Funny Viral Video : ಈ ಸಾಮಾಜಿಕ ಮಾಧ್ಯಮವೇ ಹಾಗೆ. ಇಲ್ಲಿ ಯಾವುದಾದರೊಂದು ವಿಡಿಯೋ ಹಾಕಿದರೆ ಸಾಕು ನಿಮಿಷಗಳಲ್ಲಿ ವೈರಲ್ ಆಗಿ ಬಿಡುತ್ತದೆ. ಇವುಗಳಲ್ಲಿ ಕೆಲವು ವಿಡಿಯೋವನ್ನು ನೋಡಿದಾಗ ತಮಾಷೆ ಎನಿಸಿದರೆ, ಕೆಲವೊಂದು ವಿಡಿಯೋಗಳು ಮುಜುಗರವನ್ನು ಉಂಟು ಮಾಡುತ್ತದೆ. ಇನ್ನು ಕೆಲವು ನಮ್ಮನ್ನೇ ಆಲೋಚನೆಗೆ ತಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. 


COMMERCIAL BREAK
SCROLL TO CONTINUE READING

ಶಾಲೆಗೆ ಹೋಗುವಾಗ ಮಾರ್ಗ ಮಧ್ಯೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಾಡುವ ಕೆಲವೊಂದು ಕೀಟಲೆಗಳು ಭಾರೀ ವೈರಲ್ ಆಗುತ್ತಿವೆ. ಈ ವಿಡಿಯೋ ಕೂಡಾ ಅಂಥದ್ದೇ. ಒಬ್ಬ ವಿದ್ಯಾರ್ಥಿನಿ ಶಾಲೆಗೆ ತೆರಳುವ ಮಾರ್ಗ ಮಧ್ಯೆ ಈ ಕೃತ್ಯಕ್ಕೆ ಇಳಿದಿದ್ದಾಳೆ. ತನ್ನ ಸ್ನೇಹಿತೆಯರ ಮುಂದೆ ಅದೇನು ಸಾಬೀತುಪಡಿಸಲು ಹೋಗಿದ್ದಳೋ ಹುಡುಗಿ. ಮಾರ್ಗ ಮಧ್ಯೆ ನಿಂತಿದ್ದ ಬೈಕ್ ಏರಿದ್ದಾಳೆ. ಹೀಗೆ ಮಾಡುವಾಗ ಎದುರಿಗೆ ಬರುವ ಸ್ನೇಹಿತೆಯರತ್ತ ನೋಡಿ ನಗು ಕೂಡಾ ಬೀರುತ್ತಾಳೆ. 


ಇದನ್ನೂ ಓದಿ : Trending Video : ಚಲಿಸುವ ರೈಲಿನಲ್ಲಿಯೇ ರೊಮ್ಯಾನ್ಸ್‌.. ಪ್ರಾಣ ಪಣಕ್ಕಿಟ್ಟು ಇದೆಲ್ಲಾ ಮಾಡಬೇಕಾ?


ಆದರೆ ಆ ಹುಡುಗಿಗೆ ನಿಜವಾಗಿಯೂ ಬೈಕ್ ಓಡಿಸುವುದಕ್ಕೆ ಬರುತ್ತದೆಯೋ ಅಥವಾ ಬರೀ ಶೋ ಆಫ್ ಮಾಡುತ್ತಿದ್ದಾಳೋ ಗೊತ್ತಿಲ್ಲ. ಆ ಬೈಕ್ ಮಾತ್ರ ಅವಳದ್ದಲ್ಲ ಎನ್ನುವುದು ಇಲ್ಲಿ ಖಾತ್ರಿಯಾಗುತ್ತದೆ. ಯಾಕೆಂದರೆ ಅ ಹುಡುಗಿ ಬೈಕ್ ನಿಂದ ಇಳಿಯುತ್ತಿದ್ದಂತೆಯೇ ಆ ಬೈಕ್ ಒಡೆಯ ಒಂದು ಹುಡುಗಿ ಕುಳಿತ ಸೀಟ್ ಮೇಲೆ ನೀರು ಹಾಕುತ್ತಾನೆ. ಪಾಪ ಕೆಲವು ಹುಡುಗರಿಗೆ ತಮ್ಮ ಬೈಕ್, ಸ್ಕೂಟರ್ ಮೇಲೆ ವಿಪರೀತ ಮೋಹ ಇರುತ್ತದೆ. ತಮ್ಮ ಬೈಕ್, ಸ್ಕೂಟರ್ ಗಳನ್ನೇ ತಮ್ಮ ಕ್ರಶ್ ಎಂದು ಕೂಡಾ ಹೇಳಿ ಕೊಳ್ಳುತ್ತಾರೆ. ಅದನ್ನು ತಾನು ಬಿಟ್ಟು ಯಾರೇ ಮುಟ್ಟಿದರೂ ಸಿಟ್ಟು ನೆತ್ತಿಗೇರುತ್ತದೆ. ಈ ಹುಡುಗನಿಗೆ ಕೂಡಾ ಅದೇ ರೀತಿಯ  ಭಾವನೆ ಇರಬೇಕು. 


 



ಇದನ್ನೂ ಓದಿ : Viral Video: ಹೋಳಿ ಗುಂಗಿನಲ್ಲಿ ಹಾಡುಹಗಲೇ ಹದ್ದು ಮೀರಿದ ಹುಡುಗ-ಹುಡುಗಿ, ಚಲಿಸುತ್ತಿರುವ ಬುಲೆಟ್ ಮೇಲೆಯೇ...!


ಈ ವಿಡಿಯೋವನ್ನು funtaap ಎಂಬ  ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ಬಹಳಷ್ಟು ಜಣ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.