Sex on the Beach : ಗೂಗಲ್ ಇತ್ತೀಚೆಗೆ 2022 ರಲ್ಲಿ ಭಾರತೀಯ ಬಳಕೆದಾರರಿಂದ ಇಂಟರ್ನೆಟ್‌ನಲ್ಲಿ ಹೆಚ್ಚು ಹುಡುಕಿದ ಕೀವರ್ಡ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಒಂದು 'ಸೆಕ್ಸ್ ಆನ್ ದಿ ಬೀಚ್', ಇದನ್ನ ತಪ್ಪಾಗಿ ತಿಳಿದುಕೊಳ್ಳಬೇಡಿ. ಇದು ಒಂದು ರೀತಿಯ ಕಾಕ್ಟೈಲ್ ರೆಸಿಪಿಯಾಗಿದೆ. ಗೂಗಲ್ ನಲ್ಲಿ 2022 ರಲ್ಲಿ ಭಾರತೀಯರಿಂದ ಹೆಚ್ಚು ಹುಡುಕಲ್ಪಟ್ಟ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿತು, ಇದರಲ್ಲಿ 'ಸೆಕ್ಸ್ ಆನ್ ದಿ ಬೀಚ್' ಕಾಕ್ಟೈಲ್ ಮೂರನೇ ಸ್ಥಾನದಲ್ಲಿದೆ. ಪನೀರ್ ಪಸಂದ ಮೊದಲ ಸ್ಥಾನದಲ್ಲಿದ್ದು ಮೋದಕ್ ನಂತರ ಸ್ಥಾನದಲ್ಲಿದೆ.


COMMERCIAL BREAK
SCROLL TO CONTINUE READING

'ಸೆಕ್ಸ್ ಆನ್ ದಿ ಬೀಚ್' ಕಾಕ್‌ಟೈಲ್‌ ರೆಸಿಪಿ ಹುಡುಕಿರುವುದು ಆಶ್ಚರ್ಯವೇನಲ್ಲ. ಇದರಲ್ಲಿ ವೋಡ್ಕಾ, ಪೀಚ್ ಸ್ಕ್ನಾಪ್ಸ್, ಕಿತ್ತಳೆ ಹಣ್ಣಿನ ಜ್ಯೂಸ್, ಕ್ರ್ಯಾನ್ಬೆರಿ ಜ್ಯೂಸ್ ಇತ್ಯಾದಿ ಇರುತ್ತದೆ. ಆದ್ರೆ, ಇದನ್ನ ಕಾಕ್ಟೈಲ್‌ನಲ್ಲಿ ತಯಾರಿಸಲಾಗುತ್ತದೆ. ಈ ಕಾಕ್ಟೈಲ್‌ನ ಹೆಸರು ವಿವಾದಾತ್ಮಕವಾಗಿರಬಹುದು ಎಂದು ವೈನ್ ತಜ್ಞರು ಹೇಳುತ್ತಾರೆ, ಆದರೆ ಅದರ ರುಚಿ ಮತ್ತು ಸುವಾಸನೆಯು ತುಂಬಾ ಸಖತ್ ಆಗಿದೆ. ಆದರೆ ಅದರಲ್ಲಿ ಇರುವ ಪೀಚ್ ಸ್ಕ್ನಾಪ್ಸ್ ಒಂದು ರೀತಿಯ ಆಲ್ಕೋಹಾಲ್ ಆಗಿದೆ.


ಇದನ್ನೂ ಓದಿ : Viral Video: ಮನೆ ಮಾಲೀಕರೊಂದಿಗೆ ಡೋರ್ ಹಾಕಿ ಆಟ ಆಡಿದ ಬೆಕ್ಕು...!


ಅಮೆರಿಕದ ಫ್ಲೋರಿಡಾದಲ್ಲಿ ಬಾರ್ಟೆಂಡರ್ ಒಬ್ಬರು ಪ್ರಚಾರದ ಭಾಗವಾಗಿ 1987 ರಲ್ಲಿ ಮೊದಲ ಬಾರಿಗೆ ಈ ಕಾಕ್ಟೈಲ್ ಅನ್ನು ತಯಾರಿಸಿದ್ದರು. ಪ್ರವಾಸಿಗರು ಹಾಲಿ ಡೇಗೆ ಬಂದಾಗ, ಅವರು ಬೀಚ್ ಬಾರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್ಡರ್ ಮಾಡಿ ಕುಯುತ್ತಾರೆ. ರಜಾದಿನಗಳನ್ನು ಕಳೆಯಲು, ಲೈಂಗಿಕತೆ ಜೀವನ ಉತ್ತಮ ಗೊಳಿಸಲು ಬೀಚ್‌ಗೆ ಭೇಟಿ ನೀಡುತ್ತಿರುವವರು ಹೆಚ್ಚಾಗಿ ಸೇವಿಸುತ್ತಿದ್ದರು ಅದಕ್ಕೆ ಇದಕ್ಕೆ 'ಸೆಕ್ಸ್ ಆನ್ ದಿ ಬೀಚ್' ಎಂಬ ಹೆಸರು ಬಂದಿದೆ. ಅಲ್ಲದೆ, 1982 ರ ಅಮೇರಿಕನ್ ಬಾರ್ಟೆಂಡರ್ಸ್ ಸ್ಕೂಲ್ ಪುಸ್ತಕವು ಈ ಕಾಕ್ಟೈಲ್ ಅನ್ನು ಉಲ್ಲೇಖಿಸುತ್ತದೆ ಎಂದು ಕೆಲವರು ಹೇಳುತ್ತಾರೆ.


'ಸೆಕ್ಸ್ ಆನ್ ದಿ ಬೀಚ್' ಕಾಕ್‌ಟೈಲ್‌ ರೆಸಿಪಿ


- ಐಸ್ 
- 30 ಮಿಲಿ ವೋಡ್ಕಾ
- 30 ಮಿಲಿ ಪೀಚ್ ಸ್ನ್ಯಾಪ್ಸ್
- 60 ಮಿಲಿ ಕಿತ್ತಳೆ ಹಣ್ಣಿನ ಜ್ಯೂಸ್
- 60 ಮಿಲಿ ಕ್ರ್ಯಾನ್ಬೆರಿ ಜ್ಯೂಸ್
- ಕಿತ್ತಳೆ ಸಿಪ್ಪೆ, ಅಲಂಕಾರಕ್ಕಾಗಿ


ಒಂದು ಗ್ಲಾಸ್ ನಲ್ಲಿ ವೋಡ್ಕಾ, ಪೀಚ್ ಸ್ನ್ಯಾಪ್ಸ್ ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್ ಮತ್ತೆ ಐಸ್ ಹಾಕಬೇಕು. ಮೇಲ್ಭಾಗಕ್ಕೆ ಕ್ರ್ಯಾನ್ಬೆರಿ ಜ್ಯೂಸ್ ಹಾಕಿ. ಸರ್ವ್ ಮಾಡುವ ಗ್ಲಾಸ್ ಮೇಲೆ ಕಿತ್ತಳೆ ಸಿಪ್ಪೆಯನ್ನು ಅಲಂಕರಿಸಿ.


ಇದನ್ನೂ ಓದಿ : ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ, ಆನ್ಲೈನ್ ಕ್ಲಾಸ್ ನಡೆಸಲು ಸೂಚನೆ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.