ಒಂದಲ್ಲ, ಎರಡಲ್ಲ, ಬರೋಬ್ಬರಿ 100ಕ್ಕೂ ಹೆಚ್ಚು ಮಕ್ಕಳ ತಂದೆ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್..! ಹೆಂಡತಿಯರು ಎಷ್ಟು ಅಂತೀರಾ..?
Telegram CEO Pavel Durov : ಜನಪ್ರಿಯ ಮೆಸೆಂಜರ್ಗಳ ಪೈಕಿ ಟೆಲಿಗ್ರಾಮ್ ಕೂಡ ಒಂದು.. ಇದರ ಸಹ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡ್ಯುರೊ ಅವರಿಗೆ ಈಗ 39 ವರ್ಷ. ಇನ್ನೂ ಮದುವೆಯಾಗಿಲ್ಲ. ಆದರೆ ಸ್ವತಃ ಪಾವೆಲ್ ತಾವು 100ಕ್ಕೂ ಹೆಚ್ಚು ಮಕ್ಕಳ ತಂದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Pavel Durov : ಟೆಲಿಗ್ರಾಮ್ ಒಂದು ಸಾಮಾಜಿಕ ಸಂದೇಶ ರವಾನಿಸುವ ಮಾಧ್ಯಮ.. ಪ್ರಪಂಚದಾದ್ಯಂತ ಹೆಚ್ಚಿನ ಜನರು ಇದನ್ನು ಬಳಸುತ್ತಾರೆ.. ಇನ್ನು ಇದರ ಸಹ ಸಂಸ್ಥಾಪಕ ಪಾವೆಲ್ ಡ್ಯೂರೊ ಇತ್ತೀಚಿಗೆ ಶಾಕಿಂಗ್ ವಿಚಾರವೊಂದರನ್ನು ಬಹಿರಂಗ ಪಡಿಸಿದ್ದಾರೆ.. ಮದುವೆಯಾಗಿಲ್ಲವಾದರೂ ತಾವು 100ಕ್ಕೂ ಹೆಚ್ಚು ಮಕ್ಕಳ ತಂದೆ ಎಂದು ಹೇಳಿಕೊಂಡಿದ್ದಾರೆ.. ಇಷ್ಟಕ್ಕೂ ಏನ್ ಮ್ಯಾಟರ್ ಇದು.. ಬನ್ನಿ ನೋಡೋಣ..
ಹೌದು.. 15 ವರ್ಷಗಳ ಹಿಂದೆ ಮಕ್ಕಳಿಲ್ಲದ ಪಾವೆಲ್ ಡ್ಯುರೋ ಸ್ನೇಹಿತರೊಬ್ಬರು ತುಂಬಾ ದುಃಖಿತರಾಗಿದ್ದರಂತೆ.. ಅವರ ಮನವಿಯನ್ನು ಸ್ವೀಕರಿಸಿ ಮೊದಲ ಬಾರಿಗೆ ವೀರ್ಯ ದಾನ ಮಾಡಿದೆ. ಮೊದಲ ಬಾರಿಗೆ ವೀರ್ಯಾಣು ದಾನವನ್ನು ಮಾಡುವಾಗ ಬಹಳ ಹಿಂಜರಿಕೆ ಇತ್ತು ಎಂದು ಪಾವೆಲ್ ಡುರೊವ್ ಹೇಳಿದರು, ಆದರೆ ಗುಣಮಟ್ಟದ ವೀರ್ಯದ ಕೊರತೆಯಿಂದಾಗಿ ಸಂತಾನಹೀನ ದಂಪತಿಗಳಿಗೆ ವೀರ್ಯವನ್ನು ದಾನ ಮಾಡುವುದು ಸಾಮಾಜಿಕ ಕರ್ತವ್ಯ ಅಂತ ವೈದ್ಯರು ಹೇಳಿದರು.
ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಭೀಕರ ವಿಮಾನ ಪತನ.. 62 ಮಂದಿ ಸಾವು! ಆಕಾಶದಿಂದ ವಿಮಾನ ಬೀಳುವ ವಿಡಿಯೋ ವೈರಲ್
ಅಂದಿನಿಂದ ನಿರಂತರವಾಗಿ ವೀರ್ಯಾಣು ದಾನ ಮಾಡುತ್ತಿದ್ದು, ಇಲ್ಲಿಯವರೆಗೆ 12 ದೇಶಗಳಲ್ಲಿ ನೂರಕ್ಕೂ ಹೆಚ್ಚು ದಂಪತಿಗಳು ಮಕ್ಕಳನ್ನು ಪಡೆದಿದ್ದಾರೆ ಎಂದು ಪಾವೆಲ್ ಡುರೊವ್ ಹೇಳಿದ್ದಾರೆ. ಅಲ್ಲದೆ, ಪಾವೆಲ್ ಡುರೊವ್ ಅವರು ಹಲವು ವರ್ಷಗಳ ಹಿಂದೆ ವೀರ್ಯವನ್ನು ದಾನ ಮಾಡುವುದನ್ನು ನಿಲ್ಲಿಸಿದ್ದರು, ಆದರೆ ಐವಿಎಫ್ ಆಸ್ಪತ್ರೆಯಲ್ಲಿ ಹೆಪ್ಪುಗಟ್ಟಿದ ಮತ್ತು ಸಂರಕ್ಷಿಸಲಾಗುತ್ತಿರುವ ಅವರ ವೀರ್ಯವು ಇನ್ನೂ ಅನೇಕ ಮಕ್ಕಳ ಜನ್ಮಕ್ಕೆ ಕಾರಣವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಅವರ ಜೈವಿಕ ಮಕ್ಕಳು ಒಬ್ಬರನ್ನೊಬ್ಬರು ಗುರುತಿಸಲು ತಮ್ಮ ಡಿಎನ್‌ಎ ವಿವರಗಳನ್ನು ಬಿಡುಗಡೆ ಮಾಡಲು ಯೋಜಿಸಿದ್ದಾರೆ ಎಂದು ಈ ಕುರಿತು ಪಾವೆಲ್ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.. ಈ ಪೋಸ್ಟ್ ಅನ್ನು 1.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಅಲ್ಲದೆ, ಸ್ಕ್ರೀನ್‌ಶಾಟ್ ಅನ್ನು ಸೋಷಿಯಲ್ ಮಾಧ್ಯಮಗಳಲ್ಲಿಯೂ ಹಂಚಿಕೊಳ್ಳಲಾಗಿದೆ. ಇದಕ್ಕೆ ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.