Range Rovers falls in river during Couple Intimate Moment: ಕೆಲವೊಮ್ಮೆ ಮೋಜು ಕೂಡ ಸಮಸ್ಯೆಗೆ ಕಾರಣವಾಗುತ್ತದೆ. ಇದೀಗ ಈ ಮಾತಿಗೆ ಉತ್ತಮ ಉದಾಹರಣೆ ಎಂಬಂತೆ ಜೋಡಿಯೊಂದು ಸರಸದಲ್ಲಿ ನಿರತರಾಗಿದ್ದಾಗ ರೇಂಜ್ ರೋವರ್ ಕಾರು ಫಿಲಡೆಲ್ಫಿಯಾ ನದಿಗೆ ಬಿದ್ದಿದೆ. ಪ್ರಣಯದಲ್ಲಿ ಮುಳುಗಿರುವಾಗ ಆಕಸ್ಮಿಕವಾಗಿ ಯಾರದೋ ಕಾಲು ಹಿಂಬದಿಯ ಗೇರ್ʼಗೆ ತಾಗಿದ್ದು, ಪರಿಣಾಮ ಕಾರು ನದಿಗೆ ಬಿದ್ದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಓದಿದ್ದು 8ನೇ ಕ್ಲಾಸ್‌, ಆಗಿದ್ದು ಟೀಂ ಇಂಡಿಯಾದ ಸ್ಟಾರ್‌ ಬೌಲರ್...‌ 200 ರೂಗೆ ಕ್ರಿಕೆಟ್‌ ಆಡಿದ್ದ ಈತ ಇಂದು ಕೋಟಿ ಕೋಟಿ ಆಸ್ತಿ ಮಾಲೀಕ: ಯಾರೆಂದು ಗೆಸ್‌ ಮಾಡಿ


ಆಗಸ್ಟ್ 28 ರ ಬುಧವಾರದಂದು ಜೋಡಿ ತಮ್ಮ ರೇಂಜ್ ರೋವರ್‌ʼನಲ್ಲಿ ಫೇರ್‌ಮೌಂಟ್ ಪಾರ್ಕ್‌ʼಗೆ ಆಗಮಿಸಿದ್ದರು. ಈ ಉದ್ಯಾನವನವು ಶುಯ್ಕಿಲ್ ನದಿಯ ಪಕ್ಕದಲ್ಲೇ ಇದೆ. ಸ್ಥಳೀಯ ಕಾಲಮಾನ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಈ ಜೋಡಿ ಕಾರನ್ನು ನದಿಯ ದಡದಲ್ಲಿರುವ ಪಾರ್ಕ್‌ನಲ್ಲಿ ನಿಲ್ಲಿಸಿ ಅಲ್ಲಿಯೇ ಸರಸ ಸಲ್ಲಾಪಕ್ಕೆ ಮುಂದಾಗಿದ್ದಾರೆ. ಹಿಂಬಂದಿ ಸೀಟ್‌ʼನಲ್ಲಿ ಲೈಂಗಿಕ ಚಟುವಟಿಕೆ ಮಾಡುತ್ತಿದ್ದಾಗ, ಈ ಜೋಡಿಯಲ್ಲಿ ಯಾರದ್ದೋ ಕಾಲು ಹಿಂದಿನ ಗೇರ್‌ ಮೇಲೆ ತಾಗಿದೆ.


ಇದನ್ನೂ ಓದಿ: "ಮಾಜಿ ನಾಯಕಿ ಮಿಥಾಲಿ ರಾಜ್ ಜೊತೆ ಮದುವೆಯಾಗಲಿದ್ದೇನೆ"- ನಿವೃತ್ತಿ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಶಾಕಿಂಗ್‌ ಹೇಳಿಕೆ ವೈರಲ್‌


ಕಾರಿನಲ್ಲಿದ್ದ ಜೋಡಿಗೆ ಇದು ತಿಳಿಯಲಿಲ್ಲ. ಆದರೆ ಕಾರು ತಕ್ಷಣವೇ ಚಾಲೂ ಆಗಿದ್ದು, ನದಿ ಬಿದ್ದಿದೆ. ಕಾರು ಬೀಳುತ್ತಿದ್ದಂತೆ ಬುದ್ದಿವಂತಿಕೆ ತೋರಿದ ಈ ಜೋಡಿ,  ಹೇಗೋ ಬಾಗಿಲು ತೆರೆದು ಹೊರಗೆ ಹಾರಿದ್ದಾರೆ. ನಂತರ ರಕ್ಷಣಾ ತಂಡ ಆಗಮಿಸಿದ್ದು, ಬೆಳಗ್ಗೆ 9 ಗಂಟೆ ವೇಳೆಗೆ ಕಾರನ್ನು ನದಿಯಿಂದ ಹೊರತೆಗೆಯಲಾಗಿದೆ.


ವಿಡಿಯೋ ನೋಡಿ:


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews