Rainbow Snake Video: ಪ್ರಪಂಚದ ಅತಿ ದೊಡ್ಡ ಹಾವುಗಳಲ್ಲಿ ಒಂದಾದ ರೆಟಿಕ್ಯುಲೇಟೆಡ್ ಹೆಬ್ಬಾವುಗಳು ಸಂಕೀರ್ಣ ಬಣ್ಣದ ಮಾದರಿಯನ್ನು ಹೊಂದಿವೆ. ವಜ್ರದ ರೀತಿ ಹೊಳಪನ್ನು ಹೊಂದಿರುತ್ತವೆ. ತಲೆಯ ಮೇಲ್ಭಾಗದಿಂದ ಬಾಲದ ತುದಿಯವರೆಗೆ ಕಪ್ಪು ಪಟ್ಟಿಯನ್ನು ಹೊಂದಿರುತ್ತವೆ. ಈ ಸರ್ಪಗಳ ಬಣ್ಣವು ಕಾಮನಬಿಲ್ಲಿನಂತಿರುತ್ತದೆ. ಇದನ್ನು ರೈನ್‌ ಬೋ ಹಾವು ಅಥವಾ ಇಂದ್ರ ಧನುಷ್ ಹಾವು ಎಂದು ಕರೆಯುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವೈರಲ್‌ ವಿಡಿಯೋ: 6 ಅಡಿ ಹಾವನ್ನು ಲುಂಗಿಯಲ್ಲಿ ಹಾಕಿಕೊಂಡ ವ್ಯಕ್ತಿ.. ಮುಂದೆ ನೋಡಿ ನಗು ತಡೆಯೋಕೆ ಆಗಲ್ಲ!


ಸರೀಸೃಪ ಮೃಗಾಲಯದ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ಅಮೇರಿಕನ್ ಯೂಟ್ಯೂಬರ್ ಜೇ ಬ್ರೂವರ್ ಅವರು ಇತ್ತೀಚೆಗೆ Instagram ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ, ಅಲ್ಲಿ ಅವರು ಬೃಹತ್ ರೆಟಿಕ್ಯುಲೇಟೆಡ್ ಹೆಬ್ಬಾವನ್ನು ತನ್ನ ತೋಳುಗಳಲ್ಲಿ ಹಿಡಿದಿರುವುದನ್ನು ಕಾಣಬಹುದು. ವಿಡಿಯೋದಲ್ಲಿ, ಕಾಮನಬಿಲ್ಲು ಹೆಬ್ಬಾವಿನ  ತಲೆ ಯನ್ನು ಜೇ ಬ್ರೂವರ್ ಕೈಯಲ್ಲಿದ್ದು, ನೆಲದ ಮೇಲೆ ಹಾಔಿನ ದೇಹ ಸುತ್ತಿಕೊಂಡಿರುವುದನ್ನು ಕಾಣಬಹುದು. ಇದು ಹಾವಿನ ಅದ್ಭುತವಾದ ವರ್ಣವೈವಿಧ್ಯದ ಬಣ್ಣಗಳನ್ನು ತೋರಿಸುತ್ತದೆ. 


 



 


ಅನೇಕ ಜನರು ಹಾವನ್ನು 'ಮಳೆಬಿಲ್ಲು ಹೆಬ್ಬಾವು' ಎಂದು ಕರೆಯುತ್ತಾರೆ. ಆದರೆ ಇದು ವಿಶೇಷ ಬಣ್ಣಗಳನ್ನು ಹೊಂದಿರುವ ಸಾಮಾನ್ಯ ರೆಟಿಕ್ಯುಲೇಟೆಡ್ ಹೆಬ್ಬಾವು ಎಂದು ಜೇ ವಿವರಿಸಿದರು. ಹಾವು ತಂಪಾಗಿರುತ್ತದೆ, ಮೃದುವಾಗಿರುತ್ತದೆ ಮತ್ತು ಸುಂದರವಾದ ಬಣ್ಣಗಳನ್ನು ಹೊಂದಿರುತ್ತದೆ. ನೆಟಿಜನ್‌ಗಳು ವಿಶಿಷ್ಟವಾದ ಹಾವಿನ ಸೌಂದರ್ಯವನ್ನು ಶ್ಲಾಘಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.


ಇದನ್ನೂ ಓದಿ: Viral Video: ಗಾಳಿಯಲ್ಲಿ ಹಾರುತ್ತ ಮಂಗನನ್ನು ಬೇಟೆಯಾಡಿದ ಚಿರತೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.