Viral video: ಯಮನ ವಿರುದ್ಧ ಹೋರಾಡಿ 2 ವರ್ಷದ ಬಾಲಕನ ಜೀವ ಉಳಿಸಿದ ಭೂಪ! CCTV ಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

Shocking viral video: ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮನೆ, ಅಂಗಡಿ, ಮಾಲ್, ರಸ್ತೆ ಹೀಗೆ ಎಲ್ಲೆಂದರಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಣ್ಗಾವಲು ಉದ್ದೇಶಕ್ಕಾಗಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಅನೇಕ ಅಪರಾಧಗಳು ವರ್ಣಿಸಲಾಗದ ಘಟನೆಗಳು ಸಿಸಿಟಿವಿಯ ದೃಶ್ಯಗಳ ಮೂಲಕ ಮುನ್ನೆಲೆಗೆ ಬಂದಿವೆ.
Shocking viral video: ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮನೆ, ಅಂಗಡಿ, ಮಾಲ್, ರಸ್ತೆ ಹೀಗೆ ಎಲ್ಲೆಂದರಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಣ್ಗಾವಲು ಉದ್ದೇಶಕ್ಕಾಗಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಅನೇಕ ಅಪರಾಧಗಳು ವರ್ಣಿಸಲಾಗದ ಘಟನೆಗಳು ಸಿಸಿಟಿವಿಯ ದೃಶ್ಯಗಳ ಮೂಲಕ ಮುನ್ನೆಲೆಗೆ ಬಂದಿವೆ.
ಇದೀಗ ಇಂತಹದ್ದೆ ಒಂದು ವಿಡಿಯೋ CCTV ಯಲ್ಲಿ ಸೆರೆಯಾಗಿದ್ದು, ಈ ಮೂಲಕ ಅಪಾರ್ಟ್‌ಮೆಂಟ್ ಕಟ್ಟಡದ 13ನೇ ಮಹಡಿಯಿಂದ 2 ವರ್ಷದ ಮಗು ಬಿದ್ದಿರುವ ಆಘಾತಕಾರಿ ದೃಶ್ಯಾವಳಿಗಳು ಭಾರೀ ಆಘಾತವನ್ನುಂಟು ಮಾಡಿದೆ.
ಮುಂಬೈನ ಥಾಣೆ ಪ್ರದೇಶದಲ್ಲಿ 2 ವರ್ಷದ ಮಗುವೊಂದು ಅಪಾರ್ಟ್‌ಮೆಂಟ್‌ನ 13ನೇ ಮಹಡಿಯಿಂದ ಬಿದ್ದಿದೆ. ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಬಿಡುಗಡೆಯಾಗಿದ್ದು, ಅತ್ಯಂತ ವೇಗವಾಗಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಗುವನ್ನು ರಕ್ಷಿಸಲು ಪ್ರಯತ್ನಿಸಿದ ವ್ಯಕ್ತಿಯನ್ನು ಹಲವರು ಶ್ಲಾಘಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೊವನ್ನು ಅಪಾರ್ಟ್ಮೆಂಟ್ ಕಟ್ಟಡದ ನೆಲ ಮಹಡಿಯಲ್ಲಿ ಅಳವಡಿಸಲಾಗಿರುವ ಕ್ಯಾಮೆರಾದಿಂದ ತೆಗೆಯಲಾಗಿದೆ. ವೀಡಿಯೊದಲ್ಲಿ, ಕೆಲವರು ಅಪಾರ್ಟ್ಮೆಂಟ್ನಿಂದ ಹೊರಬರುತ್ತಾರೆ. ಆ ಸಮಯದಲ್ಲಿ, ಒಬ್ಬ ಯುವಕ ಅಪಾರ್ಟ್ಮೆಂಟ್ ಕಡೆಗೆ ಧಾವಿಸುತ್ತಾನೆ. ಯಾಕೆ ಇಷ್ಟು ವೇಗವಾಗಿ ಓಡುತ್ತಿದ್ದಾನೆ ಎಂದು ಜನ ನೋಡಿ ಆಶ್ಚರ್ಯ ಪಡುವಷ್ಟರಲ್ಲಿ, ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಲು ಓಡುತ್ತಿರುವುದು ಬೆಳಕಿಗೆ ಬಂದಿದೆ.
ಮಗುವನ್ನು ಹಿಡಿಯಲು ಯುವಕ ಓಡುತ್ತಾನೆಯಾದರೂ, ಮಗುವನ್ನು ಹಿಡಿಯಲಾಗುವುದಿಲ್ಲ, ಆದರೆ ವೇಗವಾಗಿ, ರಭಸದಿಂದ ನೆಲಕ್ಕೆ ಬೀಳುತ್ತಿದ್ದ ಮಗುವನ್ನು ಅಡ್ಡಗಟ್ಟಿ, ಯುವಕ ಆ ಪುಟ್ಟ ಬಾಲಕನ ಪ್ರಾಣ ಉಳಿಸಿದ್ದಾನೆ, ಸಧ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಯುವಕ ಕೆಲಸಕ್ಕೆ ನೆಟ್ಟಿಗರು ಮೆಚ್ಚಿ ಕೊಂಡಾಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.