Viral Video: ಪ್ರಾಣಿ ಪಕ್ಷಿಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿರುತ್ತದೆ. ಪ್ರಾಣಿ ಪಕ್ಷಿಗಳ ವಿಡಿಯೋ ಗಳನ್ನು ಸಾಮಾಜಿಕ ಪ್ಲಾಟ್ಫಾರ್ಮ್ ಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದಂತೆಯೇ ಅದು ವೈರಲ್ ಆಗಿ ಬಿಡುತ್ತವೆ.  ಸಾಮಾನ್ಯವಾಗಿ ಕಾಡು ಪ್ರಾಣಿಗಳು ಅಥವಾ ಸಾಕು ಪ್ರಾಣಿಗಳ ವಿಡಿಯೋಗಳೇ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಣ ಸಿಗುತ್ತವೆ. ಆದರೆ, ಈಗ ಪೆಂಗ್ವಿನ್‌ಗಳ ವಿಡಿಯೋ ವೈರಲ್ ಆಗುತ್ತಿವೆ. ತಮ್ಮ ಬೆನ್ನಿನ ಮೇಲೆ ಸಣ್ಣ ಕಲರ್ ಕಲರ್ ಬ್ಯಾಕ್‌ಪ್ಯಾಕ್‌ಗಳೊಂದಿಗೆ ಹೆಜ್ಜೆ ಹಾಕುತ್ತಿರುವ ಪೆಂಗ್ವಿನ್‌ಗಳ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. 


COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿ ಪೆಂಗ್ವಿನ್‌ಗಳ ಗುಂಪನ್ನು ಕಾಣಬಹುದು. ಈ ಗುಂಪಿನಲ್ಲಿರುವ ಪ್ರತಿ  ಪೆಂಗ್ವಿನ್‌ ಬೆನ್ನ ಮೇಲೆ ಪುಟ್ಟದಾದ ಬ್ಯಾಗ್ ಇದೆ. ಈ ಬ್ಯಾಗ್ ಅನ್ನು ಬೆನ್ನ ಮೇಲೆ ಏರಿಸಿಕೊಂಡು ಹೆಜ್ಜೆ ಹಾಕುತ್ತಿರುವ ಪೆಂಗ್ವಿನ್ ಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿ ಪ್ರತಿ ಪೆಂಗ್ವಿನ್ ಬೆನ್ನ ಮೇಲೆ ಒಂದು ಪುಟ್ಟ ಬ್ಯಾಕ್ಪ್ಯಾಕ್ ಇದೆ. ಎಲ್ಲವೂ ಬೇರೆ ಬೇರೆ ಬಣ್ಣವನ್ನು ಹೊಂದಿದೆ. 


ಇದನ್ನೂ ಓದಿ : ಮನೆ ಕ್ಲೀನಿಂಗ್ ವೇಳೆ ಸಿಕ್ಕ ಅಪ್ಪನ ಹಳೆ ಪಾಸ್‌ಬುಕ್: ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮಗ!


ಬೆನ್ನ ಮೇಲೆ ಬ್ಯಾಗ್ ಹೊತ್ತುಕೊಂಡು ಅದ್ಯಾವ ಕಡೆಗೆ ಈ ಹಕ್ಕಿಗಳು ಹೆಜ್ಜೆ ಹಾಕುತ್ತಿವೆಯೋ ಅವುಗಳಿಗೆ ಮಾತ್ರ ಗೊತ್ತು. ಆದರೆ ತಕ್ಷಣಕ್ಕೆ ಈ ದೃಶ್ಯವನ್ನು ನೋಡುವಾಗ ಪುಟ್ಟ ಮಕ್ಕಳು ಬ್ಯಾಗ್ ಬೆನ್ನಿಗೇರಿಸಿಕೊಂಡು ಶಾಲೆಯತ್ತ ನಡೆಯುವಂತೆ ಕಾಣುತ್ತಿದೆ. 


 


ಈ ಸ್ಪರ್ಧೆಯಲ್ಲಿ ನೀವು ನಿಮ್ಮ ಹೆಂಡ್ತಿನಾ ಹೆಗಲ ಮೇಲೆ ಹೊತ್ತು ಒಡ್ಬೆಕಂತೆ, ಗೆದ್ರೆ ಏನ್ ಸಿಗುತ್ತೆ ಗೊತ್ತಾ?


ಈ ವಿಡಿಯೋವನ್ನು Buitengebiede ಎನ್ನುವ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.  ಆಗಸ್ಟ್ 5 ರಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಷ್ಟರಲ್ಲಿಯೇ ಇದು 
 216 ಮಿಲಿಯನ್  ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋ ವೀಕ್ಷಿಸಿದವರಿಗೆ ಹಕ್ಕಿಗಳ ಬ್ಯಾಗ್ ಒಳಗೆ ಅದೇನಿದೆ ಎನ್ನುವುದೇ ಕುತೂಹಲ. ಅನೇಕರು ಈ ಬಗ್ಗೆ ಪ್ರಶ್ನೆ ಕೂಡಾ ಮಾಡಿದ್ದಾರೆ. ಒಟ್ಟಿನಲ್ಲಿ ಈ ಮುದ್ದು ಪೆಂಗ್ವಿನ್ ಗಳು ನೆಟ್ಟಿಗರ ಮನ ಗೆದ್ದಿರುವುದಂತೂ  ಸುಳ್ಳಲ್ಲ.  


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k


Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ