ಹಾವಿನ ಹೆಸರು ಕೇಳಿದ ತಕ್ಷಣ ಅನೇಕರಿಗೆ ಭಾರೀ ಭಯವುಂಟಾಗುತ್ತದೆ. ಅಂತಹದ್ದರಲ್ಲಿ ಮನೆಯೊಳಗೆ ಬಂದರೆ ಕಥೆ ಬೇರೆಯದ್ದೇ. ಇದೀಗ ಅಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭೀತಿಯನ್ನುಂಟು ಮಾಡುತ್ತಿದೆ. ವೈರಲ್ ಆಗಿರುವ ವಿಡಿಯೋ ಥಾಯ್ಲೆಂಡ್‌ನದ್ದು ಎಂದು ಹೇಳಲಾಗುತ್ತಿದೆ. ಮಹಿಳೆಯೊಬ್ಬರು ಸ್ನಾನಗೃಹದಲ್ಲಿ 12 ಅಡಿ ಉದ್ದದ ಹೆಬ್ಬಾವನ್ನು ನೋಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಬ್ರೇಕಪ್ ಬೇಡ ಅಂತ ಶಾಲಾ ಬಾಲಕಿ ಕಾಲು ಹಿಡ್ಕೊಂಡು ಗೋಗರೆದ ಬಾಲಕ… ಮುಂದೇನಾಯ್ತು?


ಹೆಬ್ಬಾವು ತನ್ನ ಮುಂದೆ ಕುಳಿತಿರುವ ಎರಡು ಬೆಕ್ಕುಗಳನ್ನು ತನ್ನ ಬೇಟೆಯನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ, ಮಹಿಳೆ ತಕ್ಷಣ ಈ ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸಂಪೂರ್ಣ ವಿಷಯ ತಿಳಿಯುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.


 

 

 

 



 

 

 

 

 

 

 

 

 

 

 

A post shared by NowThis (@nowthisnews)


 


 


ಮಾಹಿತಿ ಬಂದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಈ ಅಪಾಯಕಾರಿ ಹಾವನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದು, ಬಳಿಕ ಮಹಿಳೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಾವಿನಿಂದ ಯಾವುದೇ ಸದಸ್ಯರಿಗೆ ಹಾನಿಯಾಗದ ಈ ಕುಟುಂಬದ ಅದೃಷ್ಟ ನಿಜವಾಗಿಯೂ ಚೆನ್ನಾಗಿದೆ ಎನ್ನಬಹುದು. 


ಇದನ್ನೂ ಓದಿ: Viral Video: ಮೈಮೇಲೆ ರೈಲು ಹರಿದರೂ ಬದುಕುಳಿದ ಭೂಪ: ಮೈಜುಂ ಎನ್ನುವಂತಿದೆ ವಿಡಿಯೋ


ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆಯುತ್ತಿದೆ. ಇದುವರೆಗೆ ಲಕ್ಷಾಂತರ ಜನರು (ಸಾಮಾಜಿಕ ಮಾಧ್ಯಮ ಬಳಕೆದಾರರು) ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಹಲವರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.