Ravana Language: ರಾವಣ ಲಂಕಾ ಅಧಿಪತಿ. ಅಂದರೆ ಇಂದಿನ ಶ್ರೀಲಂಕಾದ ರಾಜನಾಗಿದ್ದ. ದೊಡ್ಡ ಮೀಸೆ ಮತ್ತು ಹತ್ತು ತಲೆಯೊಂದಿಗೆ ಸಿಂಹಾಸನದಲ್ಲಿ ಕುಳಿತು ದೊಡ್ಡ ಡೈಲಾಗ್‌ಗಳನ್ನು ಹೇಳುವಂತೆ ರಾವಣನನ್ನು ತೆರೆಯ ಮೇಲೆ ತೋರಿಸಲಾಗುತ್ತದೆ. ಆದರೆ ರಾವಣ ಯಾವಾಗಲೂ ಹಿಂದಿಯಲ್ಲಿ ಮಾತನಾಡುವುದನ್ನು ನೀವು ಗಮನಿಸಿದ್ದೀರಾ. ರಾವಣ ನಿಜವಾಗಿಯೂ ಹಿಂದಿಯಲ್ಲಿ ಸಂಭಾಷಣೆಯನ್ನು ಮಾತನಾಡುತ್ತಿದ್ದ ಎಂದೇ ಅನೇಕ ಜನರು ಭಾವಿಸುತ್ತಾರೆ. ಆದರೆ, ಶ್ರೀಲಂಕಾದಲ್ಲಿ ಹಿಂದಿ ಮಾತನಾಡುವುದಿಲ್ಲ. ಹಾಗಾದರೆ ರಾವನ ಮಾತನಾಡುತ್ತಿದ್ದ ಭಾಷೆ ಯಾವುದಿರಬಹುದು. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ರಾವಣ ಆ ಸಮಯದಲ್ಲಿ ಸಂಸ್ಕೃತದಲ್ಲಿ ಮಾತನಾಡುತ್ತಿದ್ದ ಎಂದು ಹಲವರು ಹೇಳುತ್ತಾರೆ. ರಾವಣ ಮತ್ತು ಲಂಕಾದ ಜನರು ತಮಿಳಿನಲ್ಲಿ ಮಾತನಾಡಿತ್ತಿದ್ದಿರಬೇಕು ಎಂದು ಹಲವರು ಹೇಳುತ್ತಾರೆ. ಇದಲ್ಲದೆ, ರಾವಣನು ಮಹಾನ್ ವಿದ್ವಾಂಸ ಮತ್ತು ಅನೇಕ ಭಾಷೆಗಳ ಜ್ಞಾನವನ್ನು ಹೊಂದಿದ್ದನೆಂದು ಕೆಲವರು ನಂಬುತ್ತಾರೆ.


ಇದನ್ನೂ ಓದಿ: Black Friday Sale: ಅಮೆರಿಕದವರು ಈ ದಿನ ಏಕೆ ಶಾಪಿಂಗ್ ಮಾಡುತ್ತಾರೆ ಗೊತ್ತಾ? 


ಆ ಸಮಯದಲ್ಲಿ ಜನರು ಸಂಸ್ಕೃತದಲ್ಲಿ ಮಾತನಾಡುತ್ತಿದ್ದರು ಎಂದು ಅನೇಕ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ರಾವಣನಿಗೆ ಅನೇಕ ವೇದಗಳ ಬಗ್ಗೆ ಜ್ಞಾನವಿತ್ತು. ಅವನೊಬ್ಬ ಮಹಾನ್‌ ಬ್ರಾಹ್ಮಣನಾಗಿದ್ದ. ಆದ್ದರಿಂದ ಅವನು ಸಂಸ್ಕೃತವನ್ನು ಚೆನ್ನಾಗಿ ತಿಳಿದಿದ್ದನು. ಅಂತಹ ಪರಿಸ್ಥಿತಿಯಲ್ಲಿ ಬಹುಶಃ ರಾವಣ ಮಾತನಾಡಿತ್ತಿದ್ದ ಭಾಷೆ ಸಂಸ್ಕೃತವಾಗಿರಬಹುದು ಎಂದು ಅನೇಕ ಜನರು ವಾದಿಸುತ್ತಾರೆ. 


ಇದಲ್ಲದೇ ರಾವಣ ಬರೆದ ಶಿವತಾಂಡವ ಸ್ತೋತ್ರವೂ ಸಂಸ್ಕೃತದಲ್ಲಿತ್ತು. ಈ ಕಾರಣಕ್ಕಾಗಿ ಸಂಸ್ಕೃತವನ್ನು ಮಾತನಾಡುತ್ತಿದ್ದ ಎಂದು ಒತ್ತಿಹೇಳಲಾಗಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ರಾವಣ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದ ಎಂದು  ಕೆಲವು ಜನರು ಹೇಳುತ್ತಾರೆ.


ರಾವಣನು ಆಳಿದ ಸ್ಥಳದ ಭಾಷೆ ತಮಿಳು ಎಂದು ಜನರು ನಂಬುತ್ತಾರೆ. ಈ ಕಾರಣಕ್ಕಾಗಿಯೇ ರಾವಣನು ತಮಿಳಿನಲ್ಲಿ ಶಿವ ತಾಂಡವ ಸ್ತೋತ್ರವನ್ನು ಮೊದಲು ಬರೆದನು. ಇದರಿಂದ ರಾವಣನು ಕೇವಲ ತಮಿಳನ್ನು ಮಾತ್ರ ಮಾತನಾಡುತ್ತಿದ್ದ ಎಂದು ನಂಬಲಾಗಿದೆ. ತಮಿಳು ಸಂಸ್ಕೃತಕ್ಕಿಂತ ಹಳೆಯ ಭಾಷೆ ಮತ್ತು ತಮಿಳು 5000 ವರ್ಷಗಳ ಹಿಂದಿನಿಂದಲೂ ಇದೆ ಎಂಬ ವಾದವೂ ಇದೆ. ಹಾಗಂತ ಆ ಕಾಲದಲ್ಲಿ ತಮಿಳು ಇರಲಿಲ್ಲವೆಂದಲ್ಲ, ಯಾರೂ ತಮಿಳು ಮಾತನಾಡುತ್ತಿರಲಿಲ್ಲ. ಹಾಗಾಗಿ ತಮಿಳಿನ ಬಗ್ಗೆಯೂ ಹಲವು ವಾದಗಳಿವೆ. 


ಇದನ್ನೂ ಓದಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಭೋಜನ ಸವಿದ ಈ ಭಾರತೀಯ ಯಾರು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.