೇಕಿತ್ತೇನೋ ಎಂದು ನೆಟ್ಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.