Mother Makeover Video: ಇದು ಮೊಬೈಲ್‌ ಜಗತ್ತು. ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ಇದ್ದೇ ಇರುತ್ತವೆ. ಸಂಪರ್ಕ ಸಾಧನದಿಂದ ಹಿಡಿದು ಮನರಂಜನೆ ವರೆಗೂ ಮೊಬೈಲ್‌ ನಮ್ಮ ಜೀವನವನ್ನು ಆವರಿಸಿಕೊಂಡು ಬಿಟ್ಟಿದೆ. ಸೋಷಿಯಲ್‌ ಮೀಡಿಯಾವನ್ನು ಎಲ್ಲರೂ ಬಳಸುತ್ತಿದ್ದಾರೆ. ಇಂಟರ್‌ನೆಟ್‌ನಲ್ಲಿ ಅನೇಕ ರೀತಿಯ ವಿಡಿಯೋಗಳು ವೈರಲ್‌ ಆಗುತ್ತವೆ. ಇದರಲ್ಲಿ ಕೆಲವು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸಿದರೆ, ಮತ್ತೆ ಕೆಲವು ವಿಡಿಯೋಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. 


COMMERCIAL BREAK
SCROLL TO CONTINUE READING

ನೀವು ಹಿಂದೆಂದೂ ನೋಡಿರದಂತಹ ವಿಡಿಯೋಗಳನ್ನು ನೀವು ಇಂಟರ್ನೆಟ್‌ನಲ್ಲಿ ನೋಡುತ್ತೀರಿ. ಇದೀಗ ಅಂಥದ್ದೇ ವಿಡಿಯೋ ಒಂದು ಎಲ್ಲೆಡೆ ವೈರಲ್‌ ಆಗುತ್ತಿದೆ. ಮೇಕಪ್ ಮಾಡಿದ ನಂತರ, ಮಗುವಿಗೆ ತನ್ನ ತಾಯಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ತಾಯಿಯ ಬದಲಾದ ರೂಪವನ್ನು ನೋಡಿ ಅವನು ಅವಳ ಬಳಿ ಹೋಗಲು ನಿರಾಕರಿಸಿದ. ಚಿಕ್ಕ ಮಗುವಿನ ಈ ರಿಯಾಕ್ಷನ್‌ ಎಲ್ಲೆಡೆ ವೈರಲ್‌ ಆಗುತ್ತಿದೆ. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. 


ಇದನ್ನೂ ಓದಿ: ಅಡುಗೆ ಭಟ್ಟನಿಗೆ ಕಷ್ಟಯಾಕೆ ಆಂತ ಗ್ಯಾಸ್‌ ಮೇಲೆ ಕುಳಿತ ಕೋಳಿ..! ಆಮೇಲೆ ಏನಾಯ್ತು..?


ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಪುಟ್ಟ ಮಗುವೊಂದು ಗಲಾಟೆ ಮಾಡಿ ತಾಯಿಗಾಗಿ ಹುಡುಕಾಟ ನಡೆಸುತ್ತಿರುವುದನ್ನು ನೋಡಬಹುದು. ಅವನ ತಾಯಿ ಮೇಕ್ಅಪ್ ಮಾಡಿಸಿಕೊಂಡಿದ್ದಾರೆ. ಆದರೆ ಮೇಕ್‌ ಓವರ್‌ ಆದ ಅಮ್ಮನನ್ನು ಈ ಮಗು ಗುರುತಿಸುತ್ತಲೇ ಇಲ್ಲ. ಬ್ಯೂಟಿ ಪಾರ್ಲರ್‌ನವರು ಇವರೇ ನಿಮ್ಮ ತಾಯಿ ಎಂದು ಹೇಳಿದರೂ, ಈ ಮಗು ಅದನ್ನು ನಂಬುತ್ತಿಲ್ಲ. ಮೇಕಪ್ ಮಾಡಿದ ನಂತರ ತಾಯಿಯನ್ನು ಗುರುತಿಸಲು ಮಗು ನಿರಾಕರಿಸುತ್ತಿದೆ. ಅವನು ತನ್ನ ತಾಯಿಯನ್ನು ಹುಡುಕಲು ಪ್ರಾರಂಭಿಸುತ್ತಾನೆ. ಆ ಮಗುವಿಗೆ ನಿನ್ನ ತಾಯಿ ಮೇಕಪ್ ಮಾಡಿದ್ದಾಳೆ ಎಂದು ಪದೇ ಪದೇ ವಿವರಿಸುತ್ತಾರೆ. ಆದರೂ ಮಗುವಿಗೆ ಅವಳನ್ನು ಗುರುತಿಸಲಾಗುತ್ತಿಲ್ಲ. ತಾಯಿ ತನ್ನ ಮಡಿಲಲ್ಲಿ ಮಗುವನ್ನು ಎತ್ತಿಕೊಂಡರು. ಆದರೆ ಈ ಬಾಲಕ ಜೋರಾಗಿ ಅಳಲು ಆರಂಭಿಸಿದ. 


 


Viral Video: ಮೆಟ್ರೋದಲ್ಲಿ ಕೆಳಗೆ ಮಲಗಿ ಪ್ರೇಮಿಗಳ ರೊಮ್ಯಾನ್ಸ್‌.. ಮೋಹದಲ್ಲಿ ಮೈಮರೆತ ಲವರ್ಸ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.