Viral Video : ಜನರ ಜೀವನವನ್ನು ಸುಲಭಗೊಳಿಸಲು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ.. ಈಗ ಅಂತಹ ತಂತ್ರಜ್ಞಾನ ಜೀವನವನ್ನೇ ಹಾಳು ಮಾಡುವ ಹಂತಕ್ಕೆ ಹೋಗುತ್ತಿದೆ. AI ನಂತರ ಸುಧಾರಿತ ತಂತ್ರಜ್ಞಾನವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.. ಇವುಗಳಲ್ಲಿ ಒಂದು ಡೀಪ್‌ಫೇಕ್.


COMMERCIAL BREAK
SCROLL TO CONTINUE READING

ಹೌದು.. ಇದುವರೆಗೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಹಲವು ಯುವಕರನ್ನು ಬ್ಲಾಕ್ ಮೇಲ್ ಮಾಡುತ್ತಿರುವ ಪ್ರಕರಣಗಳು ಜೋಧಪುರದಲ್ಲಿ ಬೆಳಕಿಗೆ ಬಂದಿವೆ. ಅನೇಕ ಸೆಲೆಬ್ರಿಟಿಗಳು ಡೀಪ್ ಫೇಕ್‌ಗಳಿಗೆ ಬಲಿಯಾಗುತ್ತಿದ್ದರೆ, ಇದು ಸಾಮಾನ್ಯರಿಗೂ ಸಮಸ್ಯೆಯಾಗಿದೆ.


ಇದನ್ನೂ ಓದಿ:ದಳಪತಿ ವಿಜಯ್‌ ʻ69ʼ ಸಿನಿಮಾದ ಫರ್ಸ್ಟ್‌ ಲುಕ್‌ ರಿಲೀಸ್‌ ಮಾಡಿದ ಕೆವಿಎನ್ ಪ್ರೊಡಕ್ಷನ್ಸ್..!  


ಫೋಟೋಗಳ ಸಹಾಯದಿಂದ ಅಶ್ಲೀಲ ವಿಡಿಯೋ ಮಾಡಿ ಜನರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಇದುವರೆಗೆ ಜೋಧಪುರ ಪೊಲೀಸರಿಗೆ ಇಂತಹ ಹಲವು ದೂರುಗಳು ಬಂದಿವೆ. ಜೋಧಪುರದ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಯುವತಿಗೆ ಯುವಕನೊಬ್ಬ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಪ್ರಕರಣ ಇದೀಗ ಬಯಲಾಗಿದೆ..


ಬಾಲಕಿಯೊಬ್ಬಳನ್ನು ಪ್ರೀತಿಸುವಂತೆ ಯುವನೊಬ್ಬ ಕಾಡುತ್ತಿದ್ದನಂತೆ.. ಆದರೆ ಆ ಯುವತಿಗೆ ಅವನ ಜೊತೆ ಸಂಬಂಧ ಹೊಂದಲು ಇಷ್ಟಪಡಲಿಲ್ಲ. ಯುವಕ ನಿರಂತರವಾಗಿ ಅವಳಿಕೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದ ಕೋಪಗೊಂಡ ಹುಡುಗ AI ಸಹಾಯದಿಂದ ಯುವತಿಯ ಅಶ್ಲೀಲ ವೀಡಿಯೊವನ್ನು ಮಾಡಿ ವೈರಲ್ ಮಾಡಿದ್ದಾನೆ.


ಇದನ್ನೂ ಓದಿ:ಖ್ಯಾತ ಉದ್ಯಮಿ ಜೊತೆ ನಟಿ ರಮ್ಯಾ ಮದುವೆ!? ಕೊನೆಗೂ ಸತ್ಯ ರಿವೀಲ್‌ ಮಾಡಿಯೇಬಿಟ್ರು ಕರುನಾಡ ಮೋಹಕ ತಾರೆ


ಇಂತಹ ಘಟನೆಗಳನ್ನು ತಪ್ಪಿಸಬೇಕು ಅಂದ್ರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಸುರಕ್ಷಿತವಾಗಿರಿಸಿ. ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಗಳನ್ನು ಲಾಕ್ ಮಾಡಿ. ಫೊಟೋಗಳನ್ನು ಅಪರಿಚಿತರಿಗೆ ಕಳುಹಿಸಬೇಡಿ.. ಅಲ್ಲದೆ, ಯಾವುದೇ ಅಪ್ಪಿಕೇಷನ್‌ನಲ್ಲಿ ಫೋಟೋ ಅಪ್‌ ಮಾಡಬೇಡಿ.. ಡೇಟಿಂಗ್‌ ಆಪ್‌ಗಳ ಬಳಕೆ ಬಿಟ್ಟು ಬಿಡಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.