Viral Video: ಕೆಲವರಿಗೆ ಸ್ಟಂಟ್‌ಗಳನ್ನು ಮಾಡುವುದೆಂದರೆ ತುಂಬಾ ಇಷ್ಟ. ಕೆಲವೊಮ್ಮೆ ಬೈಕಿನಲ್ಲಿ, ಕೆಲವೊಮ್ಮೆ ಕಾರಿನಲ್ಲಿ ಅಥವಾ ಏನೂ ಲಭ್ಯವಿಲ್ಲದಿದ್ದರೆ ಜನರು ಪ್ರಾಣಿಗಳೊಂದಿಗೆ ಸಾಹಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಆದರೆ ಕೆಲವೊಮ್ಮೆ ಈ ಸ್ಟಂಟ್‌ ಮಾಡಲು ಹೋಗಿ ಯಡವಟ್ಟು ಮಾಡಿಕೊಳ್ಳುತ್ತಾರೆ. ಇದೀಗ ಇಂತಹದ್ದೇ ಒಂದು ವಿಡಿಯೋವೊಂದು ಹೊರಬಿದ್ದಿದ್ದು, ಅದು ವರನಿಗೆ ಸಂಬಂಧಿಸಿದೆ. ವರನು ಕುದುರೆ ಮೇಲೆ ಕುಳಿತು ಹೇಗೆ ಸಾಹಸವನ್ನು ಪ್ರಾರಂಭಿಸುತ್ತಾನೆ ಎಂಬುದನ್ನು ಇದರಲ್ಲಿ ನೀವು ನೋಡಬಹುದು.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video : ಹೆಣ ಎದ್ದು ಸಿಗರೇಟ್‌ ಸೇದಿದ್ರೆ ಹೇಗಿರುತ್ತೇ? ಹೊಗೆಹಾಕಿಸಿಕೊಂಡ ವ್ಯಕ್ತಿಯೇ ಹೊಗೆ ಬಿಟ್ಟಾಗ...


ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮದುವೆಯ ಮೆರವಣಿಗೆ ನಡೆಯುತ್ತಿದೆ. ಕುದುರೆಯ ಮೇಲೆ ಕುಳಿತು ವರ ಸ್ಟಂಟ್‌ ಮಾಡಲು ಪ್ರಾರಂಭಿಸುತ್ತಾನೆ. ಪ್ರಾರಂಭದಲ್ಲಿ ಎಲ್ಲವೂ ಸರಿ ಹೋದರೂ ಮರು ಕ್ಷಣವೇ ಯಡವಟ್ಟು ಸಂಭವಿಸುತ್ತದೆ. ಸ್ಟಂಟ್‌ ಮಾಡಲು ಹೋಗಿ ಜಾರಬೀಳುತ್ತಾನೆ. ವರ ಕುದುರೆ ಮೇಲೆ ಸುಮ್ಮನೆ ಕೂರದೆ ಸ್ಟಂಟ್‌ ಮಾಡಿ ಯಡವಟ್ಟು ಮಾಡಿಕೊಂಡ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಇದನ್ನು ನೋಡಿ ಅನೇಕರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.


 


 

 

 

 



 

 

 

 

 

 

 

 

 

 

 

A post shared by AMAN (@amanprajapti47)


 


ಮದುವೆಯ ದಿನದಂದು ಸಾಮಾನ್ಯವಾಗಿ ವರ ತುಂಬಾ ಶಾಂತವಾಗಿರುತ್ತಾರೆ, ಆದರೆ ಈ ವಿಡಿಯೋದಲ್ಲಿ ವರನು ಸ್ಟಂಟ್‌ಮ್ಯಾನ್ ಆಗಿದ್ದಾನೆ. ಸಾಹಸ ತೋರುವ ಭರದಲ್ಲಿ ಅತಿಥಿಗಳ ಮುಂದೆ ನಗೆಪಾಟಲಿಗೀಡಾಗುತ್ತಾನೆ. ಈ ವಿಡಿಯೋವನ್ನು amanprajapti47 ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋ ಸಾವಿರಾರು ಲೈಕ್ಸ್ ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ.


ಇದನ್ನೂ ಓದಿ : Railway Rules: ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಯಾತ್ರಿಗಳಿಗೆ ಸಂತಸದ ಸುದ್ದಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.