Parle G biscuit cover : ಪಾರ್ಲೆ-ಜಿ ಬಿಸ್ಕಟ್‌ ಪ್ಯಾಕೆಟ್‌ ಮೇಲೆ ಮುದ್ರಿಸಲಾಗಿದ್ದ ಮಗುವಿನ ಫೋಟೋ ನಾಪತ್ತೆಯಾಗಿರುವುದು ಹಲವು ಮಂದಿ ತಲೆ ಕೆಡಿಸಿದೆ. ಕಂಪನಿಯು ಪ್ರಸಿದ್ಧ ಹುಡುಗಿಯ ಮುಖವನ್ನು ತೆಗೆದು ಜೆರ್ವಾನ್ ಜೆ ಬುನ್‌ಶಾ ಎಂಬ ವ್ಯಕ್ತಿಯ ಫೋಟೋ ಹಾಕಿದ್ದು, ಅರೇ... ಈ ರೀತಿ ಸಡನ್ನಾಗಿ ಮುಖ ಬದಲಾವಣೆ ಮಾಡುವ ಪ್ರಸಂಗ ಏಕೆ ಬಂತು ಅಂತ ತಲೆ ಕಡಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಪಾರ್ಲೆ-ಜಿ ತನ್ನ ಜನಪ್ರಿಯ ವ್ರ್ಯಾಪರ್ ಮ್ಯಾಸ್ಕಾಟ್ ಅನ್ನು ನಿಜವಾಗಿಯೂ ತೆಗೆದುಹಾಕಿದೆಯೇ ಎಂದು ಆಶ್ಚರ್ಯಪಡುವವರು ಚಿಂತಿಸಬೇಕಾಗಿಲ್ಲ. ಜೆರ್ವಾನ್‌ ಜೆ ಬುನ್‌ಶಾ ಮುಖ ಬಿಸ್ಕಟ್‌ ಪ್ಯಾಕೆಟ್‌ ಮೇಲೆ ಇರುವುದು ಕೇವಲ ಒಂದು ಹಾಸ್ಯ ಪ್ರಸಂಗಕ್ಕಾಗಿ ಮಾತ್ರ. 


ಇದನ್ನೂ ಓದಿ: ಈ ವಾರದ ಕ್ಯಾಪ್ಟನ್ ಪಟ್ಟ ಯಾರಿಗೆ..? ಸ್ಪರ್ಧಿಗಳ ಕುಟುಂಬಸ್ಥರು ಹೇಳಿದ್ದು ಈ ಒಬ್ಬ ವ್ಯಕ್ತಿ ಹೆಸರು


ಇತ್ತೀಚಿಗೆ ಸೋಷಿಯಲ್‌ ಮಿಡಿಯಾ ಸ್ಟಾರ್‌ ಬನ್‌ಶಾ ಅವರು ತಮ್ಮ ಅನುಯಾಯಿಗಳಿಗೆ ಪಾರ್ಲೆ-ಜಿ ಮಾಲೀಕರನ್ನು ಯಾವ ಹೆಸರಿಡಿದು ಕರೆಯಬೇಕು ಅಂತ ತಮ್ಮ ಅನುಯಾಯಿಗಳಿಗೆ ಪ್ರಶ್ನೆ ಮಾಡಿದ್ದರು. ಅಲ್ಲದೆ, "ನೀವು ಪಾರ್ಲೆ-ಜಿ ಮಾಲೀಕರನ್ನು ಭೇಟಿಯಾದರೆ, ಅವರನ್ನು ಪಾರ್ಲೆ ಸರ್, ಮಿಸ್ಟರ್ ಪಾರ್ಲೆ ಅಥವಾ ಪಾರ್ಲೆ ಜಿ ಎಂದು ಕರೆಯುತ್ತೀರಾ?" ಅಂತ ಹಾಸ್ಯಮಯವಾಗಿ ಪ್ರಶ್ನಿಸಿದ್ದರು.


ಇದಕ್ಕೆ ಪಾರ್ಲೆ-ಜಿ ಸಹ ಪ್ರತಿಕ್ರಿಯೆ ನಿಡಿ, ತಮ್ಮನ್ನು ಒಜಿ ಎಂದು ಕರೆಯಬುಹುದು ಅಂತ ಪ್ರತ್ಯುತ್ತರ ನೀಡಿತ್ತು. ಅಲ್ಲದೆ, ಬುನ್‌ಶಾ ಫೋಟೋವನ್ನು ಬಿಸ್ಕಟ್‌ ಕವರ್‌ಗೆ ಹಾಕಿ ಫೋಟೊವನ್ನು ಹಂಚಿಕೊಂಡಿದೆ. ಈ ವಿಚಾರ ತಿಳಿಯದ ಜನರು ಶಾಕ್‌ ಆಗಿದ್ದಾರೆ ಅಷ್ಟೇ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.