rainbow snake: ಸಾಮಾನ್ಯವಾಗಿ ನೀವು ಬೂದು, ಹಸಿರು ಬಣ್ಣದ ಹಾವುಗಳನ್ನು ನೋಡಿರುತ್ತೀರಿ..ಬಿಲೀ, ನೀಲಿ, ಕೆಂಪು ಬಣ್ಣದ ಹಾವುಗಳ ಬಗ್ಗೆ ಕೇಳಿರುತ್ತೀರಿ. ಆದರೆ ಈ ಎಲ್ಲಾ ಬಣ್ಣ ಮಿಕ್ಸ್‌ ಆದಂತಹ ಹಾವನ್ನು ಎಂದಾದರೂ ನೋಡಿದ್ದೀರಾ? ಕಾಮನಬಿಲ್ಲನ್ನು ಹೋಲುವ ಹಾವೊಂದು ಸಾಮಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ನೀವು ಒಮ್ಮೆ ವಿಡಿಯೋ ನೋಡಿ ಖಂಡಿತ ಶಾಕ್‌ ಆಗ್ತೀರ!


COMMERCIAL BREAK
SCROLL TO CONTINUE READING

ಕ್ಯಾಲಿಫೋರ್ನಿಯಾದ ಸರೀಸೃಪ ಮೃಗಾಲಯದ ಸಂಸ್ಥಾಪಕ ಜೇ ಬ್ರೂವರ್, ರೆಟಿಕ್ಯುಲೇಟೆಡ್ ಹೆಬ್ಬಾವಿನ ಈ ಅದ್ಭುತ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದು 20 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.


ನೀವು ಎಂದಾದರೂ ರೇನ್ಬೋ ರೆಟಿಕ್ಯುಲೇಟೆಡ್ ಹೆಬ್ಬಾವನ್ನು ನೋಡಿದ್ದೀರಾ? ನೋಡಿಲ್ಲದಿದ್ದರೆ, ಖಂಡಿತ ನೀವು ಈ ವೀಡಿಯೊವನ್ನು ಈಗಲೇ ನೋಡಬೇಕು. ಕ್ಯಾಲಿಫೋರ್ನಿಯಾದ ಸರೀಸೃಪ ಮೃಗಾಲಯದ ಸಂಸ್ಥಾಪಕ ಜೇ ಬ್ರೂವರ್  ರೆಟಿಕ್ಯುಲೇಟೆಡ್ ಹೆಬ್ಬಾವಿನ ಈ ಅದ್ಭುತ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಹಾವಿನ ಬಣ್ಣ ನಿಮ್ಮನ್ನು ಬೆರಗುಗೊಳಿಸುತ್ತದೆ. 


ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು


ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದರು. ಆದಾಗ್ಯೂ, ಇನ್‌ಸ್ಟಾ ರೀಲ್ ಮತ್ತೊಮ್ಮೆ ವೈರಲ್ ಆಗಿದೆ. ಇದು 20 ಮಿಲಿಯನ್ ವೀಕ್ಷಣೆಗಳನ್ನು ಮತ್ತು 998k ಲೈಕ್‌ಗಳನ್ನು ಪಡೆದುಕೊಂಡಿದೆ.


ಜೇ ಬ್ರೂವರ್ ಆಗಾಗ್ಗೆ ಇಂತಹ ನಂಬಲಾಗದ ವೀಡಿಯೊಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಮಳೆಬಿಲ್ಲಿನ ಬಣ್ಣಗಳನ್ನು ಹೋಲುವ ಮೈಬಣ್ಣ ಹೊಂದಿರುವ ಹೆಬ್ಬಾವನ್ನು ತಮ್ಮ ವಿಡಿಯೋದ ಮೂಲಕ ಹಂಚಿಕೊಂಡಿದ್ದಾರೆ. ತನ್ನ ತೋಳುಗಳಲ್ಲಿ ಹಿಡಿದಿರುವುದನ್ನು ಕಾಣಬಹುದು. 


ನೆಟಿಜನ್‌ಗಳು ಹಾವಿನ ಅದ್ಭುತ ಬಣ್ಣದ ಬಗ್ಗೆ ವಿವಿಧ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಹಾಗೂ ತಮ್ಮ ಸ್ನೇಹಿತರ ಜೊತೆ ವಿಡಿಯೋವನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್‌ ಆಗುತ್ತಿದ್ದು, ಈ ವಿಡೀಯೋ ನೋಡಿದ ವೀಕ್ಷಕರು ಹಾವಿನ ಮೈ ಬಣ್ಣದ ಸೌಂದರ್ಯಕ್ಕೆ ಮನಸೋತಿದ್ದಾರೆ.