Vijayapriya Nityananda: ಭಾರತದ ಸಾಧ್ವಿಯರಂತೆ ಉಡುಗೆ... ತಲೆಯ ಮೇಲೆ ದಪ್ಪದಪ್ಪ ಕೂದಲು... ಹಣೆಯ ಮೇಲೆ ತಿಲಕ... ಕುತ್ತಿಗೆಯಲ್ಲಿ ರುದ್ರಾಕ್ಷ ಜಪಮಾಲೆ...ಕೇಸರಿ ಬಟ್ಟೆಗಳು... ಈ ಯುವತಿಯನ್ನು ಕಂಡರೆ ಯಾರಿಗಾದರೂ, ಈಕೆ ಸಾಧ್ವಿಯೇನೋ ಎಂದು ಅನಿಸದೆ ಇರದು. ಆದರೆ ಈಕೆಯ ಹಿನ್ನೆಲೆ ನೋಡಿದರೆ ನಿಮಗೆ ಅಚ್ಚರಿಯಾಗದೆ ಇರದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಇವ್ರು ನಿಜವಾಗ್ಲೂ ವಿಶ್ವಸುಂದರಿನೇ ಬಿಡಿ.. ಅಪರೂಪಕ್ಕೆ ಸೀರೆಯಲ್ಲಿ ಕಂಡ ಐಶ್ವರ್ಯ ರೈ! ಫೋಟೋಸ್‌ ನೋಡಿ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳ್ತಿರ


ಭಾರತದಲ್ಲಿ ಅನೇಕ ಪ್ರಕರಣ ಎದುರಿಸಿ ಪರಾರಿಯಾಗಿರುವ ನಿತ್ಯಾನಂದ ಜಗತ್ತಿನ ಮುಂದೆ ಹೊಸದೊಂದು ಹೈಡ್ರಾಮ ನಡೆಸುತ್ತಿದ್ದಾನೆ. ನಿತ್ಯಾನಂದ ಮೊದಲು ‘ಯುನೈಟೆಡ್ ಸ್ಟೇಟ್ ಆಫ್ ಕೈಲಾಸ’ ಎಂಬ ಹೆಸರಿನಿಂದ ಹೊಸ ದೇಶವನ್ನು ರಚಿಸುವುದಾಗಿ ಹೇಳಿಕೊಂಡಿದ್ದ. ಅಲ್ಲಿ ಹಿಂದೂ ನಂಬಿಕೆಗಳ ಪ್ರಕಾರ ಜೀವನವನ್ನು ನಡೆಸಲಾಗುತ್ತದೆಯಂತೆ.


ಅಂದಹಾಗೆ ನಿತ್ಯಾನಂದನ ಕೈಲಾಸ ದೇಶದ ರಾಯಭಾರಿಯಾಗಿರುವ ಈ ಮಹಿಳೆ ಹೆಸರು ವಿಜಯಪ್ರಿಯಾ ನಿತ್ಯಾನಂದ ಎಂದು ಹೇಳಲಾಗುತ್ತದೆ. ಕೈಲಾಸದ ದೃಢೀಕೃತ ಫೇಸ್ ಬುಕ್ ಖಾತೆಯ ಪ್ರಕಾರ ಮಾತೆ ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಗೆ ಕೈಲಾಸ ದೇಶದ ಖಾಯಂ ರಾಯಭಾರಿಯಾಗಿದ್ದಾರೆ.  ವಿಜಯಪ್ರಿಯಾ ನಿತ್ಯಾನಂದ ಅವರು ತಮ್ಮ ನಿವಾಸವನ್ನು ಅಮೆರಿಕದ ವಾಷಿಂಗ್ಟನ್ ಡಿಸಿ ಸಿಟಿ ಎಂದು ಹೇಳಿಕೊಂಡಿದ್ದು, ವಿಜಯಪ್ರಿಯಾಗೆ ನಿತ್ಯಾನಂದನ ದೇಶ ಕೈಲಾಸದಲ್ಲಿ ರಾಜತಾಂತ್ರಿಕ ಸ್ಥಾನಮಾನವಿದೆ.


ಫೆಬ್ರವರಿ 22 ರಂದು ಸ್ವಿಟ್ಜರ್ಲೆಂಡ್‌ನ ಜಿನೀವಾ ನಗರದಲ್ಲಿ ನಡೆದ ವಿಶ್ವಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ವಿಜಯಪ್ರಿಯಾ ನಿತ್ಯಾನಂದ ಅವರಲ್ಲದೆ, ಕಾಲ್ಪನಿಕ ದೇಶ ಕೈಲಾಸದಿಂದ ಇನ್ನೂ 5 ಮಹಿಳೆಯರು ಭಾಗವಹಿಸಿದ್ದರು. ವಿಶ್ವಸಂಸ್ಥೆಯು ಜಿನೀವಾದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ 19 ನೇ ಸಮ್ಮೇಳನವನ್ನು ಆಯೋಜಿಸಿತ್ತು.


ನಿತ್ಯಾನಂದನ ವಿರುದ್ಧ ಭಾರತದಲ್ಲಿ ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳು ನಡೆಯುತ್ತಿವೆ. ಭಾರತದಲ್ಲಿ ನ್ಯಾಯಾಂಗ ಪ್ರಕ್ರಿಯೆಯನ್ನು ಎದುರಿಸುವ ಬದಲು, ನಿತ್ಯಾನಂದ ದೇಶದಿಂದ ಪರಾರಿಯಾಗಿ ಹೊಸ ರಾಷ್ಟ್ರವನ್ನೇ ಕಟ್ಟಿದ್ದಾನಂತೆ.


ಇದನ್ನೂ ಓದಿ: ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ನಿಮಿಷಗಳಲ್ಲಿ ಪರಿಹಾರ!ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರ ಹಾಕುತ್ತದೆ ಈ ವಸ್ತು!


ವಿಜಯಪ್ರಿಯಾ ನಿತ್ಯಾನಂದ ಯಾರು?
ವಿಜಯಪ್ರಿಯಾ ಅವರ ಲಿಂಕ್ಡ್-ಇನ್ ಪ್ರೊಫೈಲ್ ಪ್ರಕಾರ, ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾನಿಲಯದಿಂದ ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಇವರು ಪೂರ್ಣಗೊಳಿಸಿದ್ದಾರೆ. ಕಾಲೇಜಿನಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ್ದಕ್ಕಾಗಿ ಡೀನ್ ಗೌರವ ಪಟ್ಟಿಯಲ್ಲಿ ಆಕೆಯ ಹೆಸರೂ ಸೇರಿತ್ತು. 2013, 2014 ರಲ್ಲಿ, ಅಂತರರಾಷ್ಟ್ರೀಯ ಯುಜಿ ವಿದ್ಯಾರ್ಥಿ ವಿದ್ಯಾರ್ಥಿವೇತನವನ್ನು ಸಹ ಈಕೆ ಗೆದ್ದಿದ್ದಳು. ಇಂಗ್ಲಿಷ್, ಫ್ರೆಂಚ್, ಪೆಜಿನ್ ಮತ್ತು ಕ್ರಿಯೋಲ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಈಕೆ ಯಾವ ದೇಶಕ್ಕೆ ಸೇರಿದವಳು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ