Viral Video : ಕಾರ್ಮೋಡ ತುಂಬಿ ಮಳೆ ಬರುವ ಅನುಭವವಾಗುತ್ತಿದ್ದಂತೆಯೇ ನವಿಲು ಗರಿ ಬಿಚ್ಚಿ ಕುಣಿಯುತ್ತದೆ. ಈ ನಾಟ್ಯ ಮಯೂರಿಯ ಅಂದವನ್ನು ಎಷ್ಟು ಹೊಗಳಿದರೂ ಕಡಿಮೆಯೇ. ನವಿಲಿನ ಈ ನಾಟ್ಯವನ್ನು ನೋಡಲು ಕಣ್ಣುಗಳೆರಡು ಸಾಲುವುದಿಲ್ಲ. ನವಿಲು ಸುಂದರ ಪಕ್ಷಿ. ಎತ್ತರಕ್ಕೆ ಹಾರುವುದು ಇದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದೇ ಸಾಮಾನ್ಯವಾಗಿ ತಿಳಿದುಕೊಂಡಿರುವ ವಿಚಾರ. ಶಾಲಾ ಪುಸ್ತಕಗಳಲ್ಲಿ ಓದಿರುವ ವಿಚಾರ. ಆದರೆ ನೋಡಿದ್ದೂ ಸುಳ್ಳಾಗಬಹುದು, ಕೇಳಿದ್ದೂ ಸುಳ್ಳಾಗಬಹುದು ಎನ್ನುತ್ತಾರಲ್ಲ ಹಾಗೆ ಕೆಲವೊಮ್ಮೆ ಈ ಪ್ರಕೃತಿಯಲ್ಲಿ ಕೆಲ ವಿಚಿತ್ರಗಳು ಸಂಭವಿಸಿ ಬಿಡುತ್ತವೆ. ಅದರಲ್ಲಿ ಈಗ ವೈರಲ್ ಆಗುತ್ತಿರುವ ವಿಡಿಯೋ ಕೂಡಾ ಒಂದು. 


COMMERCIAL BREAK
SCROLL TO CONTINUE READING

ಇಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎರಡು ನವಿಲುಗಳು ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅವುಗಳ ಪೈಕಿ ಒಂದು ನವಿಲು ಇದ್ದಕ್ಕಿದ್ದಂತೆ ಮುಗಿಲೆತ್ತರಕ್ಕೆ ಹಾರಿ ಬಿಡುತ್ತದೆ. ನವಿಲಿನ ಸೌಂದರ್ಯವನ್ನು ನೋಡುವುದೇ ಚೆಂದ. ಅದರಲ್ಲೂ ಬಾನೆತ್ತರಕ್ಕೆ ಹಾರುವ  ಹಾರುವ ನವಿಲಿನ ದೃಶ್ಯ  ಇನ್ನೂ ಚಂದ. 


 


ದೈತ್ಯ ಮೊಸಳೆಯನ್ನು ಬೈಕ್ ಮೇಲೆ ಮಲಗಿಸಿ, ಬೈಕ್ ಸವಾರಿ! ಈ ವೈರಲ್ ವಿಡಿಯೋ ನೀವು ನೋಡಲೇಬೇಕು


ನವಿಲಿನ ಈ ಅದ್ಭುತ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದೆ.  @CosmicGaiaX ಎಂಬ ಖಾತೆಯಲ್ಲಿಈ ಮನಮೋಹಕ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 'ಮೆಜೆಸ್ಟಿಕ್ ಫ್ಲೈಟ್' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಕೇವಲ 10 ಸೆಕೆಂಡ್‌ಗಳ ವೀಡಿಯೋವನ್ನು ಇದುವರೆಗೆ  4.8  ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಕೂಡ ಬಂದಿವೆ.


ಇದನ್ನೂ ಓದಿ: Viral video : ಸರ ಸರನೆ ಬಂದು ಮನೆ ಒಳಗೆ ನುಗ್ಗಲು ಯತ್ನಿಸಿದ ಹಾವು.! ಮುಂದೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.