Viral Video: ಪಾಪದ ಕರುವನ್ನು ತಿಂದು ತೇಕಿದ ಪಾಪಿ ಹೆಬ್ಬಾವು..! ಹಾವಿನ ಹೊಟ್ಟೆಯಿಂದ ಪಶುವನ್ನು ಊರಿನ ಜನ ಹೇಗೆ ಹೊರ ತೆಗೆದ್ರು..ವಿಡಿಯೋ ನೋಡಿ
Viral Video: ಹಾವುಗಳಲ್ಲಿ ಹಲವಾರು ರೀತಿಯವುಗಳಿವೆ. ಇದರಲ್ಲಿ ಹೆಬ್ಬಾವು ಸ್ವಲ್ಪ ವಿಭಿನ್ನ ಅಂತಲೇ ಹೇಳಬಹುದು, ಕಿಂಗ್ ಕೋಬ್ರಾ ತನ್ನ ವಿಷದ ಅಂಶದಿಂದ ಪ್ರಬಲವಾಗಿದ್ದರೆ, ಹೆಬ್ಬಾವು ತನ್ನ ತಾಕತ್ತಿನ ಕಾರಣದಿಂದ ಪ್ರಬಲವಾಗಿದೆ.
Viral Video: ಹಾವುಗಳಲ್ಲಿ ಹಲವಾರು ರೀತಿಯವುಗಳಿವೆ. ಇದರಲ್ಲಿ ಹೆಬ್ಬಾವು ಸ್ವಲ್ಪ ವಿಭಿನ್ನ ಅಂತಲೇ ಹೇಳಬಹುದು, ಕಿಂಗ್ ಕೋಬ್ರಾ ತನ್ನ ವಿಷದ ಅಂಶದಿಂದ ಪ್ರಬಲವಾಗಿದ್ದರೆ, ಹೆಬ್ಬಾವು ತನ್ನ ತಾಕತ್ತಿನ ಕಾರಣದಿಂದ ಪ್ರಬಲವಾಗಿದೆ.
ಹಾವುಗಳ ಹಲವಾರು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಾ ಇರುತ್ತೇವೆ, ಸಾಮಾನ್ಯವಾಗಿ ಹೆಬ್ಬಾವುಗಳಿಗೆ ಅಲ್ಪ ಸ್ವಲ್ಪ ಆಹಾರ ಹೊಟ್ಟೆ ತುಂಬಿಸುವುದಿಲ್ಲ. ಇನ್ನೊಂದು ಪ್ರಾಣಿಯನ್ನು ತಿಂದು ತೇಕಿ ಹೆಬ್ಬಾವು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೂಡ ಇಂತಹದ್ದೆ ಒಂದು ದೃಶ್ಯ ಸೆರೆಯಾಗಿದೆ, ಪಾಪದ ಕರುವೊಂದನ್ನು ಪಾಪಿ ಹೆಬ್ಬಾವು ತಿಂದು ತೇಕಿದೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಹೊಲದಲ್ಲಿ ಹೆಬ್ಬಾವೊಂದು ಅಸವಿನಿಂದ ಬೇಟೆಗಾಗಿ ಕಾದು ಕೂತಿದೆ, ಸರಿಯಾದ ಸಮಯಕ್ಕೆ ಹೊಲದಲ್ಲಿ ಮೇಯುತ್ತಿದ್ದ ಕರುವೊಂದು ಹಾವಿನ ಕಣ್ಣಿಗೆ ಬಿದ್ದಿದೆ, ಬೇಟೆ ಸಿಕ್ಕಮೇಲೆ ಹಸಿದ ಸರ್ಪ ಆಹಾರವನ್ನು ಸುಮ್ಮನ್ನೆ ಬಿಡುತ್ತಾ. ಹಸಿದ ಹೊಟ್ಟೆಗೆ ಅಮೃತ ಸಿಕ್ಕಂತೆ, ಮೇಯುತ್ತಿದ್ದ ಪಾಪದ ಕರುವಿನ ಮೇಲೆ ಹೆಬ್ಬಾವು ದಾಳಿ ಮಾಡಿ, ನುಂಗಿ ನೀರು ಕುಡಿದಿದೆ. ಹೀಗೆ ಕರುವನ್ನು ಹುಡುಕುತ್ತಾ ಹೊಲಕ್ಕೆ ಬಂದಿದ್ದ ಮಾಲಿಕ, ಕರು ಎಲ್ಲೂ ಕಾಣಿಸಿದೆ ಕಂಗಾಲಾಗಿದ್ದಾರೆ, ಅರ್ರೇ ಇಲ್ಲೆ ಕ್ಟಿಹಾಕಿದ್ದ ತನ್ನ ಕರು ಎಲ್ಲಿ ಹೋಯಿತೋ ಎಂದು ಹುಡುಕಲು ಆರಂಭಿಸಿದ್ದಾರೆ. ಅಲ್ಲಿಯೇ ಬೃಹತ್ ಹೆಬ್ಬಾವೊಂದು ಮಲಗಿಕೊಂಡಿದ್ದು ನೋಡಿ ಬೆಚ್ಚಿಬಿದ್ದ ಅವರು. ಹಾವಿನ ಗಾತ್ರ ಕಂಡು ಇದು ತಮ್ಮ ಕರುವನ್ನು ನುಂಗಿರಬಹುದು ಎಂದು ಅನುಮಾನಿಸಿ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಹಾವು ಹಿಡಿಯುವವರು, ಹಾವನ್ನು ಹಿಡಿದು ತನ್ನ ಒಡಲಿಂದ ಕರುವನ್ನು ಹೊರತೆಗೆಯಲು ಹಲವು ಹೊತ್ತು ಪ್ರಯತ್ನಿಸಿದ ನಂತರ, ಅಲ್ಲಿ ಕಂಡ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದಾರೆ. ಹಾವನ್ನು ಸತತ ಸ್ವಲ್ಪ ಸಮಯದ ಕಾಲ ಅಲುಗಾಡಿಸಿದ ನಂತರ ಹಾವಿನ ಬಾಯಿಂದ ಕರು ಹೊರಕ್ಕೆ ಬಂದಿದೆ. ಈ ದೃಶ್ಯ ನೋಡಿ ಸ್ಥಳದಲ್ಲಿ ನೆರೆದಿದ್ದವರು ಎಲ್ಲಾ ಶಾಕ್ ಆಗಿದ್ದಾರೆ.
ಈ ವಿಡಿಯೋ ಇದೀಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಬಗ್ಗೆ ನೆಟಿಜನ್‌ಗಳು ಸಾಲುಗಟ್ಟಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಕೆಲವರಂತೂ ಇಂತಹ ಭೀಕರ ದೃಶ್ಯವನ್ನು ನಾವೆಂದೂ ನೋಡಲೇ ಇಲ್ಲ ಎನ್ನುತ್ತಿದ್ದಾರೆ. ಸದ್ಯ ಈ ವಿಡಿಯೋ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.