Fire stunt video : ಫೈರ್ ಸ್ಟಂಟ್‌ಗಳನ್ನು ವೀಕ್ಷಿಸಲು ಮತ್ತು ಪ್ರದರ್ಶಿಸಲು ತುಂಬಾ ರೋಮಾಂಚನಕಾರಿಯಾಗಿದೆ. ಸ್ಟಂಟ್ ಮಾಡುವವರು ಉತ್ತಮವಾಗಿ ಮಾಡಿದಷ್ಟೂ ಪ್ರೇಕ್ಷಕರು ಹೆಚ್ಚು ಥ್ರಿಲ್ ಅನುಭವಿಸುತ್ತಾರೆ. ಫೈರ್ ಸ್ಟಂಟ್‌ಗಳು ಎಷ್ಟು ರೋಮಾಂಚನಕಾರಿಯೋ, ಅವು ತುಂಬಾ ಅಪಾಯಕಾರಿ. ಫೈರ್ ಸ್ಟಂಟ್ ಸರಿಯಾದ ರೀತಿಯಲ್ಲಿ ಮಾಡದಿದ್ದರೆ ಭಾರೀ ಬೆಲೆ ತೆರಬೇಕಾಗುತ್ತದೆ. ಸ್ಟಂಟ್ ತಪ್ಪಿದರೆ ಅಪಘಾತಗಳು ಸಂಭವಿಸುತ್ತವೆ. ಅಂತಹದ್ದೇ ಘಟನೆ ಇತ್ತೀಚೆಗೆ ನಡೆದಿದೆ. ಸ್ಟಂಟ್ ಮಾಡುತ್ತಿದ್ದ ಯುವಕನೊಬ್ಬ ಬೆಂಕಿ ಅವಘಡಕ್ಕೆ ತುತ್ತಾಗಿದ್ದಾನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Video Viral : ವ್ಯಕ್ತಿಯ ರುಂಡವನ್ನು ಬಾಯಿಯಲ್ಲಿ ಹಿಡಿದು ತಿರುಗಾಡಿದ ನಾಯಿ!


ಕೆಲವು ದಿನಗಳ ಹಿಂದೆ, 'ರವಿ ಪಾಟಿದಾರ್' ಎಂಬವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಕಾರ್ಯಕ್ರಮದ ಭಾಗವಾಗಿ ಮೇಜಿನ ಮೇಲೆ ನಿಂತಿದ್ದಾನೆ. ಜನರು ಅವನ ಸುತ್ತಲೂ ಸೇರುತ್ತಾರೆ. ಅವನ ಕೈಯಲ್ಲಿ ಕೋಲು ಇದೆ. ಕೋಲಿಗೆ ಬೆಂಕಿ ಹಚ್ಚಿದ್ದಾನೆ. ಆ ವ್ಯಕ್ತಿ ತನ್ನ ಬಾಯಿಗೆ ಪೆಟ್ರೋಲ್ ಸುರಿದು ಕೋಲಿಗೆ ವೇಗವಾಗಿ ಊದುತ್ತಾನೆ. ಭಾರಿ ಬೆಂಕಿ ಹೊತ್ತಿಕೊಳ್ಳುತ್ತದೆ. ಕೋಲಿನಿಂದ ಬೆಂಕಿ ವ್ಯಕ್ತಿಯ ಮುಖಕ್ಕೆ ಅಂಟಿಕೊಳ್ಳುತ್ತದೆ. ಅವನ ಗಡ್ಡಕ್ಕೆ ಬೆಂಕಿ ಹೊತ್ತಿ ಉರಿಯುತ್ತದೆ.


 



 


ಸ್ಟಂಟ್‌ಮ್ಯಾನ್‌ನ ಗಡ್ಡಕ್ಕೆ ಬೆಂಕಿ ಬೀಳುತ್ತಿದ್ದಂತೆ ನೋಡುಗರು ಎಚ್ಚರಗೊಂಡಿದ್ದಾರೆ. ಅವರು ಮೇಲೆ ಹತ್ತಿ ಅವರ ಮುಖವನ್ನು ತಮ್ಮ ಕೈಗಳಿಂದ ಹೊಡೆದು ಬೆಂಕಿಯನ್ನು ನಂದಿಸುತ್ತಾರೆ. ಮುಖದ ಮೇಲೆ ಬೆಂಕಿ ಹೆಚ್ಚು ಹರಡುತ್ತಿದ್ದಂತೆ ಯುವಕ ನೋವಿನಿಂದ ಒದ್ದಾಡಿದ. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 'ravipatidar603' ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಇದುವರೆಗೆ 12.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜೀವವನ್ನೇ ಪಣಕ್ಕಿಟ್ಟು ಇಂತಹ ಸ್ಟಂಟ್‌ಗಳನ್ನು ಮಾಡಬೇಕೇ' ಎಂದು ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ: Cricketers acted in films : ಅಭಿನಯದಿಂದ ಮೋಡಿ ಮಾಡಿದ ಭಾರತೀಯ ಕ್ರಿಕೆಟಿಗರು ಇವರೇ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.