ನಮ್ಮ ಮೆಟ್ರೋದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಭಯಾನಕಥೆಯನ್ನು ಬಿಚ್ಚಿಟ್ಟ ಯುವತಿ!
Namma metro viral news: ಬೆಂಗಳೂರು ಮೆಟ್ರೋದಲ್ಲಿ ಸೋಮವಾರ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ಆಕೆಯ ಸ್ನೇಹಿತೆ ರಿಡ್ಡಿಟ್ನ ಪೋಸ್ಟ್ವೊಂದರಲ್ಲಿ ಘಟನೆ ಬಗ್ಗೆ ವಿವರಿಸಿ ಸಹಾಯಕ್ಕಾಗಿ ಕೋರಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ.
ಬೆಂಗಳೂರು : ರಾಜಧಾನಿಯಲ್ಲಿ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಸಬ್‌ರೆಡಿಟ್‌ನ ಪೋಸ್ಟ್‌ವೊಂದು ಸಾಕ್ಷಿಯಾಗಿದೆ. ಸಾಮಾನ್ಯವಾಗಿ ರೆಡಿಟ್‌ನಲ್ಲಿ ಆಟೋ-ರಿಕ್ಷಾಗಳು, ಮೆಟ್ರೋ ನಿಲ್ದಾಣಗಳು ಮತ್ತು ಹಲವಾರು ಸ್ಥಳಗಳ ಸಮಸ್ಯೆಗಳ ಬಗ್ಗೆ ಪೋಸ್ಟ್ ಮೂಲಕ ಹಂಚಿಕೊಂಡಿರುತ್ತಾರೆ. ಇತ್ತೀಚಿಗೆ ರೆಡ್ಡಿಟ್ ಬಳಕೆದಾರರೊಬ್ಬರು, ತಮ್ಮ ಸ್ನೇಹಿತೆಗೆಯಾದ ಕೆಟ್ಟ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.
ಹೌದು.. ಮೆಟ್ರೋದಲ್ಲಿ ಜನಜಂಗುಳಿಯ ಮಧ್ಯೆ ವ್ಯಕ್ತಿಯೊಬ್ಬ ತಮ್ಮ ಸ್ನೇಹಿತೆಗೆ ಲೈಂಗಿಕ ಕಿರುಕುಳು ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸಲು ಸಾಮಾಜಿಕ ಜಾಲತಾಣದ ಮೊರೆ ಹೋಗಿರುವ ಬಗ್ಗೆ ವಿವರಿಸಿದ್ದಾರೆ. ಹಲವಾರು ರೆಡಿಟ್‌ನ ಬಳಕೆದಾರರು ಸಹಾಯಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ತಾಯಿ, ಮಗು ಸಾವಿನ ನೈತಿಕ ಹೊಣೆ ಹೊತ್ತು ಸಚಿವ ಜಾರ್ಜ್ ರಾಜೀನಾಮೆಗೆ ಪ್ರತಿಪಕ್ಷ ನಾಯಕ ಅಶೋಕ್ ಆಗ್ರಹ
ರೆಡ್ಡಿಟ್‌ನ @proteincarbs ಎಂಬ ಖಾತೆಯ ಬಳಕೆದಾರರು, ಈ ಘಟನೆ ಬಗ್ಗೆ ವಿವರಿಸಿದ್ದಾರೆ. "ನನ್ನ ಸ್ನೇಹಿತೆ ಪ್ರತಿದಿನ ಕಾಲೇಜಿಗೆ ಬಸ್‌ನಲ್ಲಿ ಹೋಗುತ್ತಿದ್ದಳು, ಇಂದು ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಮೆಜೆಸ್ಟಿಕ್‌ನಲ್ಲಿ ಬೆಳಿಗ್ಗೆ 8:50 ರ ಸುಮಾರಿಗೆ, ಮೆಟ್ರೋ ತುಂಬಾ ಜನದಟ್ಟಣೆಯಿಂದ ಕೂಡಿತ್ತು, ಒಬ್ಬರನೊಬ್ಬರು ತಳ್ಳುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ತಮ್ಮ ಸ್ನೇಹಿತೆಯನ್ನು ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ" ಎಂದು ಹೇಳಿಕೊಂಡಿದ್ದಾರೆ.
ತನ್ನ ಸ್ನೇಹಿತೆ ಕಿರುಕುಳಕ್ಕೆ ಒಳಗಾದ ಬಗ್ಗೆ ವಿವರಿಸುತ್ತಾ "ಮೆಟ್ರೋದಲ್ಲಿ ಆಕೆಯ ಹಿಂಬದಿಯಿಂದ ಒಬ್ಬ ವ್ಯಕ್ತಿ ಮುಟ್ಟಿ ಹಿಡಿಯುತ್ತಿದ್ದಾಗ ಆಕೆ ಹಿಂದಿದ್ದ ವ್ಯಕ್ತಿಯು ಕೆಂಪು ಬಣ್ಣದ ಅಂಗಿಯನ್ನು ಧರಿಸಿಕೊಂಡಿದನ್ನು ಅರಿತಳು. ಆಗ ಆಕೆ ಸಹಾಯಕ್ಕಾಗಿ ಕಿರುಚಲು ಮತ್ತು ಅಳಲು ಪ್ರಾರಂಭಿಸಿದಳು, ಆದರೆ ಯಾರೂ ಕಾಳಜಿ ವಹಿಸಲಿಲ್ಲ”. ತನ್ನ ಸ್ನೇಹಿತೆಗೆ ಹೀಗಾದ ಬಗ್ಗೆ ತನ್ನ ಕೋಪಗೊಂಡವಳು ತನ್ನ ಸ್ನೇಹಿತೆಯ ಸಹಾಯಕ್ಕಾಗಿ ರೆಡ್ಡಿಟ್‌ನಲ್ಲಿ ವಿವರಿಸದ ಮೇಲೆ "ಅವಳು ಆಘಾತಕ್ಕೊಳಗಾಗಿದ್ದಾಳೆ, ನಾನು ಅಸಹಾಯಕನಾಗಿದ್ದೇನೆ, ದಯವಿಟ್ಟು ಇದರ ಬಗ್ಗೆ ಏನು ಮಾಡಬಹುದೆಂದು ನನಗೆ ತಿಳಿಸಿ," ಎಂದು ಕೇಳಿಕೊಂಡರು.
ಇದನ್ನೂ ಓದಿ: ಉತ್ತರಾಖಂಡ ರಾಜ್ಯದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ
ಇನ್ನು ಈ ಸಂದೇಶಕ್ಕೆ ಹಲವಾರು ರೆಡ್ಡಿಟ್ ಬಳಕೆದಾರರು, ಪ್ರತಿಕ್ರಿಯೆ ನೀಡಿದ್ದಾರೆ. “ನಾನು ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ. ಸಿಸಿಟಿವಿ ಕಣ್ಗಾವಲಿನಲ್ಲಿ ಮೆಟ್ರೋ ತುಂಬಿರುವುದರಿಂದ ನೀವು ಕಂಪ್ಲೈಂಟ್ ಸಲ್ಲಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು @cpronammametro ಅನ್ನು ಟ್ಯಾಗ್ ಮಾಡುವ ಮೂಲಕ ದೂರು ನೀಡಿ ಎಂದು ವ್ಯಕ್ತಿಯೊಬ್ಬರು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತರು, "ದಯವಿಟ್ಟು ನನ್ನನ್ನು ಸಂಪರ್ಕಿಸಿ ಇದರಿಂದ ನಾವು ಈ ಬಗ್ಗೆ ಮಾತನಾಡಬಹುದು ಮತ್ತು ಮುಂದುವರೆಯಲು ಉತ್ತಮ ಮಾರ್ಗವನ್ನು ಕಂಡುಹಿಡಿಯಬಹುದು" ಎಂದು ಹೇಳಿಕೊಂಡಿದ್ದಾರೆ. ಹೀಗೆ ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.