ಶಕ್ತಿ ಯೋಜನೆ: ಕೆಎಸ್‌ಆರ್‌ಟಿಸಿ ಬಸ್ನಲ್ಲಿ ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್ ಲವ್ ಬರ್ಡ್ಸ್ ಗಳಿಗೆ ವಿಧಿಸಿದ ಶುಲ್ಕ ಎಷ್ಟು ಗೊತ್ತಾ?
Shakti Yojane: ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‌ಆರ್‌ಸಿಟಿ ಬಸ್ ನಲ್ಲಿ ತೆರಳುತ್ತಿದ್ದ ಅಜ್ಜಿ-ಮೊಮ್ಮಗಳು ತಮ್ಮೊಂದಿಗೆ ನಾಲ್ಕು ಲವ್ ಬರ್ಡ್ಸ್ ಹಕ್ಕಿ ಗಳನ್ನು ಕೂಡ ತೆಗೆದುಕೊಂಡು ಹೋಗಿದ್ದರು.
Shakti Yojane: ಇದೀಗ ರಾಜ್ಯದಲ್ಲಿ ಆಗಾಗ್ಗೆ ಹೆಚ್ಚು ಸದ್ದು ಮಾಡುತ್ತಿರುವ ವಿಷಯ ಎಂದರೆ ಅದುವೇ ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಜಾರಿಗೆ ತಂದಿರುವ 'ಶಕ್ತಿ ಯೋಜನೆ'. ಶಕ್ತಿ ಯೋಜನೆಯಲ್ಲಿ ರಾಜ್ಯದ ಮಹಿಳಾ ಮಣಿಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಹಾಗಂತ, ನೀವೇನಾದರೂ ನಿಮ್ಮ ಪ್ರೀತಿಯ ಸಾಕು ಪ್ರಾಣಿ-ಪಕ್ಷಿಗಳನ್ನು ಬಸ್ ನಲ್ಲಿ ಕರೆದೊಯ್ದರೆ ಅದಕ್ಕಾಗಿ ನೀವು ಶುಲ್ಕ ಪಾವತಿಸಬೇಕಾಗುತ್ತದೆ. ಇದೀಗ ಅಂತಹುದ್ದೇ ಒಂದು ಘಟನೆ ಕೆಎಸ್‌ಆರ್‌ಸಿಟಿ ಬಸ್ ಒಂದರಲ್ಲಿ ನಡೆದಿದೆ.
ಹೌದು, ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‌ಆರ್‌ಸಿಟಿ ಬಸ್ ನಲ್ಲಿ ತೆರಳುತ್ತಿದ್ದ ಅಜ್ಜಿ-ಮೊಮ್ಮಗಳು ತಮ್ಮೊಂದಿಗೆ ನಾಲ್ಕು ಲವ್ ಬರ್ಡ್ಸ್ ಹಕ್ಕಿ ಗಳನ್ನು ಕೂಡ ತೆಗೆದುಕೊಂಡು ಹೋಗಿದ್ದರು. ಶಕ್ತಿ ಯೋಜನೆಯ ಲಾಭ ಪಡೆದು ತಮಗೂ ತಮ್ಮ ಮೊಮ್ಮಗಳಿಗೂ ಫ್ರೀ ಟಿಕೆಟ್ ಪಡೆದ ಅಜ್ಜಿ ನಾಲ್ಕು ಲವ್ ಬರ್ಡ್ಸ್ ಗಳಿಗೆ ಬರೋಬ್ಬರಿ 444 ರೂಪಾಯಿ ಟಿಕೆಟ್ ಶುಲ್ಕವನ್ನು ಪಾವತಿಸಿದ್ದಾರೆ.
ಇಂದು ಬೆಳಿಗ್ಗೆ 08-18 ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಹೊರಟ್ಟಿದ್ದ ಅಜ್ಜಿ ಮೊಮ್ಮಗಳು, ತ್ರಮ್ಮ ಜೊತೆಗೆ ನಾಲ್ಕು ಲವ್ ಬರ್ಡ್ಸ್ ಗಳನ್ನು ಕೊಂಡೊಯ್ದಿದ್ದರು. ಆ ಲವ್ ಬರ್ಡ್ಸ್ ಗಳಿದ್ದ ಪಿಂಜರವನ್ನು ಅಜ್ಜಿ-ಮೊಮ್ಮಗಳಿಬ್ವರು ತಮ್ಮ ನಡುವೆಯೇ ಒಂದು ಆಸನದಲ್ಲಿ ಇರಿಸಿದ್ದರು.
ಇದನ್ನೂ ಓದಿ- Baby Born with Tail: ಬಾಲದೊಂದಿಗೆ ಜನಿಸಿದ ನವಜಾತ ಶಿಶು..! ಇದು ವೈದ್ಯ ಲೋಕಕ್ಕೆ ಅಚ್ಚರಿ ವಿಷಯ
ಇದನ್ನು ಗಮನಿಸಿದ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಶಕ್ತಿ ಯೋಜನೆಯಡಿ ಅಜ್ಜಿಗೆ ಫ್ರೀ ಟಿಕೆಟ್, ಮೊಮ್ಮಗಳಿಗೆ ಫ್ರೀ ಟಿಕೆಟ್ ನೀಡಿದ್ದಾರೆ. ಆದರೆ, ನಾಲ್ಕು ಲವ್ ಬರ್ಡ್ಸ್ ಗಳಿಗೆ ತಲಾ 111 ರೂ.ಗಳೆಂದು ಪರಿಗಣಿಸಿ 444 ರೂ. ಟಿಕೆಟ್ ವಿತರಿಸಿದ್ದಾರೆ. ನಾಲ್ಕು ಲವ್ ಬರ್ಡ್ಸ್ ಗಳಿಗೆ ಟಿಕೆಟ್ ನೀಡುವಾಗ ನಾಲ್ಕು ಮಕ್ಕಳು ಎಂದು ಟಿಕೆಟ್ ನಲ್ಲಿ ನಮೂದಿಸಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಸಾಕು ಪ್ರಾಣಿಗಳಿಗೆ ಎಷ್ಟು ದರ ವಿಧಿಸಲಾಗುತ್ತದೆ?
ನಿಮಗೆಲ್ಲರಿಗೂ ತಿಳಿದಿರುವಂತೆ ಕೆಎಸ್‌ಆರ್‌ಸಿಟಿ ಬಸ್ ಗಳಲ್ಲಿ ಸಾಕು ಪ್ರಾಣಿ ಅಥವಾ ಪಕ್ಷಿಗಳನ್ನು ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಸಾಗಾಣಿಕೆ ಮಾಡಲು ಅನುಮತಿಯನ್ನು ನೀಡಲಾಗಿದೆ. ಇದೇ ವೇಳೆ ಪ್ರತಿಷ್ಠಿತ ಸಾರಿಗೆಗಳಾದ ಕರ್ನಾಟಕ ವೈಭವ, ರಾಜಹಂಸ, ಹವಾನಿಯಂತ್ರಣರಹಿತ ಸ್ಲೀಪರ್ ಮತ್ತು ಎಲ್ಲಾ ರೀತಿಯ ಹವಾನಿಯಂತ್ರಿತ ಸಾರಿಗೆಗಳಲ್ಲಿ ಸಾಕು ಪ್ರಾಣಿ/ ಪಕ್ಷಿಗಳ ಸಾಗಣೆಯನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ- ಬ್ರಿಟಿಷರ ಅಧಿನದಲ್ಲಿರುವ ಕೊಹಿನೂರ್ ವಜ್ರದ ನಿಜವಾದ ಮಾಲೀಕ ಯಾರ್ ಗೊತ್ತೆ..?
ಮೊಲ, ನಾಯಿಮರಿ, ಬೆಕ್ಕು, ಪಕ್ಷಿ, ಪಂಜರದಲ್ಲಿನ ಪಕ್ಷಿ ಸಾಕು ಪ್ರಾಣಿಗಳಿಗೆ ಮಕ್ಕಳಿಗೆ ವಿಧಿಸುವ ದರವನ್ನೇ ವಿಧಿಸಲಾಗುತ್ತದೆ. ಆದರೆ, ಸಾಕು ಪ್ರಾಣಿಗಳನ್ನು ಕೊಂಡೊಯ್ಯುವ ಪ್ರಯಾಣಿಕರು ಇತರೆ ಪ್ರಯಾಣಿಕರಿಗೆ ಅಥವಾ ನಿಗಮದ ಸಿಬ್ಬಂದಿಗಳಿಗೆ ಅಥವಾ ಲಗೇಜ್‍ಗೆ ಹಾನಿಯಾಗದ ರೀತಿ ಅಥವಾ ಇತರೆ ಪ್ರಯಾಣಿಕರ ವಸ್ತುಗಳಿಗೆ ತೊಂದರೆಯಾಗದಂತೆ ಹಾಗೂ ನಿಗಮದ ಆಸ್ತಿಗೆ ಹಾನಿಯಾಗದ ರೀತಿ ಕಾಳಜಿ ವಹಿಸಬೇಕು ಎಂಬ ನಿಯಮವೂ ಇದೆ. ನಾಯಿಯನ್ನು ಸೂಕ್ತವಾಗಿ ಚೈನ್‍ನಿಂದ ಬಿಗಿದು, ವಾರಸುದಾರರ ಕಾಳಜಿಯೊಂದಿಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಕೊಂಡೊಯ್ಯಲು ಅವಕಾಶವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.