ಗೋವಾಗೆ ಹೋಗೋಕೆ ಕೇವಲ 85 ರೂ. ವಿಮಾನ ದರ..! ಇದು 100% ಸತ್ಯ ಗುರು
Goa Flight ticket price : ಕೇವಲ 85 ರೂಪಾಯಿಗೆ ಎನ್ ಬರುತ್ತೇ ಹೇಳಿ. ಆದ್ರೆ, ನಮ್ಮ ದೇಶದ ಆರ್ಥಿಕ ರಾಜಧಾನಿ ಮುಂಬೈನಿಂದ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ಗೋವಾಗೆ ಪ್ರಯಾಣಿಸಿದ ವಿಮಾನ ಟಿಕೆಟ್ ಬೆಲೆ ಕೇವಲ 85 ರೂಪಾಯಿಗಳು ಮಾತ್ರ ಅಂದ್ರೆ ನೀವು ನಂಬಲೇಬೇಕು.
Goa flight ticket viral : ವಿಮಾನ ಪ್ರಯಾಣ ಅಂದ್ರೆ ಬೇಡಪ್ಪಾ.. ಟಿಕೆಟ್ ದರ ಜಾಸ್ತಿ ಅಂತ ಅದರ ತಂಟೆಗೆ ಹೋಗಲ್ಲ. ಫ್ಲೈಟ್ ಟಿಕೆಟ್ ದರ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ವಿಮಾನವನ್ನ ದೂರದಿಂದಲೇ ನೋಡಿ ಖುಷಿ ಪಡೋದು ಒಳ್ಳೆಯದು ಎನ್ನುವಂತಿದೆ. ಇದರ ನಡುವೆ ಗೋವಾ ಟಿಕೆಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರಯಾಣ ದರ ನೋಡಿದ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ.
ಇಲ್ಲಿ ಮ್ಯಾಟರ್ ಇರೋದು ಗೋವಾದಲ್ಲ, ಬದಲಿಗೆ ಟಿಕೆಟ್ ದರ. ಕೇವಲ 85 ರೂಪಾಯಿಗೆ ಎನ್ ಬರುತ್ತೇ ಹೇಳಿ. ಆದ್ರೆ, ನಮ್ಮ ದೇಶದ ಆರ್ಥಿಕ ರಾಜಧಾನಿ ಮುಂಬೈನಿಂದ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ಗೋವಾಗೆ ಪ್ರಯಾಣಿಸಿದ ವಿಮಾನ ಟಿಕೆಟ್ ಬೆಲೆ ಕೇವಲ 85 ರೂಪಾಯಿಗಳು ಮಾತ್ರ ಅಂದ್ರೆ ನೀವು ನಂಬಲೇಬೇಕು. ಯಸ್.. ಆದರೆ, ಈ ವಿಮಾನದ ಟಿಕೆಟ್ ದರ ಈಗಿನದ್ದು ಅಲ್ಲ. ಇದು 1975 ರ ಇಂಡಿಯನ್ ಏರ್ಲೈನ್ಸ್ ವಿಮಾನದ ಟಿಕೆಟ್ ದರ ಆಗಿದೆ.
ಭಕ್ತರ ಗಮನಕ್ಕೆ : ತಿರುಪತಿಯಲ್ಲಿ ಈ ತಪ್ಪು ಮಾಡಿದ್ರೆ ದೇವರ ದರ್ಶನ ಸಿಗಲ್ಲ..!
1975 ರಲ್ಲಿ ಮುಂಬೈನಿಂದ ಗೋವಾಗೆ ಏರ್ ಇಂಡಿಯಾ ವಿಮಾನದ ಮೂಲಕ ಪ್ರಯಾಣಿಸಿದ ಟಿಕೆಟ್ ಇತ್ತೀಚೆಗೆ ನೆಟಿಜನ್ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಈ ತಲೆಮಾರಿನ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.. ನಂತರ ಇದು ಇಂದಿನ ವಿಮಾನ ದರ ಅಲ್ಲ ಅಂತ ತಿಳಿದು ಸ್ವಲ್ಪ ಸಾಮಾಧಾನ ಆಗಿದ್ದಾರೆ. ವೈರಲ್ ಆದ ಬೋರ್ಡಿಂಗ್ ಪಾಸ್‌ನಲ್ಲಿರುವ ವಿವರಗಳನ್ನು ನಾವು ನೋಡಿದರೆ, 11/2/1975 ರಂದು, ಏರ್ ಇಂಡಿಯಾ ಪ್ರಯಾಣಿಕರು ಮುಂಬೈನಿಂದ ಗೋವಾಗೆ ಹೋಗಿದ್ದರು ಎಂದು ತಿಳಿಯುತ್ತದೆ.
ಸೆಪ್ಟೆಂಬರ್ 1988 ರಲ್ಲಿ ಮುಂಬೈನಿಂದ ಗೋವಾಗೆ ಹೋದಾಗ, ವಿಮಾನ ಟಿಕೆಟ್ ಬೆಲೆ ರೂ. 435 ಎಂದು ನೆಟ್ಟಿಗರು ತಮ್ಮ ಅನುಭವ ಹಂಚಿಕೊಂಡರು. 1974ರಲ್ಲಿ ಮಂಗಳೂರಿನಿಂದ ಮುಂಬೈಗೆ ವಿಮಾನ ಟಿಕೆಟ್ ದರ ರೂ. 280 ಇದ್ದಂತೆ ಮತ್ತೊಬ್ಬ ನೆಟಿಜನ್ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅದೇ ಸಮಯದಲ್ಲಿ ಮತ್ತೊಬ್ಬ ಟ್ವಿಟರ್ ಬಳಕೆದಾರರು.. 1982 ರಲ್ಲಿ ಮುಂಬೈನಿಂದ ಅಹಮದಾಬಾದ್‌ಗೆ ವಿಮಾನ ಟಿಕೆಟ್ ದರಗಳು ರೂ. 200 ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: Viral Video : ಬಾಳೆಹಣ್ಣಿನ ಸಿಪ್ಪೆ ತೆಗೆದು ತಿನ್ನುವ ಸ್ಮಾರ್ಟ್ ಆನೆ.. ವಿಡಿಯೋ ನೋಡಿ ಅಚ್ಚರಿ ಪಡ್ತೀರಾ
ವಿಮಾನ ಪ್ರಯಾಣ ಎಷ್ಟು ದುಬಾರಿಯಾಗಿದೆ ಎಂದು ನೆಟಿಜನ್‌ಗಳು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮುಂಬೈನಿಂದ ಗೋವಾಕ್ಕೆ ವಿಮಾನ ಟಿಕೆಟ್ ಶುಲ್ಕದ ಬಗ್ಗೆ ಹೇಳುವುದಾದರೆ.. ರೂ. 2,300 ವರೆಗೆ ಇವೆ. 2800 ರೂಪಾಯಿಗಳಿಂದ ರೂ. 3 ಸಾವಿರದವರೆಗೂ ಇವೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.