Ramayana Drama in Jail: ಅದು ದಸರಾ ಸಂದರ್ಭ... ಎಲ್ಲಾ ಕೈದಿಗಳು ರಾಮಾಯಣ ನಾಟಕ ಆಡಲು ಬಯಸಿದ್ದರು. ಇದೇ ವಿಷಯವನ್ನು ಜೈಲಾಧಿಕಾರಿಗಳಿಗೂ ತಿಳಿಸಿದ್ದರು. ಅವರೂ ಓಕೆ ಅಂದಿದ್ದರು. ಅಷ್ಟೇ... ಪೊಲೀಸರು ನಾಟಕಕ್ಕೆ ಬೇಕಾದ ಮೇಕಪ್ ಉಪಕರಣ, ವೇದಿಕೆ, ಪ್ರೇಕ್ಷಕರು ಸೇರಿದಂತೆ ಎಲ್ಲವನ್ನೂ ಸಿದ್ಧಪಡಿಸಿದ್ದರು. ಅಷ್ಟರಲ್ಲಿ ನಾಟಕ ಶುರುವಾಗಿದೆ.  ಆದರೆ ರಾಮಾಯಣ ನಾಟಕ ಪ್ರದರ್ಶನಗೊಳ್ಳುತ್ತಿದ್ದ ವೇಳೆ ವಾನರ ವೇಷ ಧರಿಸಿದ್ದ ಕೆಲ ಕೈದಿಗಳು ನಾಟಕ ಹೆಸರಲ್ಲೇ ಗೋಡೇ ಹಾರಿ ಪರಾರಿಯಾಗಿದ್ದಾರೆ. ಉತ್ತರಾಖಂಡದ ಹರಿದ್ವಾರ ಜೈಲಿನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಇದಕ್ಕೆ ಹೇಳೊದು ವಿಧಿ ಅಂತ.. ಅಣ್ಣ ತಂಗಿಯಾಗಿ ನಟಿಸಿದ ಒಂದೇ ವರ್ಷದಲ್ಲಿ ಮದುವೆಯಾದ ಖ್ಯಾತ ಜೋಡಿ ಇದು!!


ಉತ್ತರಾಖಂಡದ ಹರಿದ್ವಾರ ಜೈಲಿನ ಕೆಲವು ಕೈದಿಗಳು ವಿಜಯದಶಮಿ ಆಚರಿಸಲು ಶನಿವಾರ ರಾಮಲೀಲಾ ನಾಟಕವನ್ನು ಪ್ರದರ್ಶಿಸಿದ್ದರು. ನಾಟಕದಲ್ಲಿ, ಕೆಲವು ಕೈದಿಗಳು ಕೋತಿಗಳಂತೆ ವೇಷ ಧರಿಸಿದ್ದರು. ನಾಟಕ ನಡೆಯುತ್ತಿದ್ದಂತೆ ಎಲ್ಲ ಜೈಲು ಅಧಿಕಾರಿಗಳು, ಸಿಬ್ಬಂದಿ ನಾಟಕ ವೀಕ್ಷಿಸಲು ತೊಡಗಿದ್ದರು. ಇದೇನಪ್ಪಾ ಎಂದುಕೊಂಡು ವಾನರರ ವೇಷ ಧರಿಸಿದ್ದ ಇಬ್ಬರು ಕೈದಿಗಳು ಸೀತೆಯ ಕುಂಡಕ್ಕೆ ಹೋಗಿ ಏಣಿಯ ಮೂಲಕ ಗೋಡೆ ಹಾರಿ ತಪ್ಪಿಸಿಕೊಂಡಿದ್ದಾರೆ. ಆದರೆ ಇನ್ನುಳಿದ ಖೈದಿ ಏಣಿ ಬಿದ್ದ ಕಾರಣ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.


ಈ ಮೂವರು ಕೈದಿಗಳು ಜೈಲಿನಲ್ಲಿ ರಾಮಲೀಲಾ ನಾಟಕವನ್ನು ಪ್ರದರ್ಶಿಸುವ ಒಂದು ವಾರದ ಮೊದಲು ಜೈಲಿನಿಂದ ತಪ್ಪಿಸಿಕೊಳ್ಳಲು ಯೋಜಿಸಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.


ಇದನ್ನೂ ಓದಿ: ಪೂನಂ ಪಾಂಡೆ ಎಷ್ಟು ಕೋಟಿಯ ಒಡತಿ ಗೊತ್ತೇ.. ಹಾಟ್‌ ಬ್ಯೂಟಿಯ ಆಸ್ತಿ ಮೌಲ್ಯ ಕೇಳಿದ್ರೆ ಶಾಕ್‌ ಆಗ್ತೀರಾ !


ಪರಾರಿಯಾದ ಕೈದಿಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪಂಕಜ್ ಮತ್ತು ಅಪಹರಣ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ರಾಮಕುಮಾರ್ ಚೌಹಾಣ್ ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪ್ರಮೇಂದ್ರ ದೋವಲ್ ತಿಳಿಸಿದ್ದಾರೆ. ಈ ವಿಷಯ ಬೆಳಕಿಗೆ ಬಂದ ನಂತರ ಜೈಲರ್ ಪ್ಯಾರೇಲಾಲ್ ಸೇರಿದಂತೆ ಆರು ಮಂದಿ ಜೈಲು ಅಧಿಕಾರಿಗಳನ್ನು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ