ವಿದ್ಯಾರ್ಥಿಗಳ ಎದುರೇ ಜುಟ್ಟು ಹಿಡಿದು ಶಿಕ್ಷಕಿಯರ ಜಗಳ..! ವಿಡಿಯೋ ವೈರಲ್
ಬಿಹಾರ ರಾಜ್ಯದ ಪಾಟ್ನಾ ಬಳಿ ಇರುವ ಕೊರಿಯಾ ಎಂಬ ಪ್ರದೇಶದ ಶಾಲೆಯಲ್ಲಿ ನಡೆದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿಕ್ಷಕಿ ಅನಿತಾ ಕುಮಾರಿ ಮತ್ತು ಮುಖ್ಯ ಶಿಕ್ಷಕಿ ಗಾಂಧಿ ಕುಮಾರಿ ನಡುವೆ ಮಾತಿನ ಚಕಮಕಿ ನಡೆದಿದೆ.
Viral Video : ಸೋಷಿಯಲ್ ಮೀಡಿಯಾದಲ್ಲಿ ನಾವು ಪ್ರತಿನಿತ್ಯ ಹಲವಾರು ರೀತಿಯ ವೀಡಿಯೋಗಳನ್ನು ನೋಡುತ್ತಿರುತ್ತೇವೆ. ಇಂಟರ್‌ನೆಟ್‌ನಲ್ಲಿ ನೋಡುವ ವಿಡಿಯೋಗಳು ಕೆಲವೊಮ್ಮೆ ನಗು ತರಿಸಿದ್ರೆ, ಇನ್ನು ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತವೆ. ಅದೇ ರೀತಿ ಆಘಾತವನ್ನುಂಟುಮಾಡುವ ವಿಡಿಯೋಗಳು ಸಹ ನೋಡಲು ಸಿಗುತ್ತವೆ. ಇತ್ತೀಚಿನ ದಿನಗಳಲ್ಲಿ ಮದುವೆಯ, ಪ್ರೇಮಿಗಳ, ಶಾಲೆಯ, ಪ್ರಾಣಿಗಳ ವಿಡಿಯೋಗಳು ಅಂತರ್ಜಾಲವನ್ನು ಆವರಿಸಿಕೊಳ್ಳುತ್ತಿವೆ. ಅದರಲ್ಲೂ ಹೆಚ್ಚಾಗಿ ಶಾಲೆಯಲ್ಲಿ ತೆಗೆದ ವಿಡಿಯೋಗಳು ಬಹಳ ಬೇಗ ವೈರಲ್ ಆಗುತ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ಸಿಗುವ ವಿಡಿಯೋಗಳು ನೋಡುಗರಿಗೆ ಸಾಕಷ್ಟು ಪಾಠವನ್ನು ಕಲಿಸುತ್ತವೆ. ಸದ್ಯ ಬಿಹಾರ ರಾಜ್ಯದ ಪಾಟ್ನಾ ಬಳಿ ಇರುವ ಕೊರಿಯಾ ಎಂಬ ಪ್ರದೇಶದ ಶಾಲೆಯಲ್ಲಿ ನಡೆದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿಕ್ಷಕಿ ಅನಿತಾ ಕುಮಾರಿ ಮತ್ತು ಮುಖ್ಯ ಶಿಕ್ಷಕಿ ಗಾಂಧಿ ಕುಮಾರಿ ನಡುವೆ ಮಾತಿನ ಚಕಮಕಿ ನಡೆದಿದೆ. ಗಾಂಧಿ ಕುಮಾರಿ ಅನಿತಾ ಕುಮಾರಿಗೆ ತರಗತಿಯ ಕಿಟಕಿ ಮುಚ್ಚುವಂತೆ ಹೇಳಿದ್ದರಂತೆ. ಆದರೆ ಅನಿತಾ ಕುಮಾರಿ ಆ ಕಿಟಕಿಗಳನ್ನು ಮುಚ್ಚಲು ನಿರಾಕರಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂದು ತಿಳಿದು ಬಂದಿದೆ.
ಇದೊಂದು ಬಾಕಿ ಇತ್ತು ನೋಡಿ: ಹಣೆ ಮೇಲೆ ಪತಿಯ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಪತ್ನಿ !
ನಂತರ ಇಬ್ಬರೂ ಶಾಲಾ ಮಕ್ಕಳ ಮುಂದೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಾಗ್ವಾದ ಮುಗಿಯುತ್ತಿದ್ದಂತೆ ಮುಖ್ಯಶಿಕ್ಷಕಿ ಗಾಂಧಿ ಕುಮಾರಿ ತರಗತಿಯಿಂದ ಹೊರಗೆ ಬಂದರು. ಈ ವೇಳೆ ಹಿಂಬಾಲಿಸಿದ ಅನಿತಾ ಕುಮಾರಿ ಮುಖ್ಯ ಶಿಕ್ಷಕಿ ಗಾಂಧಿಕುಮಾರಿಗೆ ಚಪ್ಪಲಿ ಹಾಗೂ ದೊಣ್ಣೆಯಿಂದ ಥಳಿಸಿದ್ದಾರೆ. ನಂತರ ಮತ್ತೋರ್ವ ಶಿಕ್ಷಕಿಯೊಂದಿಗೆ ಸೇರಿಕೊಂಡು ಮುಖ್ಯ ಶಿಕ್ಷಕಿಯನ್ನು ಕೆಳಕ್ಕೆ ತಳ್ಳಿ ಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ