Swedish woman married indian : ಪ್ರೀತಿಗೆ ಗಡಿಯಿಲ್ಲ ಎಂಬ ಮಾತಿದೆ, ಕ್ಷಣಮಾತ್ರದಲ್ಲಿ ಹುಟ್ಟುವ ಪ್ರೀತಿ ಕೆಲವೊಮ್ಮೆ ಸುಂದರ ವೈವಾಹಿಕ ಜೀವನಕ್ಕೂ ಕಾರಣವಾಗುತ್ತವೆ. ಕೆಲವೊಂದಿಷ್ಟು ಲವರ್‌ ಸ್ಟೋರಿಗಳು ಹಾಯ್‌, ಬಾಯ್‌ಗೆ ಸೀಮಿತವಾಗಿ ಎಂಡ್‌ ಆಗುತ್ತವೆ. ಇದೀಗ ಇಲ್ಲೊಬ್ಬ ವಿದೇಶಿ ಮಹಿಳೆ ಫೇಸ್‌ಬುಕ್‌ನಲ್ಲಿ ಪ್ರೀತಿಸಿದ ಯುವಕನಿಗಾಗಿ ತನ್ನ ದೇಶ ಬಿಟ್ಟು ಬಂದು ಮದುವೆಯಾಗಿರುವ ಅಪರೂಪದ ಪ್ರಸಂಗ ನಡೆದಿದೆ.


COMMERCIAL BREAK
SCROLL TO CONTINUE READING

ಹೌದು... ಈ ಪ್ರೀತಿ ಹೀಗೆನೇ ಯಾವಾಗ... ಯಾರ.. ಮೇಲೆ ಹೇಗೆ..? ಲವ್‌ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಒಂದು ಜೋಕ್‌ ಇದ್ಯಲ್ಲ.. ʼದಾರಿಯಲ್ಲಿ ಸಿಕ್ಕಳು, ನನ್ನ ನೋಡಿ ನಕ್ಕಳು, ನಮಗೀಗ ಮೂರು ಮಕ್ಕಳು,ʼ ಅನ್ನೋಹಾಗೆ ಎಲ್ಲಾ ಒಕೆ ಆದ್ರೆ ಪ್ರೀತಿ ಸಕ್ಸಸ್‌ ಇಲ್ಲಾ ಅಂದ್ರೆ ಅಯೋ...! ದೇವರೆ ಅಂತ ಪ್ರೇಯಸಿಯನ್ನ ನೆನೆದು ಬಾರ್‌ ಮುಂದೆ ತಿರುಗಾಡ್ಬೇಕಾಗುತ್ತದೆ. ಅದು ಹಾಗಿರಲಿ ಬಿಡಿ ಇಲ್ಲೊಂದು ಇಂಟ್ರಸ್ಟಿಂಗ್‌ ಲವ್‌ ಸ್ಟೋರಿ ಇದೆ. ನೋಡಿ..


Aghori: ಹೆಣಗಳ ಜೊತೆ ಲೈಂಗಿಕ ಸಂಪರ್ಕ, ಮಾನವ ಮಾಂಸ ಸೇವನೆ: ಇದು ಅಘೋರಿಗಳ ಭಯಾನಕ ಶಿವಾರಾಧನೆ!!


ಸ್ವೀಡನ್‌ನ ಕ್ರಿಸ್ಟನ್ ಲೀಬರ್ಟ್ ಎಂಬ ಮಹಿಳೆ ಹಿಂದೂ ಪದ್ಧತಿಯಂತೆ ಪವನ್ ಕುಮಾರ್ ಎಂಬುವರನ್ನು ಮದುವೆಯಾಗಿದ್ದಾರೆ. ಪವನ್ ಉತ್ತರ ಪ್ರದೇಶದ ಇಟಾಹ್ ನಿವಾಸಿ. ಕ್ರಿಸ್ಟನ್‌ ಪವನ್‌ನನ್ನು ಮದುವೆಯಾಗಲು ಸುಮಾರು 6,000 ಕಿ.ಮೀ ದೂರವನ್ನು ದಿಂದ ಬಂದಿದ್ದಾರೆ. ಹಾಗಂತ ಇವರಿಬ್ಬರು ಕ್ಲಾಸ್‌ಮೇಟ್‌ ಅಥವಾ ಒಂದೇ ಕಂಪನಿಯ ಉದ್ಯೋಗಿಗಳು, ಸಂಬಂಧಿಕರೇನೂ ಅಲ್ಲ, ಬದಲಿಗೆ ಪ್ರೇಸ್‌ ಬುಕ್‌ ಪ್ರೇಮಿಗಳು. ಯಸ್‌.. ಕ್ರಿಸ್ಟನ್, ಪವನ್ ಅನ್ನು ಫೇಸ್‌ಬುಕ್‌ನಲ್ಲಿ ಭೇಟಿಯಾಗಿದ್ದಳು.


ವರದಿಗಳ ಪ್ರಕಾರ ಕ್ರಿಸ್ಟೆನ್ ಮತ್ತು ಪವನ್ 2012 ರಲ್ಲಿ ಫೇಸ್‌ಬುಕ್‌ನಲ್ಲಿ ಮಾತನಾಡಲು ಪ್ರಾರಂಭಿಸಿದರು. ಪವನ್ ಬಿ.ಟೆಕ್ ಪದವೀಧರರಾಗಿದ್ದಾರೆ ಮತ್ತು ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಸ್ಟನ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ, ಏಕೆಂದರೆ ಅವರು ಈ ಹಿಂದೆಯೂ ಇಲ್ಲಿಗೆ ಬಂದಿದ್ದಂತೆ. ಅವರೇ ಹೇಳುವಂತೆ "ನಾನು ಮೊದಲು ಭಾರತಕ್ಕೆ ಬಂದಿದ್ದೇನೆ, ನಾನು ಭಾರತವನ್ನು ಪ್ರೀತಿಸುತ್ತೇನೆ ಮತ್ತು ಈ ಮದುವೆಯ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ" ಅಂತ ಹೇಳಿದ್ದಾರೆ.  ಇನ್ನೂ ಈ ಲವ್‌ ಮ್ಯಾರೇಜ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಯುವಕರು ನಾಳೆಯಿಂದ ನಾನೂ ಚಾಟ್‌ ಮಾಡ್ತೀನಿ ಗುರು ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಆದ್ರೆ ಎಲ್ಲರ ಹಣೆ ಬರಹ ಒಂದೇ ತರ ಇರ್ಬೇಕು ಅಲ್ವಾ ಬಾಯ್ಸ್‌..https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.