ನವದೆಹಲಿ: ‘ಪ್ರಯತ್ನಿಸುವವರು ಎಂದಿಗೂ ಸೋಲುವುದಿಲ್ಲ’ವೆಂಬ ಮಾತಿದೆ. ಇದನ್ನು ನಾವು ನಮ್ಮ ಕಣ್ಣಾರೆ ಎಷ್ಟು ಸಲ ನೋಡಿದ್ದೇವೆಯೋ ಗೊತ್ತಿಲ್ಲ. ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ ಕಲ್ಲು-ಮುಳ್ಳಿನ ಹಾದಿ ಎದುರಾಗುತ್ತದೆ. ಆದರೆ, ನೀವು ಗೆಲ್ಲಲು ನಿಶ್ಚಯಿಸಿದರೆ ಯಾರೂ ನಿಮ್ಮನ್ನು ತಡೆಯಲು ಸಾಧ‍್ಯವಿಲ್ಲ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿದರೆ ಗೆಲುವು ನಿಮ್ಮದಾಗುತ್ತದೆ. ಇದಕ್ಕೆ ಸ್ಪಷ್ಟ ನಿದರ್ಶನವೇ ಈ ವಿಡಿಯೋ.


COMMERCIAL BREAK
SCROLL TO CONTINUE READING

ಗೆಲ್ಲುವ ಉತ್ಸಾಹ ಮೂಡಿಸುವ ಶ್ವಾನದ ಪ್ರಯತ್ನ


ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಎತ್ತರದ ಗೋಡೆ ದಾಟಲು ಶ್ವಾನವೊಂದು ಏನು ಮಾಡುತ್ತೆ ಅನ್ನೋದು ಈ ವಿಡಿಯೋದಲ್ಲಿದೆ. ಈ ವಿಡಿಯೋ ನೋಡಿದ್ರೆ ನಿಮ್ಮ ಧೈರ್ಯ ನೂರುಪಟ್ಟು ಹೆಚ್ಚುತ್ತದೆ. ಶ್ವಾನದ ಸತತ ಪ್ರಯತ್ನವು ನಿಮ್ಮಲ್ಲಿ ಗೆಲ್ಲುವ ಛಲ, ಉತ್ಸಾಹ ಮೂಡಿಸುತ್ತದೆ.


ಇದನ್ನೂ ಓದಿ: Viral News: ಆ್ಯಸಿಡ್ ಸೇವಿಸಿದ ಅನುಭವ, 2 ವರ್ಷಗಳಿಂದ ನೀರು ಕುಡಿದಿಲ್ಲ ಈ ಸುಂದರಿ..!


ವಿಡಿಯೋದಲ್ಲಿ ಏನಿದೆ?


ಈ ವಿಡಿಯೋದಲ್ಲಿ ಕಂಡುಬರುವ ನಾಯಿಯು ಎತ್ತರದ ಗೋಡೆಯನ್ನು ದಾಟಲು ಪ್ರಯತ್ನಿಸುತ್ತಿದೆ. ಗೋಡೆ ಹತ್ತಬೇಕಾದರೆ ಅದು ಅನೇಕ ಬಾರಿ ವೈಫಲ್ಯ ಅನುಭವಿಸುತ್ತದೆ. ಕೆಳಗೆ ಬಿದ್ದರೂ ಸತತ ಪ್ರಯತ್ನ ಮಾಡುವ ಮೂಲಕ ಅದು ಗೋಡೆ ಹತ್ತುವಲ್ಲಿ ಯಶಸ್ವಿಯಾಗುತ್ತದೆ. ನಾಯಿ ಅಂತಿಮವಾಗಿ ಎತ್ತರದ ಗೋಡೆ ದಾಟಿದಾಗ ನಿಮ್ಮ ಮೊಗದಲ್ಲಿ ಸಂತಸ ಮೂಡುತ್ತದೆ. @TansuYegen ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು 10 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಶ್ವಾನದ ಗೆಲುವಿನ ಪ್ರಯತ್ನ ಕಂಡು ನೆಟಿಜನ್‍ಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಜೀವನದಲ್ಲಿ ಪ್ರಯತ್ನ ಮಾಡಿ ಸೋಲುವವರೇ ಹೆಚ್ಚು. ಜೀವನದಲ್ಲಿ ಸಾಧಿಸಬೇಕೆನ್ನುವವರು ಈ ವಿಡಿಯೋವನ್ನು ನೋಡಲೇಬೇಕು. ಈ ವಿಡಿಯೋ ನೋಡಿದ ಬಳಿಕ ನಿಮ್ಲಲ್ಲಿಯೂ ಗೆಲುವಿನ ಉತ್ಸಾಹ ಮೂಡುತ್ತದೆ. ಸತತ ಪ್ರಯತ್ನ ಮಾಡಿ ಗೋಡೆ ಹತ್ತಲು ಯಶಸ್ವಿಯಾದ ಶ್ವಾನಕ್ಕೆ ನಾವು ಹ್ಯಾಟ್ಸ್ ಆಫ್ ಹೇಳಲೇಬೇಕು.


ಇದನ್ನೂ ಓದಿ: Viral Video Today: ಹಾವಿನ ಜೊತೆ ಸುಂದರಿಯ ಚೆಲ್ಲಾಟ, ನಂತರ ನಡೆದಿದ್ದು ಯುವತಿ ಲೈಫಲ್ಲಿ ಮರೆಯಲ್ಲ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.