Rare Case: ವ್ಯಕ್ತಿಯ ಹೊಟ್ಟೆಯಲ್ಲಿ ಅವಳಿ ಬ್ರೂಣ ಪತ್ತೆ..!
Surprising Story: ಈ ವ್ಯಕ್ತಿಯ ಹೊಟ್ಟೆಯಲ್ಲಿ ಅವಳಿ ಬ್ರೂಣ ಪತ್ತೆಯಾಗಿದ್ದು, ಗರ್ಭಾವಸ್ಥೆಯಲ್ಲೇ ಅವು ಮೃತಪಟ್ಟಿವೆ ಎಂದು ವೈದ್ಯರು ಹೇಳಿದ್ದಾರೆ. ಈ ಅಪರೂಪದ ದೈಹಿಕ ಸ್ಥಿತಿಗೆ ‘ಫೀಟಸ್ ಇನ್ ಫೆಟು’ ಎಂದು ಕರೆಯಲಾಗುತ್ತದಂತೆ.
ನಾಗಪುರ: 3 ದಶಕಗಳಿಗೂ ಹೆಚ್ಚು ಕಾಲ ಉಬ್ಬಿದ ಹೊಟ್ಟೆ ಹೊಂದಿದ್ದ 60 ವರ್ಷದ ನಾಗ್ಪುರದ ವ್ಯಕ್ತಿಯೊಬ್ಬರು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು, ವೈದ್ಯಕೀಯ ಜಗತ್ತನ್ನು ಬೆರಗುಗೊಳಿಸಿದ್ದಾರೆ. ಈ ವ್ಯಕ್ತಿಯ ಹೊಟ್ಟೆಯನ್ನು ಪರಿಶೀಲಿಸಿದ ವೈದ್ಯರು ಶಾಕ್ ಆಗಿದ್ದಾರೆ.
ಹೌದು, ಈ ವ್ಯಕ್ತಿಯ ಹೊಟ್ಟೆಯಲ್ಲಿ ಅವಳಿ ಬ್ರೂಣ ಪತ್ತೆಯಾಗಿದ್ದು, ಗರ್ಭಾವಸ್ಥೆಯಲ್ಲೇ ಅವು ಮೃತಪಟ್ಟಿವೆ ಎಂದು ವೈದ್ಯರು ಹೇಳಿದ್ದಾರೆ. ಈ ಅಪರೂಪದ ದೈಹಿಕ ಸ್ಥಿತಿಗೆ ‘ಫೀಟಸ್ ಇನ್ ಫೆಟು’ ಎಂದು ಕರೆಯಲಾಗುತ್ತದಂತೆ. ಈ ವ್ಯಕ್ತಿಗೆ 1999ರಲ್ಲೇ ಹೊಟ್ಟೆಯ ಉಬ್ಬರ ಕಾಣಿಸಿಕೊಂಡಿತ್ತು. ಉಸಿರಾಡಲು ಕಷ್ಟವಾದಾಗ ಆತನನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಯುಎಸ್ ರಾಯಭಾರಿ ಕಚೇರಿ ಸ್ಥಾಪನೆ, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ತೇಜಸ್ವಿ ಸೂರ್ಯ
ಭ್ರೂಣದ ಅನಾವರಣ!
ಈ ವ್ಯಕ್ತಿಯ ಆರೋಗ್ಯ ಪರೀಶಿಲಿಸಿದ ವೈದ್ಯರು ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಎಂದು ಮೊದಲು ಊಹಿಸಿದ್ದರು. ಆದರೆ ಚಿಕಿತ್ಸೆ ಆರಂಭಿಸಿದ ನಂತರ ವ್ಯಕ್ತಿಯ ಹೊಟ್ಟೆಯಲ್ಲಿ ಬ್ರೂಣ ಇರುವುದು ಕಂಡುಬಂದಿದೆ. ಇದೀಗ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆಯಲಾಗಿದೆ. ಬ್ರೂಣದಲ್ಲಿ ಕೂದಲಿನ ಭಾಗಗಳು, ದವಡೆಗಳು, ಕೈಕಾಲುಗಳು, ಜನನಾಂಗದ ಭಾಗಗಳು ಇದ್ದವು ಎಂದು ಸ್ವತಃ ವೈದ್ಯರೇ ತಿಳಿಸಿದ್ದಾರೆ.
‘ಇದು ನಮಗೆ ಆಘಾತಕಾರಿ ಸಂಗತಿಯಾಗಿತ್ತು. ಅಪರೂಪದಲ್ಲಿಯೇ ಅಪರೂಪವೆನ್ನಬಹುದಾದ ಈ ವ್ಯಕ್ತಿಯ ಸ್ಥಿತಿ ಕಂಡು ನಮಗೆ ಗಾಬರಿಯಾಗಿತ್ತು. ಆತನ ಹೊಟ್ಟೆಯಲ್ಲಿ ಬ್ರೂಣವಿರುವುದನ್ನು ಕಂಡು ನಾವು ಗೊಂದಲಕ್ಕೀಡಾಗಿದ್ದೇವೆ ಎಂದು ಚಿಕಿತ್ಸೆ ನೀಡಿದ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Mohan Bhagwat: ಎಲ್ಲಿಯವರೆಗೆ ಭಾರತದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆ ಇದೆಯೋ ಅಲ್ಲಿಯವರೆಗೆ....!
ಬೆರಗುಗೊಳಿಸುವ ಆವಿಷ್ಕಾರ!
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವಿವರಿಸಿದಂತೆ ಫೆಟಸ್-ಇನ್-ಫೀಟು (FIF) ಅತ್ಯಂತ ಅಪರೂಪದ ಸ್ಥಿತಿಯಾಗಿದೆ. ಒಂದು ದೋಷಪೂರಿತ ಕಶೇರುಕ ಭ್ರೂಣವು ಅದರ ಅವಳಿ ದೇಹದೊಳಗೆ ಆವರಿಸಿದಾಗ ಇದು ಸಂಭವಿಸುತ್ತದೆ. ಟೆರಾಟೋಮಾದಿಂದ ನಿಖರವಾದ ಎಂಬ್ರಿಯೊಪಾಥೋಜೆನೆಸಿಸ್ ಮತ್ತು ವ್ಯತ್ಯಾಸವನ್ನು ಇನ್ನೂ ಸಂಪೂರ್ಣವಾಗಿ ಸ್ಥಾಪಿಸಲಾಗಿಲ್ಲ, FIF ಒಂದು ಕುತೂಹಲಕಾರಿ ವೈದ್ಯಕೀಯ ಅಸಂಗತತೆಯಾಗಿ ಉಳಿದಿದೆ. ಈವರೆಗೆ ವಿಶ್ವದಲ್ಲೇ ಇಂತಹ 100ಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿದ್ದು, ಇದು ನಿಜವಾದ ಅಸಾಧಾರಣ ಘಟನೆಯಾಗಿದೆ.
ಫೆಟಸ್-ಇನ್-ಫೀಟು ಎಂದು ಕರೆಯಲ್ಪಡುವ ನಾಗಪುರದ ವ್ಯಕ್ತಿಯ ಅಸಾಮಾನ್ಯ ವೈದ್ಯಕೀಯ ಸ್ಥಿತಿಯು ಜಾಗತಿಕ ಗಮನ ಸೆಳೆದಿದೆ. 36 ವರ್ಷಗಳ ಕಾಲ ಕಣ್ಮರೆಯಾಗುತ್ತಿರುವ ಅವಳಿ ಮಗುವಿನೊಂದಿಗೆ ಅವರ "ಗರ್ಭಧಾರಣೆ" ವೈದ್ಯರನ್ನು ದಿಗ್ಭ್ರಮೆಗೊಳಿಸಿತು ಮತ್ತು FIFನ ಅಪರೂಪದ ವಿದ್ಯಮಾನದ ಮೇಲೆ ಬೆಳಕು ಚೆಲ್ಲಿತು. ಈ ಸಂಕೀರ್ಣ ಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆಯ ಅಗತ್ಯವಿರುವಾಗ, ಈ ಪ್ರಕರಣವು ಮಾನವ ದೇಹದೊಳಗೆ ತೆರೆದುಕೊಳ್ಳಬಹುದಾದ ವಿಸ್ಮಯಕಾರಿ ರಹಸ್ಯಗಳ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.