ಮರಿಯ ಪ್ರಾಣ ಉಳಿಸುವುದಕ್ಕೋಸ್ಕರ ಹಾವಿನ ಜೊತೆ ಸೆಣೆಸಾಡಿ ಗೆದ್ದ ಇಲಿ ! ಇಲ್ಲಿದೆ ನೋಡಿ ವಿಡಿಯೋ
ಮಕ್ಕಳ ವಿಚಾರ ಬಂದಾಗ ತಾಯಿಯಾದವಳು ಯಾವಾಗ ದುರ್ಗಿ ಅವತಾರ ತಾಳಿ ಬಿಡುತ್ತಾಳೆ ಎನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಾಗುವುದಿಲ್ಲ. ಅದು ಮನುಷ್ಯರಾದರೂ ಸರಿ, ಪ್ರಾಣಿ ಪಕ್ಷಿಗಳಾದರೂ ಸರಿ.
ಬೆಂಗಳೂರು : ತಾಯಿಯನ್ನು ದೇವರಿಗೆ ಹೋಲಿಸುತ್ತಾರೆ. ಎಲ್ಲಾ ಕಡೆ ದೇವರ ಉಪಸ್ಥಿತಿ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಈ ಭೂಮಿಯ ಮೇಲೆ ತಾಯಿಯನ್ನು ಸೃಷ್ಟಿ ಮಾಡಿದನಂತೆ ದೇವರು . ಅಮ್ಮನ ತ್ಯಾಗ, ಮಮತೆ ನೋಡಿದಾಗ ಈ ಮಾತು ಉತ್ಪ್ರೇಕ್ಷೆ ಅಲ್ಲ ಅನ್ನಿಸುತ್ತದೆ. ತಾಯಿ ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ತನ್ನ ಮಕ್ಕಳ ಬಳಿ ಯಾವ ಅಪಾಯವೂ ಸುಳಿಯದಂತೆ ನೋಡಿಕೊಳ್ಳುತ್ತಾಳೆ. ಮಕ್ಕಳಿಗೆ ಬರುವ ಅಪಾಯ ಮೊದಲು ತನ್ನನ್ನು ಹಾದು ಹೋಗಬೇಕು ಎಂದು ಸೆಟೆದು ನಿಲ್ಲುತ್ತಾಳೆ.
ಮಕ್ಕಳ ವಿಚಾರ ಬಂದಾಗ ತಾಯಿಯಾದವಳು ಯಾವಾಗ ದುರ್ಗಿ ಅವತಾರ ತಾಳಿ ಬಿಡುತ್ತಾಳೆ ಎನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಾಗುವುದಿಲ್ಲ. ಅದು ಮನುಷ್ಯರಾದರೂ ಸರಿ, ಪ್ರಾಣಿ ಪಕ್ಷಿಗಳಾದರೂ ಸರಿ. ಮಕ್ಕಳು, ಮರಿಗಳ ರಕ್ಷಣೆಗೆ ಯಾರ ಜೊತೆ ಕೂಡಾ ಸೆಣೆಸಾಡಲು ಸಿದ್ದಳಾಗಿ ನಿಲ್ಲುವವಳೇ ತಾಯಿ. ಈ ವಿಡಿಯೋ ಕೂಡಾ ಇದಕ್ಕೊಂದು ಉದಾಹರಣೆ.
ಇದನ್ನೂ ಓದಿ : ಎನ್ರೋ.. ಇದು ಮುದುಕಿ ಜೊತೆ ಆಟ..! ಪುಷ್ಪಾ ಸಾಂಗ್‌ಗೆ ಅಜ್ಜಿ ಜೊತೆ ಯುವಕನ ಡಾನ್ಸ್.. ವಿಡಿಯೋ ವೈರಲ್..
ಸರ್ಪದ ಜೊತೆ ಇಲಿಯ ಕಾದಾಟ :
ರಸ್ತೆ ಬದಿಯಲ್ಲಿ ಹಾವೊಂದು ಇಲಿ ಮರಿಯನ್ನು ಬಾಯಿಯಲ್ಲಿ ಹಿಡಿದುಕೊಂಡು ವೇಗವಾಗಿ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ತನ್ನ ಮರಿಯನ್ನು ಆಹಾರವಾಗಿಸಲು ಸರ್ಪ ಕೊಂಡೊಯ್ಯುತ್ತಿದೆ ಎಂದು ತಾಯಿ ಇಲಿಗೆ ತಿಳಿದಿದ್ದೇ ತಡ ಒಂದು ಕ್ಷಣವನ್ನು ಆ ತಾಯಿ ವ್ಯರ್ಥ ಮಾಡಲಿಲ್ಲ. ಚಂಗನೆ ಹಾರುತ್ತಾ ಬಂದು ಸರಸರನೇ ಹರಿದಾಡುತ್ತಿದ್ದ ಸರ್ಪದ ಮೇಲೆರಗಿದೆ. ಸರ್ಪ ತನ್ನ ಮರಿಯನ್ನು ಬಿಡುವವರೆಗೂ ನಿರಂತರವಾಗಿ ಇಲಿ ಕಾದಾಡಿದೆ.
ಕೊನೆಗೂ ತಾಯಿ ಇಲಿಯ ಮುಂದೆ ಹಾವು ಸೋಲೋಪ್ಪುವಂತಾಯಿತು. ತನ್ನ ಸೋಲನ್ನು ಒಪ್ಪಿಕೊಂಡು ಇಲಿ ಮರಿಯನ್ನು ಅಲ್ಲಿಯೇ ಬಿಟ್ಟು ಹಿಂತಿರುಗಿಯೂ ನೋಡದೆ ಹಾವು ಅಲ್ಲಿಂದ ಓಡಿಹೋಗಿದೆ. ಇನ್ನು ಇಲಿ ಕೂಡಾ, ಹಾವಿನ ಹಿಂದೆಯೇ ಒಂದಷ್ಟು ದೂರ ಓಡಿಸಿಕೊಂಡು ಹೋಗಿ, ಸರ್ಪ ಕಣ್ಮರೆಯಾಯಿತು ಎನ್ನುವುದನ್ನು ಖಚಿತಪಡಿಸಿಕೊಂಡ ಬಳಿಕವೇ ತನ್ನ ಮರಿ ಬಳಿ ಹಿಂದುರುಗಿ ಬರುತ್ತದೆ.
ಕಂದಮ್ಮನ ಹಸಿವು ನೀಗಿಸಲು ರೈಲು ಇಳಿದ ತಾಯಿ, ಅಷ್ಟರಲ್ಲಿಯೇ ಚಲಿಸಿದ ರೈಲು..! ಮುಂದಾಗಿದ್ದು ಅದ್ಭುತ.. ವಿಡಿಯೋ ನೋಡಿ..
ಐಎಫ್‌ಎಸ್ ಅಧಿಕಾರಿ ಸುರೇಂದ್ರ ಮೆಹ್ರಾ ಅವರು ತಮ್ಮ ಟ್ವಿಟ್ಟರ್ ಪುಟದಲ್ಲಿ ಈ ವಿಡಿಯೋ ವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.